For Quick Alerts
ALLOW NOTIFICATIONS  
For Daily Alerts

ತಮಿಳುನಾಡಿನಲ್ಲಿ ತಲೆ ಎತ್ತಿದ ಮತ್ತೊಂದು ಬೃಹತ್ ಐಟಿ ಪಾರ್ಕ್

|

ಚೆನ್ನೈ: ಐಟಿ ಕ್ಷೇತ್ರದಲ್ಲಿ ಉದ್ಯೋಗಗಳನ್ನು ಹೆಚ್ಚಿಸುವ ದೃಷ್ಟಿಯಿಂದ ತಮಿಳುನಾಡಿನಲ್ಲಿ ಮತ್ತೊಂದು ಟೈಡೆಲ್‌ನ (ತಮಿಳುನಾಡು ಮಾಹಿತಿ ತಂತ್ರಜ್ಞಾನ ಪಾರ್ಕ್) ಬೃಹತ್ ಐಟಿ ಪಾರ್ಕ್ ತಲೆ ಎತ್ತಲಿದೆ ಎಂದು ಅಲ್ಲಿನ ರಾಜ್ಯ ಸರ್ಕಾರ ಸೋಮವಾರ ತಿಳಿಸಿದೆ.

ಚೆನ್ನೈನ ಪಟ್ಟಾಬಿರಾಮ್‌ನಲ್ಲಿ ಸುಮಾರು 235 ಕೋಟಿ ವೆಚ್ಚದಲ್ಲಿ ಟೈಡೆಲ್ ಐಟಿ ಪಾರ್ಕ್ ನಿರ್ಮಾಣಗೊಳ್ಳಲಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಕೆ ಪಳನಿಸ್ವಾಮಿ ತಿಳಿಸಿದ್ದಾರೆ. ಅವರು ಸೋಮವಾರ ಸಚಿವಾಲಯದಲ್ಲಿ ನಡೆದ ವಿಡಿಯೋ ಕಾನ್ಫರೆನ್ಸ್ ಮೂಲಕ ಟೆಡೆಲ್ ಐಟಿ ಪಾರ್ಕ್‌ಗೆ ಅಡಿಪಾಯ ಹಾಕಿದರು.

5.57 ಲಕ್ಷ ಚದರ ಅಡಿ ವಿಸ್ತೀರ್ಣದ ಈ ಐಟಿ ಕಟ್ಟಡವು ಮೊದಲ ಹಂತದಲ್ಲಿ ಸುಮಾರು 5,000 ಜನರಿಗೆ ಉದ್ಯೋಗ ಸೃಷ್ಟಿಸುತ್ತದೆ ಎಂದು ಐಟಿ ಬಿಟಿ ಸಚಿವ ಕೆ.ಪಾಂಡಿಯರಾಜನ್ ಹೇಳಿದ್ದಾರೆ.

ತಮಿಳುನಾಡಿನಲ್ಲಿ ತಲೆ ಎತ್ತಿದ ಮತ್ತೊಂದು ಬೃಹತ್ ಐಟಿ ಪಾರ್ಕ್

21 ಮಹಡಿಗಳ ಈ ಐಟಿ ಪಾರ್ಕ್ ಸೌಲಭ್ಯವು ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಇದು ತಮಿಳುನಾಡಿನ ಮೂರನೇ ಟೈಡೆಲ್ ಪಾರ್ಕ್ ಆಗಿದೆ. ಈಗಾಗಲೇ ಚೆನ್ನೈನಲ್ಲಿ ಮತ್ತು ಕೊಯಮತ್ತೂರಿನಲ್ಲಿ ಈ ಬೃಹತ್ ಐಟಿ ಪಾರ್ಕ ಕಾರ್ಯನಿರ್ವಹಿಸುತ್ತಿದೆ. ಈ ಮೂರು ಐಟಿ ಪಾರ್ಕ್ 25 ಸಾವಿರ ಜನರಿಗೆ ಉದ್ಯೋಗಗಳನ್ನು ಒದಗಿಸುತ್ತವೆ.

English summary

One More Big IT Park To Chennai

One More Big IT Park To Chennai. Tamil Nadu CM K Palaniswamy Confirms It.
Story first published: Tuesday, June 2, 2020, 19:56 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X