ಎಲ್ ಪಿಜಿ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಏರಿಕೆ

ಎಲ್ ಪಿಜಿ ಅಡುಗೆ ಅನಿಲ ಸಿಲಿಂಡರ್ ಬೆಲೆ ಜೂನ್ 1, 2020ರಿಂದ ಅನ್ವಯ ಆಗುವಂತೆ ಏರಿಕೆ ಆಗಿದೆ. ಸಬ್ಸಿಡಿ ರಹಿತವಾದ ಎಲ್ ಪಿಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ 11.50 ರುಪಾಯಿ ಏರಿಕೆ ಆಗಿದೆ. ಜೂನ್, 2020ಕ್ಕೆ ಎಲ್ ಪಿಜಿಯ ಅಂತರರಾಷ್ಟ್ರೀಯ ಬೆಲೆಯಲ್ಲಿ ಏರಿಕೆ ಆಗಿದೆ. ಹಾಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಹೆಚ್ಚಿರುವುದರಿಂದ ಚಿಲ್ಲರೆ ಮಾರಾಟ ದರದಲ್ಲೂ ಏರಿಕೆ ಆಗಿದೆ ಎಂದು ಐಒಸಿ ತಿಳಿಸಿದೆ.

ಎಲ್ ಪಿಜಿ ಗ್ಯಾಸ್ ದರವು ತಿಂಗಳಿಗೊಮ್ಮೆ ಪರಿಷ್ಕರಣೆ ಆಗುತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಂಚ್ ಮಾರ್ಕ್ ದರ, ಯು.ಎಸ್. ಡಾಲರ್ ವಿರುದ್ಧದ ರುಪಾಯಿ ಮೌಲ್ಯ ಈ ಎಲ್ಲ ಅಂಶಗಳ ಆಧಾರದಲ್ಲಿ ದರ ನಿರ್ಧಾರ ಆಗುತ್ತದೆ. ಕೊರೊನಾ ನಿಯಂತ್ರಣಕ್ಕೆ ತರಬೇಕು ಎಂಬ ಕಾರಣಕ್ಕೆ ಭಾರತದಲ್ಲಿ ಲಾಕ್ ಡೌನ್ ಘೋಷಣೆ ಆದ ಮೇಲೆ ಎಲ್ ಪಿಜಿ ಅಡುಗೆ ಅನಿಲ ಸಿಲಿಂಡರ್ ಬೇಡಿಕೆ ಹೆಚ್ಚಾಗಿತ್ತು.

ಎಲ್ ಪಿಜಿ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಏರಿಕೆ

ಕಳೆದ ತಿಂಗಳು, ಅಂದರೆ ಮೇ ತಿಂಗಳಲ್ಲಿ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಭಾರೀ ಇಳಿಕೆ ಆಗಿತ್ತು. ಪ್ರತಿ ಸಿಲಿಂಡರ್ ಬೆಲೆ 744 ರುಪಾಯಿ ಇದ್ದದ್ದು, 581.5 ರುಪಾಯಿಗೆ ಇಳಿಕೆ ಕಂಡಿತು. ಇದು ದೆಹಲಿಯಲ್ಲಿ ಇದ್ದ ಬೆಲೆ. ಒಟ್ಟಾರೆ 150 ರುಪಾಯಿಗೂ ಹೆಚ್ಚು ಒಂದೇ ಸಲಕ್ಕೆ ಇಳಿಕೆ ಆಗಿತ್ತು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+