For Quick Alerts
ALLOW NOTIFICATIONS  
For Daily Alerts

ರಾಷ್ಟ್ರೀಯ ಹೆದ್ದಾರಿ ಪ್ರಾಜೆಕ್ಟ್: ನಿತಿನ್ ಗಡ್ಕರಿಯಿಂದ 3ವರ್ಷಕ್ಕೆ ನಿಷೇಧಗೊಂಡ 8 ಸಂಸ್ಥೆಗಳ ಪಟ್ಟಿ

|

ಮುಂದಿನ ಮೂರು ವರ್ಷಗಳ ಅವಧಿಗೆ, ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ ಯಾವುದೇ ಕೆಲಸಗಳಿಗೆ ಬಿಡ್ ಸಲ್ಲಿಸದಂತೆ, ಎಂಟು ಕಂಪೆನಿಗಳಿಗೆ ನಿಷೇಧ ಹೇರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಆದೇಶ ಹೊರಡಿಸಿದೆ.

"ಸತತ ಎಚ್ಚರಿಕೆಯ ನಂತರವೂ ಈ ಸಂಸ್ಥೆಗಳ ಗುಣಮಣ್ಣ ಸುಧಾರಿಸದೇ ಇರುವುದು, ವಹಿಸಿಕೊಂಡ ಕೆಲಸಗಳನ್ನು ಸರಿಯಾದ ಸಮಯದಲ್ಲಿ ಪೂರ್ಣಗೊಳಿಸದೇ ಇದ್ದಿದ್ದರಿಂದ, ಎಂಟು ಕಂಪೆನಿಗಳಿಗೆ ನಿಷೇಧ ಹೇರಲಾಗಿದೆ" ಎಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಫಾಸ್ಟ್‌ಟ್ಯಾಗ್ ಸ್ಕ್ಯಾನರ್ ಕೆಟ್ಟಿದ್ದರೆ ಟೋಲ್‌ನಲ್ಲಿ ಫ್ರೀ ಎಂಟ್ರಿಫಾಸ್ಟ್‌ಟ್ಯಾಗ್ ಸ್ಕ್ಯಾನರ್ ಕೆಟ್ಟಿದ್ದರೆ ಟೋಲ್‌ನಲ್ಲಿ ಫ್ರೀ ಎಂಟ್ರಿ

"ಹಿಂದಿನ ಎಲ್ಲಾ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲನೆ ಮಾಡಿ ಎಂಟು ಸಂಸ್ಥೆಗಳು/ಗುತ್ತಿಗೆದಾರರನ್ನು ಮೂರು ವರ್ಷದ ಅವಧಿಗೆ ಯಾವುದೇ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಬಿಡ್ ನಲ್ಲಿ ಭಾಗವಹಿಸದಂತೆ ನಿಷೇಧ ಹೇರಲಾಗಿದೆ' ಎಂದು ಕೇಂದ್ರ ಸಚಿವರು ಹೇಳಿದ್ದಾರೆ.

3 ತಿಂಗಳಲ್ಲಿ ವಸೂಲಾಯಿತು 577.5 ಕೋಟಿ ಸಂಚಾರ ದಂಡ; ಇದು ಫೈನಲ್ ಅಲ್ಲ!3 ತಿಂಗಳಲ್ಲಿ ವಸೂಲಾಯಿತು 577.5 ಕೋಟಿ ಸಂಚಾರ ದಂಡ; ಇದು ಫೈನಲ್ ಅಲ್ಲ!

"ಶೋಕಾಸ್ ನೋಟಿಸ್ ನೀಡಿ, ವಹಿಸಿಕೊಂಡ ಕೆಲಸಗಳನ್ನು ಪೂರ್ಣಗೊಳಿಸಲು ಅವರಿಗೆ ಕಾಲಾವಕಾಶ ನೀಡಲಾಗಿತ್ತು. ಆದರೂ, ಅವರಿಂದ ಯಾವುದೇ ಪ್ರತಿಕ್ರಿಯೆ ಬರದ ಹಿನ್ನಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ" ಎಂದು ಸಚಿವರು ಹೇಳಿದ್ದಾರೆ.

ಎಂಟು ಗುತ್ತಿಗೆದಾರರನ್ನು ಬ್ಲ್ಯಾಕ್ ಲಿಸ್ಟ್

ಎಂಟು ಗುತ್ತಿಗೆದಾರರನ್ನು ಬ್ಲ್ಯಾಕ್ ಲಿಸ್ಟ್

"ಮೂರು ವರ್ಷಕ್ಕೆ ಎಂಟು ಗುತ್ತಿಗೆದಾರರನ್ನು ಬ್ಲ್ಯಾಕ್ ಲಿಸ್ಟ್ ಮಾಡಲಾಗಿದೆ. ಇದು ಮೊದಲ ಪಟ್ಟಿ, ಮುಂದಿನ ದಿನಗಳಲ್ಲಿ ಉದ್ದೇಶಪೂರ್ವಕವಾಗಿ ಸುಸ್ಥಿದಾರರಾಗುತ್ತಿರುವ ಸಂಸ್ಥೆಗಳಿಗೆ ನಿಷೇಧ ಹೇರಲಾಗುವುದು" ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳೊಬ್ಬರು ಹೇಳಿದ್ದಾರೆ.

ಬೋನಸ್ ಕೂಡಾ ಘೋಷಿಸಲಾಗುವುದು

ಬೋನಸ್ ಕೂಡಾ ಘೋಷಿಸಲಾಗುವುದು

"ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಹೆದ್ದಾರಿ ಕಾಮಗಾರಿಗಳನ್ನು ಮುಗಿಸಿದರೆ, ಅಂತಹ ಸಂಸ್ಥೆಗಳಿಗೆ, ಮುಂದಿನ ಪ್ರಾಜೆಕ್ಟ್ ಗಳಿಗೆ ಆದ್ಯತೆ ನೀಡಲಾಗುವುದು ಮತ್ತು ಬೋನಸ್ ಕೂಡಾ ಘೋಷಿಸಲಾಗುವುದು" ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬ್ಯಾನ್ ಗೊಂಡ ಎಂಟು ಸಂಸ್ಥೆಗಳು/ಗುತ್ತಿಗೆದಾರರ ಪಟ್ಟಿ. ಮುಂದಿನ ಸ್ಲೈಡಿನಲ್ಲಿ:

ನಿಷೇಧಗೊಂಡ 8 ಸಂಸ್ಥೆಗಳ ಪಟ್ಟಿ - 1

ನಿಷೇಧಗೊಂಡ 8 ಸಂಸ್ಥೆಗಳ ಪಟ್ಟಿ - 1

ರಾಷ್ಟ್ರೀಯ ಹೆದ್ದಾರಿ ಪ್ರಾಜೆಕ್ಟ್ ನಿಂದ ನಿಷೇಧಗೊಂಡ 8 ಸಂಸ್ಥೆಗಳ ಪಟ್ಟಿ - 1
1. ಎಸ್ ಆರ್ ಇ ಐ ಇನ್ಫ್ರಾಸ್ಟ್ರಕ್ಚರ್ ಫೈನಾನ್ಸ್
2. ಟ್ರಾನ್ಸ್ ಸ್ಟ್ರಾಯ್ ಇಂಡಿಯಾ
3. ಮಧುಕಾನ್ ಪ್ರಾಜೆಕ್ಟ್ಸ್
4. ಮಧುಕಾನ್ ಗ್ರಾನೈಟ್ಸ್

ಪ್ರಾಜೆಕ್ಟ್ ನಿಂದ ನಿಷೇಧಗೊಂಡ 8 ಸಂಸ್ಥೆಗಳ ಪಟ್ಟಿ - 2

ಪ್ರಾಜೆಕ್ಟ್ ನಿಂದ ನಿಷೇಧಗೊಂಡ 8 ಸಂಸ್ಥೆಗಳ ಪಟ್ಟಿ - 2

ರಾಷ್ಟ್ರೀಯ ಹೆದ್ದಾರಿ ಪ್ರಾಜೆಕ್ಟ್ ನಿಂದ ನಿಷೇಧಗೊಂಡ 8 ಸಂಸ್ಥೆಗಳ ಪಟ್ಟಿ - 2
5. ಒಜೆಎಸ್ಸಿ ಮಾಸ್ಕೋ
6. ಗುಜರಾತ್ ಕನ್ಸ್ಟ್ರಕ್ಷನ್ ಕಂಪೆನಿ
7. ಜಾನ್ಸನ್ ಎಂಟರ್ಪ್ರೈಸಸ್
8. ಪ್ರತಿಭಾ ಕನ್ಸ್ಟ್ರಕ್ಷನ್ ಇಂಜಿನಿಯರ್ಸ್

English summary

National Highway Authority Of India Bans 8 Developers From Bid For Next 3 Years

National Highway Authority Of India (NHAI) Bans 8 Developers From Bid For Next 3 Years.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X