For Quick Alerts
ALLOW NOTIFICATIONS  
For Daily Alerts

ನಾನು ಊಹಿಸಿದಂತೆ ನಷ್ಟದಲ್ಲಿದೆ ಟಾಟಾ ಇನ್ವೆಸ್ಟ್ ಮೆಂಟ್ಸ್: ಸೈರಸ್ ಮಿಸ್ತ್ರಿ Vs ಟಾಟಾ

|

ನ್ಯಾನೋ, ಟಾಟಾ ಸ್ಟೀಲ್ ಯುರೋಪ್ ಸೇರಿದಂತೆ ನಷ್ಟದಲ್ಲಿ ಇರುವ ಯೋಜನೆ, ಉದ್ಯಮದಲ್ಲಿ ಹೂಡಿಕೆ ಮುಂದುವರಿಸಿರುವ ಬಗ್ಗೆ ಟಾಟಾ ಸನ್ಸ್ ಉಚ್ಚಾಟಿತ ಅಧ್ಯಕ್ಷ ಸೈರಸ್ ಮಿಸ್ತ್ರಿ ಪ್ರಶ್ನೆ ಮಾಡಿದ್ದಾರೆ. ಇವುಗಳಿಂದ 2019ನೇ ಇಸವಿಯಲ್ಲಿ $ 495 ಮಿಲಿಯನ್ (ಭಾರತದ ರುಪಾಯಿಗಳಲ್ಲಿ 3712.5 ಕೋಟಿಗೂ ಹೆಚ್ಚು) ನಷ್ಟವಾಗಿದೆ ಎಂದು ಅವರು ಹೇಳಿದ್ದಾರೆ.

 

ಸದ್ಯಕ್ಕೆ ಮಿಸ್ತ್ರಿ ಅವರು ತಮ್ಮ ಪದಚ್ಯುತಿ ವಿಚಾರವಾಗಿ ಟಾಟಾ ಸನ್ಸ್ ಜತೆ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಆಡಳಿತ ಮಂಡಳಿಯಲ್ಲಿ ಅತಿ ದೊಡ್ಡ ಷೇರುದಾರ ಆಗಿರುವುದು ಟಾಟಾ ಗ್ರೂಪ್. ಅದು ಪ್ರತಿನಿಧಿಸುವ ಪ್ರಮಾಣದ ಬಗ್ಗೆ ಕೂಡ ಪ್ರಶ್ನೆ ಮಾಡಲಾಗಿದೆ. ಶುಕ್ರವಾರದಂದು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ಅಫಿಡವಿಟ್ ನಲ್ಲಿ ಈ ಆರೋಪ ಮಾಡಲಾಗಿದೆ. ಸದ್ಯಕ್ಕೆ ಈ ವಿಚಾರ ನ್ಯಾಯಾಂಗ ವ್ಯಾಪ್ತಿಯಲ್ಲಿದೆ.

ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ವೇತನ ಕಡಿತಕ್ಕೆ ಮುಂದಾದ ಟಾಟಾ ಸಮೂಹಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ವೇತನ ಕಡಿತಕ್ಕೆ ಮುಂದಾದ ಟಾಟಾ ಸಮೂಹ

ಅಂದ ಹಾಗೆ, ಮಿಸ್ತ್ರಿ ಮಾಡುತ್ತಿರುವ ಆರೋಪಗಳು ಸಂಪೂರ್ಣವಾಗಿ ಹೊಸತೇನೂ ಅಲ್ಲ. ಈ ಹಿಂದೆ ಕೆಳ ಹಂತದ ಕೋರ್ಟ್ ಗಳಲ್ಲೂ ಗಮನ ಸೆಳೆಯಲಾಗಿತ್ತು. 2016ರಿಂದ ಎರಡೂ ಕಡೆ ನಡೆಯುತ್ತಿರುವ ಕಾನೂನು ಹೋರಾಟ ಇನ್ನೇನು ಅಂತಿಮ ಹಂತ ತಲುಪುವುದರಲ್ಲಿ ಇದೆ.

ಟಾಟಾ ಟೆಲಿ ಸರ್ವೀಸ್ ಗೆ 60 ಸಾವಿರ ಕೋಟಿ ನಷ್ಟ

ಟಾಟಾ ಟೆಲಿ ಸರ್ವೀಸ್ ಗೆ 60 ಸಾವಿರ ಕೋಟಿ ನಷ್ಟ

2016ರಲ್ಲಿ ಮಿಸ್ತ್ರಿ ಅವರನ್ನು ಪದಚ್ಯುತ ಮಾಡಿದ ವೇಳೆ ಆಡಳಿತ ಮಂಡಳಿಗೆ ಪತ್ರ ಬರೆದಿದ್ದರು. ಆ ಹಿಂದಿನ ಅಧ್ಯಕ್ಷರು (ರತನ್ ಟಾಟಾ) ಮಾಡಿದ ಹೂಡಿಕೆಗಳು ಹೇಗೆ ನಷ್ಟ ತಂದೊಡ್ಡಲಿವೆ ಎಂದು ವಿವರಿಸಿದ್ದರು. ಅದು ಮೂರೂವರೆ ವರ್ಷಗಳ ನಂತರ ನಿಜವಾಗಿದೆ ಎಂದು ಮಿಸ್ತ್ರಿ ಹೇಳಿದ್ದಾರೆ. ಟಾಟಾ ಟೆಲಿ ಸರ್ವೀಸಸ್ ನಿಂದ 60 ಸಾವಿರ ಕೋಟಿ ನಷ್ಟದ ಅಂದಾಜು ಮಾಡಿದ್ದಾರೆ. ಯಾವುದೇ ಉತ್ಪಾದನೆ ಇಲ್ಲದೆ ಟಾಟಾ ನ್ಯಾನೋ ಘಟಕ ಇರುವ ಬಗ್ಗೆ ಹಾಗೂ ನಷ್ಟದ ಹೊರತಾಗಿಯೂ ಟಾಟಾ ಸ್ಟೀಲ್ ಯುರೋಪ್ ಹೂಡಿಕೆ ಬಗ್ಗೆ ಕೂಡ ಮಿಸ್ತ್ರಿ ಕೇಳಿದ್ದಾರೆ. ಮುಂದ್ರಾ ಯೋಜನೆಯಲ್ಲಿ ಇರುವ ಭವಿಷ್ಯದ ಆತಂಕವನ್ನು ಕೂಡ ಹೇಳಿದ್ದಾರೆ.

ಹೆಚ್ಚಿನ ಪರಿಹಾರಕ್ಕೆ ಮನವಿ

ಹೆಚ್ಚಿನ ಪರಿಹಾರಕ್ಕೆ ಮನವಿ

ಡಿಸೆಂಬರ್ ನಲ್ಲಿ ರಾಷ್ಟ್ರೀಯ ಕಂಪೆನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (NCLAT) ಡಿಸೆಂಬರ್ ನಲ್ಲಿ ನೀಡಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್ ನಲ್ಲಿ ಮಿಸ್ತ್ರಿ ಮೇಲ್ಮನವಿ ಸಲ್ಲಿಸಿದ್ದಾರೆ. NCLAT ಆದೇಶ ಪೂರ್ತಿಯಾಗಿ ನ್ಯಾಯ ಒದಗಿಸಿಲ್ಲ. ಆದ್ದರಿಂದ ಹೆಚ್ಚಿನ ಪರಿಹಾರ ಒದಗಿಸಬೇಕು ಎಂದು ಕೇಳಿಕೊಂಡಿದ್ದಾರೆ. ಈ ಪರಿಹಾರದ ಜತೆಗೆ ಹೆಚ್ಚುವರಿಯಾಗಿ ಮಿಸ್ತ್ರಿ ಸಂಸ್ಥೆಗಳು ಕೇಳಿರುವುದೇನು ಅಂದರೆ, ಷೇರು ಪಾಲಿನ ಪ್ರಮಾಣಕ್ಕೆ ಅನುಗುಣವಾಗಿ ಟಾಟಾ ಸನ್ಸ್ ನಲ್ಲಿ ನಿರ್ದೇಶಕ ಸ್ಥಾನಗಳನ್ನು ಕೇಳಲಾಗಿದೆ. ಈ ಪಾರಂಪರಿಕ ಆಸ್ತಿಯಲ್ಲಿನ ನಷ್ಟವನ್ನು ದಾಖಲೆಗಳಲ್ಲಿ ತರಬೇಕು ಎಂದು ಮಿಸ್ತ್ರಿ ಮನವಿ ಮಾಡಿದ್ದಾರೆ.

ನ್ಯಾನೋ ಘಟಕ ಮುಚ್ಚಿಲ್ಲ
 

ನ್ಯಾನೋ ಘಟಕ ಮುಚ್ಚಿಲ್ಲ

ಮಿಸ್ತ್ರಿ ಹೇಳಿರುವ ಪ್ರಕಾರ, ಮುಂದ್ರಾ ಯೋಜನೆಯಲ್ಲಿ 18 ಸಾವಿರ ಕೋಟಿ ರುಪಾಯಿ ಹೂಡಿ, ಆಕ್ರಮಣಕಾರಿಯಾಗಿ ಇದರ ಕೆಲಸಗಳಿಗೆ ರತನ್ ಟಾಟಾ ಚಾಲನೆ ನೀಡಿದರೂ ಯೋಜನೆಗೆ ವೇಗ ಸಿಕ್ಕಿಲ್ಲ. ಟಾಟಾ ಪವರ್ 3550 ಕೋಟಿ ಹೆಚ್ಚುವರಿ ಪ್ರಾವಿಷನ್ ಮಾಡಿದರೂ, ಅದರ ಎಂ.ಡಿ. ಹೇಳುವಂತೆ ದರ ಏರಿಕೆ ಮಾಡಿದರೂ ಆ ಯೋಜನೆಯಲ್ಲಿನ ನಷ್ಟ ಮುಂದುವರಿದಿದೆ. 2017ರ ಮೊದಲ ತ್ರೈ ಮಾಸಿಕದಲ್ಲೇ 6,000 ಕೋಟಿ ನಷ್ಟ ಅನುಭವಿಸಿದರೂ ಟಾಟಾ ನ್ಯಾನೋ ಘಟಕ ಮುಚ್ಚಿಲ್ಲ. ಆ ಘಟಕ ಮುಚ್ಚುವ ಬಗ್ಗೆ 2016ರ ಅಕ್ಟೋಬರ್ ಗೂ ಮುಂಚೆಯೇ ತೀರ್ಮಾನ ಕೈಗೊಂಡರೂ ಭಾವನಾತ್ಮಕ ಕಾರಣಗಳಿಂದಾಗಿ ಆ ನಿರ್ಧಾರವನ್ನು ಜಾರಿಗೆ ತಂದಿಲ್ಲ ಎಂದಿಲ್ಲ ಎಂದು ಮಿಸ್ತ್ರಿ ಹೇಳಿದ್ದಾರೆ.

English summary

My Concerns Over Tata Investments Become Reality: Cyrus Mistry

Tata son's ousted president Cyrus Mistry said in Supreme Court affidavit, my concern over Tata investments become reality.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X