For Quick Alerts
ALLOW NOTIFICATIONS  
For Daily Alerts

ಏರ್ ಇಂಡಿಯಾಗೆ ಕೋವಿಡ್ ಬಿಸಿಯಲ್ಲೂ ಪಾಕಿಸ್ತಾನದಿಂದ ಮೆಚ್ಚುಗೆಯ ಸುರಿಮಳೆ

|

ನಿರೀಕ್ಷೆಯೇ ಮಾಡದಂಥ ಹಾಗೂ ಮಾಡಲು ಸಾಧ್ಯವೇ ಇಲ್ಲದಂಥ ಹೊಗಳಿಕೆಯನ್ನು ಏರ್ ಇಂಡಿಯಾವು ಪಡೆದಿದೆ. ಅದು ಯಾರಿಂದ ಗೊತ್ತಾ? ಪಾಕಿಸ್ತಾನದ ಏರ್ ಟ್ರಾಫಿಕ್ ಕಂಟ್ರೋಲರ್ ನಿಂದ (ಎಟಿಸಿ). ಜಗತ್ತಿನಾದ್ಯಂತ ಕೊರೊನಾ ಆತಂಕ ಸೃಷ್ಟಿಸುವಾಗ ಏರ್ ಇಂಡಿಯಾದಿಂದ ವಿಶೇಷ ವಿಮಾನದಲ್ಲಿ ಭಾರತದಿಂದ ಫ್ರಾಂಕ್ ಫರ್ಟ್ ಗೆ ಪರಿಹಾರ ಸಾಮಗ್ರಿ ಜತೆಗೆ ಯುರೋಪ್ ಪ್ರಯಾಣಿಕರನ್ನು ಸಹ ಒಯ್ಯಲಾಗಿತ್ತು. ಆ ವಿಚಾರಕ್ಕೇ ಮೆಚ್ಚುಗೆ ಕೇಳಿಬಂದಿದೆ.

ಯುರೋಪ್ ಗೆ ವಿಶೇಷ ವಿಮಾನ ಸೇವೆ ಒದಗಿಸಿದ್ದಕ್ಕೆ ಪಾಕಿಸ್ತಾನದ ಎಟಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ನನಗೆ ಮಾತ್ರ ಅಲ್ಲ, ಏರ್ ಇಂಡಿಯಾದ ಎಲ್ಲ ಸಿಬ್ಬಂದಿಗೂ ಇದು ಹೆಮ್ಮೆಯ ಕ್ಷಣ ಎಂದು ವಿಶೇಷ ವಿಮಾನಗಳ ಹಿರಿಯ ಕ್ಯಾಪ್ಟನ್ ವೊಬ್ಬರು ತಿಳಿಸಿದ್ದಾರೆ.

21 ದಿನಗಳ ಬಳಿಕ ಮತ್ತೆ ಲಾಕ್‌ಡೌನ್ ಡೌಟ್!21 ದಿನಗಳ ಬಳಿಕ ಮತ್ತೆ ಲಾಕ್‌ಡೌನ್ ಡೌಟ್!

ನಾವು ಪಾಕಿಸ್ತಾನದ ಫ್ಲೈಟ್ ಇನ್ ಫರ್ಮೇಷನ್ ರೀಜಿಯನ್ (ಎಫ್ ಐಆರ್) ಪ್ರವೇಶ ಮಾಡಿದ್ವಿ. ಪಾಕಿಸ್ತಾನದ ಎಟಿಸಿ, ಕರಾಚಿ ಕಂಟ್ರೋಲ್ ನಿಂದ ಫ್ರಾಂಕ್ ಫರ್ಟ್ ನ ಪರಿಹಾರ ವಿಮಾನಕ್ಕೆ ಸ್ವಾಗತ ಎಂದರು. ಜತೆಗೆ ಪರಿಹಾರ ಕಾರ್ಯಾಚರಣೆ ಭಾಗವಾಗಿ ಫ್ರಾಂಕ್ ಫರ್ಟ್ ಗೆ ತೆರಳುತ್ತಿದ್ದಾರಾ ದೃಢಪಡಿಸಿ ಎಂದಿದ್ದಾರೆ. ಪ್ರತಿಯಾಗಿ ನಾವು ಖಚಿತಪಡಿಸಿದೆವು ಎಂಬುದಾಗಿ ಕ್ಯಾಪ್ಟನ್ ಮಾಹಿತಿ ನೀಡಿದ್ದಾರೆ.

ಏರ್ ಇಂಡಿಯಾಗೆ ಕೋವಿಡ್ ಬಿಸಿಯಲ್ಲೂ ಪಾಕಿಸ್ತಾನದಿಂದ ಮೆಚ್ಚುಗೆ ಸುರಿಮಳೆ

ಇನ್ನು ಪಾಕಿಸ್ತಾನದ ವಾಯು ಸೀಮೆಯಿಂದ ತೆರಳುವ ಮುಂಚಿತವಾಗಿ, ನಿಮ್ಮ ಬಗ್ಗೆ ನಮಗೆ ಹೆಮ್ಮೆಯಿದೆ. ಜಾಗತಿಕ ಪಿಡುಗಾದ ಕೊರೊನಾ ವ್ಯಾಪಿಸಿರುವ ವೇಳೆಯೂ ನೀವು ಕಾರ್ಯ ನಿರ್ವಹಿಸುತ್ತಿದ್ದೀರಿ, ಶುಭವಾಗಲಿ ಎಂದು ಪಾಕಿಸ್ತಾನ ಎಟಿಸಿ ಹೇಳಿದ್ದಾಗಿ ತಿಳಿಸಿದ್ದಾರೆ.

ಅಷ್ಟೇ ಅಲ್ಲ, ಮುಂದೆ ಇರಾನ್ ರಾಡಾರ್ ದೊರೆಯುತ್ತಿಲ್ಲ ಎಂದು ತಿಳಿಸಿದಾಗ ಈ ಬಗ್ಗೆ ಮಾಹಿತಿಯನ್ನು ಕೂಡ ಆ ದೇಶದವರಿಗೆ ಪಾಕಿಸ್ತಾನದಿಂದಲೇ ದಾಟಿಸಿ, ಅನುಕೂಲ ಮಾಡಿಕೊಡಲಾಯಿತು ಎಂಬ ವಿವರವೂ ತಿಳಿದುಬಂದಿದೆ. ಅಷ್ಟೇ ಅಲ್ಲ, ಮುಂಬೈನಿಂದ ಜರ್ಮನಿಯ ಫ್ರಾಂಕ್ ಫರ್ಟ್ ತನಕ ಎಲ್ಲ ದೇಶಗಳ ಎಟಿಸಿಯಿಂದಲೂ ಗೌರವಯುತವಾದ ಸ್ವಾಗತ ಹಾಗೂ ಮೆಚ್ಚುಗೆ ಸಿಕ್ಕಿದೆ.

ಅಂದ ಹಾಗೆ ಏರ್ ಇಂಡಿಯಾದ ಎರಡು ವಿಶೇಷ ವಿಮಾನದಲ್ಲಿ ಯುರೋಪ್ ಮತ್ತು ಕೆನಡಾ ನಾಗರಿಕರನ್ನು ಮುಂಬೈನಿಂದ ಕರೆದೊಯ್ಯಲಾಯಿತು. ಈ ವೇಳೆ ಕೊರೊನಾ ಹರಡದಂತೆ ಏನೆಲ್ಲ ನಿಯಮ ಅನುಸರಿಸಬೇಕೋ ಅದನ್ನು ಅನುಸರಿಸಲಾಯಿತು. ಅಲ್ಲಿಂದ ವಾಪಸಾದ ಮೇಲೆ ಎಲ್ಲ ಸಿಬ್ಬಂದಿಯೂ ಹದಿನಾಲ್ಕು ದಿನಗಳ ಸ್ವಯಂ ದಿಗ್ಬಂಧನದಲ್ಲಿ ಇದ್ದಾರೆ.

English summary

Pakistan ATC Praises Air India's Corona Rescue Operation

During Air India's Corona rescue operation Pakistan ATC praises this gesture.
Story first published: Sunday, April 5, 2020, 10:29 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X