For Quick Alerts
ALLOW NOTIFICATIONS  
For Daily Alerts

ಉಡುಪು, ಪಾದರಕ್ಷೆ ಜಿಎಸ್‌ಟಿ ಶೇ. 12 ಕ್ಕೆ ಏರಿಕೆ: ವ್ಯಾಪಾರಸ್ಥರು ಗರಂ

|

ಸಿದ್ಧ ಉಡುಪುಗಳು, ಜವಳಿಗಳು ಹಾಗೂ ಪಾದರಕ್ಷೆಗಳ ಮೇಲಿನ ಸರಕು ಹಾಗೂ ಸೇವೆ ತೆರಿಗೆಯನ್ನು (ಜಿಎಸ್‌ಟಿ) ಕೇಂದ್ರ ಸರ್ಕಾರವು ಶೇಕಡ 5 ರಿಂದ ಶೇಕಡ 12 ಕ್ಕೆ ಏರಿಕೆ ಮಾಡಿದೆ. ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿಯು (ಸಿಬಿಐಸಿ) ನವೆಂಬರ್‌ 18 ರಂದು ಈ ಸೂಚನೆಯನ್ನು ನೀಡಿದ್ದು ಉಡುಪುಗಳ ಮೇಲಿನ ಸರಕು ಹಾಗೂ ಸೇವೆ ತೆರಿಗೆಯು 2022 ರ ಜನವರಿ ತಿಂಗಳಿನಿಂದ ಶೇಕಡ 5 ರಿಂದ ಶೇಕಡ 12 ಕ್ಕೆ ಏರಿಕೆ ಆಗಲಿದೆ. ಈ ನಿಟ್ಟಿನಲ್ಲಿ ವ್ಯಾಪಾರಸ್ಥರು ಕೇಂದ್ರ ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ.

 

ಈ ಬಗ್ಗೆ ಮಾತನಾಡಿರುವ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ), "ಸರ್ಕಾರವು ಜಿಎಸ್‌ಟಿ ತೆರಿಗೆ ವ್ಯವಸ್ಥೆಯನ್ನು ಸರಳ ಮಾಡುವ ಬದಲಾಗಿ ಅದನ್ನು ಇನ್ನಷ್ಟೇ ಕಠಿಣ ಮಾಡುತ್ತಿದೆ," ಎಂದು ಹೇಳಿದೆ. ಸಿಎಐಟಿ ರಾಷ್ಟ್ರೀಯ ಅಧ್ಯಕ್ಷ ಬಿ ಸಿ ಬಾರ್ತಿಯಾ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್, "ಹತ್ತಿ ಜವಳಿ ಉದ್ಯಮದಲ್ಲಿ ಯಾವುದೇ ಕಠಿಣ ತೆರಿಗೆ ರಚನೆ ಇರಲಿಲ್ಲ. ಹಾಗಿರುವಾಗ ಜವಳಿ ಮೇಲೆ ಜಿಎಸ್‌ಟಿಯನ್ನು ಶೇಕಡ 12 ಕ್ಕೆ ಏಕೆ ಏರಿಕೆ ಮಾಡಲಾಗಿದೆ," ಎಂದು ಪ್ರಶ್ನಿಸಿದ್ದಾರೆ.

 

ಉಡುಪು, ಪಾದರಕ್ಷೆಗಳು ಇನ್ನು ದುಬಾರಿ: ಜಿಎಸ್‌ಟಿ ಶೇ.5 ರಿಂದ 12 ಕ್ಕೆ ಏರಿಕೆ!ಉಡುಪು, ಪಾದರಕ್ಷೆಗಳು ಇನ್ನು ದುಬಾರಿ: ಜಿಎಸ್‌ಟಿ ಶೇ.5 ರಿಂದ 12 ಕ್ಕೆ ಏರಿಕೆ!

"ಇನ್ನು ಮಾನವ ನಿರ್ಮಿತ ಜವಳಿ ಉದ್ಯಮದ ತೆರಿಗೆ ವ್ಯವಸ್ಥೆಯಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಹಾಗಿರುವಾಗ ಜವಳಿ ಉದ್ಯಮದ ಹಂತಗಳ ಬಗ್ಗೆ ಯಾವುದೇ ತಿಳುವಳಿಕೆಗಳು ಇಲ್ಲದೆಯೇ ಈ ರೀತಿಯ ಕಠಿಣ ನಿರ್ಧಾರವನ್ನು ಕೈಗೊಳ್ಳುವುದು ಸರಿಯಲ್ಲ," ಎಂದು ಹೇಳಿದ್ದಾರೆ. ಹಾಗೆಯೇ ಸರ್ಕಾರವು ಈ ನಿರ್ಧಾರವನ್ನು ಹಿಂಪಡೆಯದಿದ್ದರೆ ರಾಷ್ಟ್ರವ್ಯಾಪ್ತಿ ಪ್ರತಿಭಟನೆ ನಡೆಸಲಾಗುವುದು ಎಂದು ಕೂಡಾ ತಿಳಿಸಿದರು.

ಉಡುಪು ಜಿಎಸ್‌ಟಿ ಶೇ. 12 ಕ್ಕೆ ಏರಿಕೆ: ವ್ಯಾಪಾರಸ್ಥರು ಗರಂ

ಮೂಲಭೂತವಾದ ರೊಟ್ಟಿ, ಬಟ್ಟೆ ಹಾಗೂ ಮನೆಗೆ ದುಬಾರಿ!

"ರೊಟ್ಟಿ, ಬಟ್ಟೆ ಹಾಗೂ ಮನೆ ಜೀವನದ ಮೂರು ಮೂಲಭೂತ ವಿಷಯಗಳು. ಬೆಲೆ ಏರಿಕೆಯ ಪರಿಣಾಮದಿಂದಾಗಿ ಈಗಾಗಲೇ ಆಹಾರದ ಬೆಲೆಯು ಏರಿಕೆ ಆಗಿದೆ. ಮನೆ ಖರೀದಿಯು ಸಾಮಾನ್ಯ ಜನರಿಗೆ ಸಾಧ್ಯವಿಲ್ಲ. ಈಗ ಬಟ್ಟೆಯನ್ನು ಕೂಡಾ ಖರೀದಿಸಲು ಸಾಧ್ಯವಾಗದಂತೆ ಜಿಎಸ್‌ಟಿ ಕೌನ್ಸಿಲ್‌ ಮಾಡಿದೆ," ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ದೇಶದ ಜನರನ್ನು ಈ ಸರ್ಕಾರಗಳು ಯಾವ ರೀತಿಯಿಂದ ನೋಡಿಕೊಳ್ಳುತ್ತಿದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಮಾತ್ರವಲ್ಲ, ರಾಜ್ಯ ಸರ್ಕಾರಗಳು ಕೂಡಾ ತಪ್ಪಿತಸ್ಥರು ಆಗಿದ್ದಾರೆ. ಯಾಕೆಂದರೆ ಈ ನಿರ್ಧಾರವನ್ನು ಜಿಎಸ್‌ಟಿ ಕೌನ್ಸಿಲ್‌ನಲ್ಲಿ ಸರ್ವಾನುಮತದಿಂದ ತೆಗೆದುಕೊಳ್ಳಲಾಗಿದೆ," ಎಂದು ದೂರಿದ್ದಾರೆ.

ಉಡುಪು ಜಿಎಸ್‌ಟಿ ಶೇ. 12 ಕ್ಕೆ ಏರಿಕೆ: ವ್ಯಾಪಾರಸ್ಥರು ಗರಂ

ಕೂಡಲೇ ಜಿಎಸ್‌ಟಿ ಇಳಿಕೆ ಮಾಡಲು ಆಗ್ರಹ

ಇನ್ನು ಕೂಡಲೇ ಸಿದ್ಧ ಉಡುಪುಗಳು, ಜವಳಿಗಳು ಹಾಗೂ ಪಾದರಕ್ಷೆಗಳ ಮೇಲಿನ ಜಿಎಸ್‌ಟಿಯನ್ನು ಇಳಿಕೆ ಮಾಡುವಂತೆ ಸರ್ಕಾರಕ್ಕೆ ಸಿಎಐಟಿ ಆಗ್ರಹ ಮಾಡಿದೆ. "ಕೊರೊನಾವೈರಸ್‌ ಸೋಂಕು ಕಾರಣದಿಂದಾಗಿ ದೇಶದಲ್ಲಿ ಚಿಲ್ಲರೆ ವ್ಯಾಪಾರವು ಬಿಕ್ಕಟ್ಟಿಗೆ ಸಿಲುಕಿದೆ. ಈಗ ಚಿಲ್ಲರೆ ವ್ಯಾಪಾರ ಕೊಂಚ ಸುಧಾರಿಸಿಕೊಳ್ಳುತ್ತಿದೆ. ಆದರೆ ಸರ್ಕಾರ ಈಗ ಜಿಎಸ್‌ಟಿ ಏರಿಕೆ ಮಾಡಿ ವ್ಯಾಪಾರಕ್ಕೆ ತೊಂದರೆ ಉಂಟು ಮಾಡಿದೆ," ಎಂದು ಹೇಳಿದ್ದಾರೆ.

ಯಾವುದೇ ಮೌಲ್ಯದ ಬಟ್ಟೆಗಳ ಮೇಲೆ ಇನ್ನು ಮುಂದೆ ಶೇಕಡ 5 ರ ಬದಲಾಗಿ ಶೇಕಡ 12 ಜಿಎಸ್‌ಟಿ ಇರಲಿದೆ. ಈ ಹಿಂದೆ 1,000 ರೂಪಾಯಿಗಿಂತ ಅಧಿಕ ಬೆಲೆಯ ಬಟ್ಟೆಯ ತುಂಡುಗಳಿಗೆ ಶೇಕಡ 5 ರಷ್ಟು ಜಿಎಸ್‌ಟಿ ಅನ್ನು ಹಾಕಲಾಗುತ್ತಿತ್ತು. ಇನ್ನು ನೇಯ್ದ ಬಟ್ಟೆಗಳು, ಸಿಂಥೆಟಿಕ್ ನೂಲು, ಪೈಲ್ ಬಟ್ಟೆಗಳು, ಹೊದಿಕೆಗಳು, ಡೇರೆಗಳು, ಮೇಜುಬಟ್ಟೆಗಳು ಅಥವಾ ಸರ್ವಿಯೆಟ್‌ಗಳು, ರಗ್ಗುಗಳು ಮತ್ತು ಟೇಪ್‌ಸ್ಟ್ರಿಗಳಂತಹ ಪರಿಕರಗಳು ಸೇರಿದಂತೆ ಎಲ್ಲಾ ಬಟ್ಟೆಗಳ ಮೇಲಿನ ಜಿಎಸ್‌ಟಿ ಶೇಕಡ 5 ರಿಂದ ಶೇಕಡ 12 ಕ್ಕೆ ಏರಿಕೆ ಆಗಲಿದೆ. ಇನ್ನು ಯಾವುದೇ ಬೆಲೆಯ ಚಪ್ಪಲಿಗಳ ಮೇಲಿನ ಜಿಎಸ್‌ಟಿಯನ್ನು ಕೂಡಾ ಶೇಕಡ 5 ರಿಂದ ಶೇಕಡ 12 ಕ್ಕೆ ಏರಿಕೆ ಮಾಡಲಾಗಿದೆ.

ಇನ್ನು ಈ ಬಗ್ಗೆ ಮಾತನಾಡಿದ್ದ ಸಿಎಂಎಐನ ಅಧ್ಯಕ್ಷ ರಾಜೇಶ್‌ ಮಸಂದ್‌, "ಈ ರೀತಿಯಾಗಿ ಜಿಎಸ್‌ಟಿಯನ್ನು ಏರಿಕೆ ಮಾಡಬಾರದು ಎಂದು ಭಾರತದಾದ್ಯಂತ ಸಂಘಗಳು ಮತ್ತು ವ್ಯಾಪಾರ ಸಂಸ್ಥೆಗಳು ಸರ್ಕಾರ ಹಾಗೂ ಜಿಎಸ್‌ಟಿ ಕೌನ್ಸಿಲ್‌ಗೆ ಆಗ್ರಹ ಮಾಡುತ್ತದೆ. ಸರ್ಕಾರ ಹಾಗೂ ಕೌನ್ಸಿಲ್‌ ನಮ್ಮ ಸಂಘಗಳು ಮತ್ತು ವ್ಯಾಪಾರ ಸಂಸ್ಥೆಗಳ ಮನವಿಗೆ ಕಿವಿಗೊಡದೆ ಇರುವುದು ನಿಜಕ್ಕೂ ಅತ್ಯಂತ ನಿರಾಶಾದಾಯಕ ಆಗಿದೆ," ಎಂದು ತಿಳಿಸಿದ್ದರು.

English summary

Nationwide protest planned against 12% GST on Textiles, Footwear

Traders up in arms against 12% GST on Textiles, Footwear, planned Nationwide protest.
Story first published: Thursday, November 25, 2021, 21:04 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X