For Quick Alerts
ALLOW NOTIFICATIONS  
For Daily Alerts

PM- CARES ಫಂಡ್ ಗೆ 26 ಕೋಟಿ ರುಪಾಯಿ ದೇಣಿಗೆ ನೀಡಿದ NSE

|

ಕೊರೊನಾ ವಿರುದ್ಧ ಹೋರಾಟಕ್ಕೆ ಪ್ರಮುಖ ಸ್ಟಾಕ್ ಎಕ್ಸ್ ಚೇಂಜ್ NSEಯಿಂದ PM- CARES ಫಂಡ್ ಗೆ 26 ಕೋಟಿ ರುಪಾಯಿ ದೇಣಿಗೆ ನೀಡಲಾಗಿದೆ ಎಂದು ಸೋಮವಾರ ತಿಳಿಸಲಾಗಿದೆ. ಇದರ ಜತೆಗೆ ಕೆಲವು ರಾಜ್ಯ ಸರ್ಕಾರಗಳಿಗೂ ದೇಣಿಗೆ ನೀಡಿರುವ ಬಗ್ಗೆ ಮಾಹಿತಿ ನೀಡಲಾಗಿದೆ. ಇದೇ ಉದ್ದೇಶಕ್ಕಾಗಿ NSE ಉದ್ಯೋಗಿಗಳ ಗುಂಪು PM- CARES ಫಂಡ್ ಗೆ ಪ್ರತ್ಯೇಕವಾಗಿ ತಮ್ಮ ಒಂದು ದಿನದ ವೇತನವನ್ನು ನೀಡಿದ್ದಾರೆ.

ಕೊರೊನಾ ಗಂಟುಮೂಟೆ ಕಟ್ಟಿದ ಮೇಲೆ...ಕೊರೊನಾ ಗಂಟುಮೂಟೆ ಕಟ್ಟಿದ ಮೇಲೆ..."ದುಡ್ಡಿನ ವಿಚಾರದಲ್ಲಿ ಹೇಗಿರಬೇಕು?"

PM- CARES ಫಂಡ್ ಅನ್ನು ಮಾರ್ಚ್ 28ನೇ ತಾರೀಕಿನಂದು ಆರಂಭಿಸಲಾಗಿತ್ತು. ಕೊರೊನಾ ವಿರುದ್ಧ ಹೋರಾಟಕ್ಕೆ ಮತ್ತು ಜನರಿಗೆ ಪರಿಹಾರ ನೀಡುವ ಉದ್ದೇಶದಿಂದ ಈ ನಿಧಿಯನ್ನು ಸ್ಥಾಪಿಸಲಾಗಿದೆ. ರಾಜಕೀಯ ನಾಯಕರು, ಕಾರ್ಪೊರೇಟ್ ಸಂಸ್ಥೆಗಳು, ರಕ್ಷಣಾ ಅಧಿಕಾರಿಗಳು, ಸಾರ್ವಜನಿಕ ಸಂಸ್ಥೆಯ ಸಿಬ್ಬಂದಿ ಹಾಗೂ ಬಾಲಿವುಡ್ ನ ಸೆಲೆಬ್ರಿಟಿಗಳು ಈ ಫಂಡ್ ಗೆ ದೇಣಿಗೆ ನೀಡಿದ್ದಾರೆ.

PM- CARES ಫಂಡ್ ಗೆ 26 ಕೋಟಿ ರುಪಾಯಿ ದೇಣಿಗೆ ನೀಡಿದ NSE

ಭಾರತದಲ್ಲಿ ಕೊರೊನಾಗೆ ಈ ತನಕ 308 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 9152 ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಮಾಹಿತಿಯನ್ನು ನೀಡಿದೆ. ಇನ್ನು ವಿಶ್ವದಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆಯು ಹದಿನೆಂಟು ಲಕ್ಷವನ್ನು ದಾಟಿದೆ.

English summary

NSE Contributed 26 Crores To PM CARES Fund

Leading stock exchange NSE contributed 26 crores to PM CARES fund.
Story first published: Monday, April 13, 2020, 15:02 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X