For Quick Alerts
ALLOW NOTIFICATIONS  
For Daily Alerts

ಬಹುಕೋಟಿ ಹಗರಣಗಳ ಆರೋಪಿ ನೀರವ್‌ ಮೋದಿಯ ಈ ವಸ್ತುಗಳು ಕೋಟಿ ಬೆಲೆಗೆ ಹರಾಜಾಯ್ತು!

|

ಸುಮಾರು 2 ಬಿಲಿಯನ್‌ ಅಮೆರಿಕನ್ ಡಾಲರ್‌ನಷ್ಟು ಪಂಜಾಬ್‌ ನ್ಯಾಷ್‌ನಲ್‌ ಬ್ಯಾಂಕ್‌ಗೆ ಪಂಗನಾಮ ದೇಶ ಬಿಟ್ಟು ಓಡಿಹೋಗಿದ್ದ ನೀರವ್ ಮೋದಿ ಇನ್ನೇನು ಗಡಿಪಾರು ಸನ್ನಿಹಿತವಾಗುತ್ತಿದೆ. ಈ ವೇಳೆ ಆತನಿಗೆ ಸೇರಿದ ವಸ್ತುಗಳನ್ನು ಜಾರಿ ನಿರ್ದೇಶನಾಲಯ ಇಡಿ ಹರಾಜು ಮಾಡಿದೆ.

 

ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ವಜ್ರದ ವ್ಯಾಪಾರಿ ನೀರವ್‌ ಮೋದಿ ಜಾಮೀನು ಅರ್ಜಿಯನ್ನು ಇಂಗ್ಲೆಂಡ್ ನ್ಯಾಯಾಲಯ ಐದನೇ ಬಾರಿಗೆ ವಜಾಗೊಳಿಸಿದೆ. ಕಳೆದ ಮಾರ್ಚ್‌ನಲ್ಲಿ ಬಂಧನಕ್ಕೊಳಗಾದ ನಂತರ ಆಗ್ನೇಯ ಲಂಡನ್‌ನ ವಾಂಡ್ಸ್‌ವರ್ತ್ ಜೈಲಿನಲ್ಲಿರುವ ನೀರವ್ ಮೋದಿ ಅವರ ಭಾರತ ಹಸ್ತಾಂತರ ಕುರಿತಾದ ವಿಚಾರಣೆ ಮೇ 11 ಮತ್ತು 15 ರ ನಡುವೆ ನಿಗದಿಯಾಗಿದೆ.

ನೀರವ್ ಮೋದಿಯ 72 ವಸ್ತುಗಳನ್ನು ಆನ್‌ಲೈನ್ ಮೂಲಕ ಹರಾಜು ಮಾಡಲಾಗಿದೆ. ಈ ಹರಾಜಿನಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾದ ವಸ್ತುಗಳು ಇಲ್ಲಿವೆ.

ಕ್ರ್ಯಾಶ್ ವ್ರಿಸ್ಟ್‌ವಾಚ್

ಕ್ರ್ಯಾಶ್ ವ್ರಿಸ್ಟ್‌ವಾಚ್

ಹರಾಜಾದ ಬೆಲೆ: 36.40 ಲಕ್ಷ ರುಪಾಯಿ

ಅಪರೂಪದ 18 ಕ್ಯಾರೆಟ್ ಚಿನ್ನದ ಅಸಮ್ಮಿತ ಡಯಲ್ ಹಾಗೂ 17 ಆಭರಣಗಳೊಂದಿಗೆ ತಯಾರಾದ ವಾಚ್ ಇದಾಗಿದ್ದು, 36.40 ಲಕ್ಷ ರುಪಾಯಿ ಬೆಲೆಗೆ ಹರಾಜಾಗಿದೆ.

ಪೋರ್ಷೆ ಪನಾಮೆರಾ

ಪೋರ್ಷೆ ಪನಾಮೆರಾ

ಹರಾಜಾದ ಬೆಲೆ: 36.06 ಲಕ್ಷ ರುಪಾಯಿ

ಲಕ್ಸುರಿ ಕಾರುಗಳಲ್ಲಿ ಒಂದಾದ ಪೋರ್ಷೆ ಪನಾಮೆರಾ ಕೂಡ ನೀರವ್ ಮೋದಿಯ ಆಸ್ತಿಗಳಲ್ಲಿ ಒಂದು. ಈ ಕಾರು 36.06 ಲಕ್ಷ ರುಪಾಯಿಗೆ ಹರಾಜಾಗಿದೆ.

ವಿಯೆನಿ ಹ್ಯಾಲ್ಟರ್ ಮತ್ತು ಗೋಲ್ಡ್ಫೀಲ್

ವಿಯೆನಿ ಹ್ಯಾಲ್ಟರ್ ಮತ್ತು ಗೋಲ್ಡ್ಫೀಲ್

ಹರಾಜಾದ ಬೆಲೆ: 12.93 ಲಕ್ಷ ರುಪಾಯಿ

18 ಕ್ಯಾರೆಟ್ ಚಿನ್ನದ ಬಿಳಿ ಕೈಗಡಿಯಾರವು ಅತ್ಯಂತ ನಿಖರವಾಗಿ ತಯಾರಿಸಿದ ದುಬಾರಿ ಬೆಲೆಯ ವಾಚ್ ಇದಾಗಿದೆ. ಈ ವಾಚ್‌ನ 12.93 ಲಕ್ಷ ರುಪಾಯಿಗೆ ಹರಾಜಾಗಿದೆ.

ಲೂಯಿಸ್ ವಿಟಾನ್
 

ಲೂಯಿಸ್ ವಿಟಾನ್

ಲೂಯಿಸ್ ವಿಟಾನ್ ಎಂಬ ಈ ದುಬಾರಿ ವಾಚು 8.62 ಲಕ್ಷ ರುಪಾಯಿಗೆ ಹರಾಜಾಗಿದೆ. ಲೂಯಿ ವಿಟಾನ್ ವಿಶ್ವದ ಪ್ರಮುಖ ಅಂತರರಾಷ್ಟ್ರೀಯ ಫ್ಯಾಷನ್ ಮನೆಗಳಲ್ಲಿ ಒಂದಾಗಿದೆ. ಇದು ಪೇಟೆಂಟ್ ಮೊನೊಗ್ರಾಮ್ ಕ್ಯಾನ್ವಾಸ್ ಸಹಿಯೊಂದಿಗೆ ಸ್ಟ್ಯಾಕ್ ಮಾಡಬಹುದಾದ ವಸ್ತುವಾಗಿದೆ.

ಮಾರ್ಚ್ 3ರಿಂದ 5ನೇ ತಾರೀಕಿನ ಮಧ್ಯೆ ನೀರವ್ ಮೋದಿಗೆ ಸೇರಿದ 112 ಆಸ್ತಿಗಳನ್ನು ನೇರ ಹಾಗೂ ಆನ್ ಲೈನ್ ಹರಾಜು ಹಾಕಲಾಗಿತ್ತು. 3-4ನೇ ತಾರೀಕು ನಡೆದ ಹರಾಜಿನಲ್ಲಿ 2.04 ಕೋಟಿ ರುಪಾಯಿ ಸಂಗ್ರಹವಾಗಿತ್ತು. ಆಗ 52 ಲಕ್ಷ ರುಪಾಯಿ ಸಂಗ್ರಹ ಆಗಬಹುದು ಎಂಬ ನಿರೀಕ್ಷೆ ಇತ್ತು. ಗುರುವಾರದ ಹರಾಜಿನಲ್ಲಿ 51.41 ಕೋಟಿ ಸಂಗ್ರಹ ಆಗಿದೆ.

English summary

Nirav Modi Items Sold At A Record Price

These are the nirav modi items sold at a record price. Here are a few items from the auction
Story first published: Friday, March 6, 2020, 19:30 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X