For Quick Alerts
ALLOW NOTIFICATIONS  
For Daily Alerts

ಹಬ್ಬದ ಸೀಸನ್: ಈರುಳ್ಳಿ, ಟೊಮೆಟೊ ಬೆಲೆ ಭಾರೀ ಏರಿಕೆ

|

ದಸರಾ ಜೊತೆಗೆ ಒಂದರ ಹಿಂದೆ ಮತ್ತೊಂದು ಹಬ್ಬದ ಸೀಸನ್ ನಡೆಯುತ್ತಿದೆ. ಇದರ ಜೊತೆಗೆ ಜನರ ಬಜೆಟ್‌ ಕೂಡ ಕ್ಷೀಣಿಸುತ್ತಿದೆ. ವಾಸ್ತವವಾಗಿ, ಪ್ರಮುಖ ಅಡುಗೆ ವಸ್ತುಗಳ ಬೆಲೆಗಳನ್ನು ನಿಯಂತ್ರಿಸುವ ಸರ್ಕಾರದ ಪ್ರಯತ್ನಗಳ ನಡುವೆ, ಕೆಲವು ಉತ್ಪನ್ನಗಳ ಬೆಲೆಗಳು ಇತ್ತೀಚಿನ ವಾರಗಳಲ್ಲಿ ತೀವ್ರ ಏರಿಕೆ ಕಾಣುತ್ತಿವೆ. ಇದು ಸರ್ಕಾರಕ್ಕೆ ಕಠಿಣ ಸವಾಲು ಎಂದು ಪರಿಗಣಿಸಲಾಗುತ್ತಿದೆ.

ಮತ್ತೊಂದೆಡೆ ಇದು ಸಾಮಾನ್ಯ ಜನರಿಗೂ ಸಮಸ್ಯೆಯಾಗಿದೆ. ದ್ವಿದಳ ಧಾನ್ಯಗಳು ಮತ್ತು ಪ್ರಮುಖ ಖಾದ್ಯ ಎಣ್ಣೆಗಳ ಸರಾಸರಿ ಬೆಲೆಗಳು ಒಂದು ತಿಂಗಳ ಹಿಂದೆ ಇದ್ದಷ್ಟು ಇಲ್ಲದೆ ಈರುಳ್ಳಿ ಮತ್ತು ಟೊಮೆಟೊಗಳ ಬೆಲೆಗಳು ಹೆಚ್ಚಾಗಿದೆ. ಸಾಮಾನ್ಯವಾಗಿ ಕಳೆದ ವರ್ಷಗಳಲ್ಲಿ ಈರುಳ್ಳಿ ಬೆಲೆಗಳು ವರ್ಷದ ಕೊನೆಯ ತಿಂಗಳುಗಳಲ್ಲಿ ಗಗನಕ್ಕೇರಲು ಪ್ರಾರಂಭಿಸುತ್ತವೆ.

ಈರುಳ್ಳಿ ಮತ್ತು ಟೊಮೆಟೊ ಬೆಲೆ ಏರಿಕೆ ಕಾರಣಗಳೇನು?

ಈರುಳ್ಳಿ ಮತ್ತು ಟೊಮೆಟೊ ಬೆಲೆ ಏರಿಕೆ ಕಾರಣಗಳೇನು?

ಈರುಳ್ಳಿ ಮತ್ತು ಟೊಮೆಟೊ ಬೆಲೆ ಏರಿಕೆಯ ಹಿಂದೆ 2 ಪ್ರಮುಖ ಕಾರಣಗಳನ್ನು ಕಾಣಬಹುದು. ಇವುಗಳಲ್ಲಿ ಹೆಚ್ಚುತ್ತಿರುವ ಇಂಧನ ಬೆಲೆ ಒಂದಾದ್ರೆ, ಬೆಳೆಗಳ ಹಾನಿ ಕೂಡ ಸೇರಿವೆ. 100 ಕ್ಕಿಂತ ಹೆಚ್ಚಿನ ಕೇಂದ್ರಗಳಿಂದ ಪಡೆದ ಬೆಲೆಗಳ ಆಧಾರದ ಮೇಲೆ ಸಂಗ್ರಹಿಸಲಾದ ಸರ್ಕಾರಿ ದತ್ತಾಂಶವು, ಭಾನುವಾರದ ಸರಾಸರಿ ಈರುಳ್ಳಿ ಬೆಲೆಯು ಒಂದು ತಿಂಗಳ ಹಿಂದೆ 28 ರೂ.ನಿಂದ ಪ್ರತಿ ಕೆಜಿಗೆ 39 ರೂ.ಗೆ ಏರಿದೆ ಎಂದು ತೋರಿಸಿದೆ. ಆದರೆ, ಒಂದು ವರ್ಷದ ಹಿಂದೆ ಈರುಳ್ಳಿಯ ಸರಾಸರಿ ಬೆಲೆ ಕೆಜಿಗೆ 46 ರೂ. ನಷ್ಟಿತ್ತು. ಭಾನುವಾರ, ದೆಹಲಿ, ಮುಂಬೈ ಮತ್ತು ಚೆನ್ನೈನಂತಹ ಕೆಲವು ನಗರ ಕೇಂದ್ರಗಳಲ್ಲಿ ಈರುಳ್ಳಿ ಬೆಲೆ ಕೆಜಿಗೆ 50-65 ರೂ. ನಷ್ಟಿದೆ.

ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್‌ನ ಅಕ್ಟೋಬರ್ 18ರ ಮಾರುಕಟ್ಟೆ ಬೆಲೆ ಇಲ್ಲಿದೆಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್‌ನ ಅಕ್ಟೋಬರ್ 18ರ ಮಾರುಕಟ್ಟೆ ಬೆಲೆ ಇಲ್ಲಿದೆ

ಟೊಮೊಟೊ ಬೆಲೆ ಎಷ್ಟು?

ಟೊಮೊಟೊ ಬೆಲೆ ಎಷ್ಟು?

ಟೊಮೆಟೊ ಬೆಲೆಗಳನ್ನು ನೋಡಿದರೆ, ಭಾನುವಾರ ಅದರ ಸರಾಸರಿ ಬೆಲೆ ಪ್ರತಿ ಕೆಜಿಗೆ ರೂ 45 ಕ್ಕೆ ಏರಿದೆ, ಸೆಪ್ಟೆಂಬರ್‌ನಲ್ಲಿ ಪ್ರತಿ ಕೆಜಿಗೆ 27 ರೂ. ಮತ್ತು ಒಂದು ವರ್ಷದ ಹಿಂದೆ ಕೆಜಿಗೆ 41 ರೂ. ಆಗಿದೆ. ಆದರೆ ಕಳೆದ ಒಂದು ವರ್ಷಕ್ಕಿಂತ ಟೊಮೊಟೊ ಬೆಲೆ ಭಾರೀ ಏರಿಕೆಯಾಗಿದೆ. ಕೋಲ್ಕತ್ತಾದಲ್ಲಿ ಟೊಮೆಟೊ ಒಂದು ಕೆಜಿಗೆ 93 ರೂ.ಗೆ ಮಾರಾಟವಾಗುತ್ತಿದೆ ಎಂದು ಡೇಟಾ ತೋರಿಸುತ್ತದೆ. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ದೇಶದ ಕೆಲವು ಭಾಗಗಳಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ, ಟೊಮೆಟೊ ಬೆಲೆ ಮತ್ತಷ್ಟು ಹೆಚ್ಚಾಗಬಹುದು.

ಈರುಳ್ಳಿ ಬೆಲೆ ಗಗನಕ್ಕೇರಿದೆ

ಈರುಳ್ಳಿ ಬೆಲೆ ಗಗನಕ್ಕೇರಿದೆ

ಗ್ರಾಹಕ ವ್ಯವಹಾರಗಳ ಸಚಿವಾಲಯ ಭಾನುವಾರ ಒಂದು ಹೇಳಿಕೆಯನ್ನು ನೀಡಿದೆ ಮತ್ತು ಕಳೆದ ವರ್ಷಕ್ಕಿಂತ ಈರುಳ್ಳಿ, ಟೊಮ್ಯಾಟೊ ಮತ್ತು ಆಲೂಗಡ್ಡೆಗಳ ಬೆಲೆಗಳು ಅಗ್ಗವಾಗಿವೆ ಎಂದು ಹೇಳಿದೆ. ಆಗಸ್ಟ್‌ನಿಂದ ಸರ್ಕಾರವು ಬಫರ್ ಸ್ಟಾಕ್‌ನಿಂದ ಈರುಳ್ಳಿಯನ್ನು ಹಿಂಪಡೆಯಲು ಆರಂಭಿಸಿದೆ ಎಂದು ಹೇಳಲಾಗಿದೆ. ಈರುಳ್ಳಿ ಬೆಲೆಗಳು ಸಾಮಾನ್ಯವಾಗಿ ಸೆಪ್ಟೆಂಬರ್-ನವೆಂಬರ್‌ನಲ್ಲಿ ಹೆಚ್ಚಾಗುತ್ತವೆ ಏಕೆಂದರೆ ಸ್ಟಾಕ್ ಮುಗಿಯುತ್ತದೆ ಮತ್ತು ನವೆಂಬರ್ ಮಧ್ಯದಲ್ಲಿ ತಾಜಾ ಬೆಳೆ ಬರುತ್ತದೆ.

ಗ್ರಾಹಕ ವ್ಯವಹಾರಗಳ ಸಚಿವಾಲಯವು ಬಫರ್ ಸ್ಟಾಕ್ ನಿಂದ ಈರುಳ್ಳಿ ವಿತರಿಸಲು ಆರಂಭಿಸಿದೆ . ಅಕ್ಟೋಬರ್ 12 ರವರೆಗೆ ಈ ಈರುಳ್ಳಿ ರಾಜಧಾನಿ ದೆಹಲಿ ಸೇರಿದಂತೆ ಹಲವು ನಗರಗಳನ್ನು ತಲುಪಿದೆ. ಇವುಗಳಲ್ಲಿ ಕೋಲ್ಕತ್ತಾ, ಲಕ್ನೋ, ಪಾಟ್ನಾ, ರಾಂಚಿ, ಹೈದರಾಬಾದ್, ಬೆಂಗಳೂರು, ಚೆನ್ನೈ, ಚಂಡೀಗಢ ಮತ್ತು ಮುಂಬೈ ಸೇರಿವೆ. ಈ ಪ್ರಮುಖ ಮಾರುಕಟ್ಟೆಗಳಿಗೆ ಒಟ್ಟು 67,357 ಟನ್ ಈರುಳ್ಳಿಯನ್ನು ಬಿಡುಗಡೆ ಮಾಡಲಾಗಿದೆ. ಸರ್ಕಾರ ಯಾವ ದರದಲ್ಲಿ ಸರ್ಕಾರಿ ದರ್ಜೆಯ-ಬಿ ಈರುಳ್ಳಿಯನ್ನು ಮಾರಾಟ ಮಾಡುತ್ತದೆ. ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಗುಜರಾತ್‌ನ ಸ್ಥಳೀಯ ಮಾರುಕಟ್ಟೆಗಳಿಗೆ ತಲುಪಿಸಲಾಗುತ್ತದೆ. ಎಲ್ಲಾ ರಾಜ್ಯಗಳು ಈರುಳ್ಳಿಯನ್ನು ಶೇಖರಣಾ ಸ್ಥಳಗಳಿಂದ ತೆಗೆದು ಬಫರ್‌ನಿಂದ ಪ್ರತಿ ಕೆಜಿಗೆ 21 ರೂ. ತಲುಪಿದೆ.

 

English summary

Onion And Tomato Price Up In Festive Season: Know More

Here the details of How Onion and tomoto price up in the festive season
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X