For Quick Alerts
ALLOW NOTIFICATIONS  
For Daily Alerts

ಪಾಕಿಸ್ತಾನದಲ್ಲಿ ಪೆಟ್ರೋಲ್ ದರ 30 ರೂ. ಏರಿಕೆ: ಕಾರಣವೇನು?

|

ಪಾಕಿಸ್ತಾನದ ಜನರಿಗೆ ಮತ್ತೆ ಸರ್ಕಾರ ಹೊಡೆತ ನೀಡಿದ್ದು, ಪೆಟ್ರೋಲ್ ಬೆಲೆಯನ್ನು 30 ರೂಪಾಯಿ ಏರಿಕೆ ಮಾಡಲಾಗಿದೆ. ಪೆಟ್ರೋಲಿಯಂ ಉತ್ಪನ್ನಗಳ ಏರಿಕೆ ಗುರುವಾರ ಮಧ್ಯರಾತ್ರಿಯಿಂದ ಜಾರಿಗೆ ಬರಲಿದೆ. ಈ ಹೆಚ್ಚಳದ ನಂತರ, ಪಾಕಿಸ್ತಾನದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 179.85 ರೂ. (ಅಂದಾಜು ರೂ. 180) ಆಗಿದೆ. ಈ ನಡುವೆ ಡೀಸೆಲ್ ಪ್ರತಿ ಲೀಟರ್‌ಗೆ 174.15 ರೂಪಾಯಿ ಆಗಿದೆ.

ಕತಾರ್‌ನಲ್ಲಿ ಪಾಕಿಸ್ತಾನ ಸರ್ಕಾರ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ನಡುವಿನ ಮಾತುಕತೆ ಬಳಿಕ ಒಪ್ಪಂದ ನಡೆಸುವುದು ವಿಫಲವಾಗಿದೆ. ಇದಾದ ಒಂದು ದಿನದ ನಂತರ ಪಾಕಿಸ್ತಾನದ ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್ ಪತ್ರಿಕಾಗೋಷ್ಠಿ ನಡೆಸಿ ಇಂಧನ ದರ ಏರಿಕೆಯ ಘೋಷಣೆಯನ್ನು ಮಾಡಿದ್ದಾರೆ.

ಪ್ರಸ್ತುತ ಪರಿಸ್ಥಿತಿಯಲ್ಲಿ ಭಾರತದೊಂದಿಗೆ ವ್ಯಾಪಾರ ನಡೆಸಲು ಸಾಧ್ಯವಿಲ್ಲ: ಇಮ್ರಾನ್ ಖಾನ್ಪ್ರಸ್ತುತ ಪರಿಸ್ಥಿತಿಯಲ್ಲಿ ಭಾರತದೊಂದಿಗೆ ವ್ಯಾಪಾರ ನಡೆಸಲು ಸಾಧ್ಯವಿಲ್ಲ: ಇಮ್ರಾನ್ ಖಾನ್

ಏರಿಕೆಯ ನಂತರ ಪೆಟ್ರೋಲ್ ಬೆಲೆ ರೂ.179.86 (ಬಹುತೇಕ ರೂ. 180), ಡೀಸೆಲ್ ರೂ.174.15, ಸೀಮೆ ಎಣ್ಣೆ ರೂ.155.56 ಮತ್ತು ಲೈಟ್ ಡೀಸೆಲ್ ಬೆಲೆ ರೂ.148.31 ಆಗಿದೆ. ಹಾಗಾದರೆ ಪಾಕಿಸ್ತಾನ ಸರ್ಕಾರ ಇದ್ದಕ್ಕಿದಂತೆ ಭಾರೀ ಬೆಲೆ ಏರಿಕೆ ಮಾಡಿರುವುದಕ್ಕೆ ನೀಡಿದ ಕಾರಣವೇನು ಎಂದು ತಿಳಿಯಲು ಮುಂದೆ ಓದಿ..

 ಪಾಕಿಸ್ತಾನದಲ್ಲಿ ಪೆಟ್ರೋಲ್ ದರ 30 ರೂ. ಏರಿಕೆ: ಕಾರಣವೇನು?

ಪೆಟ್ರೋಲ್ ಏರಿಕೆಗೆ ಪಾಕ್ ಸರ್ಕಾರ ನೀಡಿದ ಕಾರಣವೇನು?

ಮುಂದಿನ ತಿಂಗಳು ನಾವು ವಾರ್ಷಿಕ ಬಜೆಟ್ ಮಂಡನೆ ಮಾಡುವ ಮುನ್ನ ವಿತ್ತೀಯ ಕೊರತೆಯನ್ನು ಇಳಿಕೆ ಮಾಡಬೇಕಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಪಾಕಿಸ್ತಾನವು ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದ್ದು ಸದ್ಯದ ಸ್ಥಿತಿಯಿಂದ ಪಾರಾಗಲು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ ಜೊತೆ ಕತಾರ್‌ನಲ್ಲಿ ಮಾತುಕತೆ ನಡೆದಿದೆ. ಆದರೆ ಈ ಮಾರುಕತೆ ವಿಫಲವಾಗಿ ಆರು ಬಿಲಿಯನ್ ಡಾಲರ್ ಮೊತ್ತದ ಯೋಜನೆಯೊಂದಕ್ಕೆ ಸಂಬಂಧಿಸಿದ ಐಎಮ್‌ಎಫ್‌ ಸ್ಟಾಫ್ ಹಂತದ ಒಪ್ಪಂದ ಕೊನೆಗೊಂಡಿದೆ.

ಇನ್ನು ಸಾಲ ಮಂಜೂರಾತಿಯನ್ನು ಘೋಷಣೆ ಮಾಡಿರುವ ಐಎಂಎಫ್, ಪೆಟ್ರೋಲಿಯಂ, ಇಂಧನ ಸಬ್ಸಿಡಿ ರದ್ದು ಮಾಡುವುದರ ಜೊತೆಗೆ ತುರ್ತು ಕಾರ್ಯ ಯೋಜನೆ ಮಾಡಬೇಕು ಎಂದು ಹೇಳಿದೆ. "ಇಂಧನ ಸಬ್ಸಿಡಿಯನ್ನು ತೆಗೆದುಹಾಕುವವರೆಗೆ ಯಾವುದೇ ಪರಿಹಾರ ನೀಡಲು ಐಎಂಎಫ್ ನಿರಾಕರಿಸಿದ ಕಾರಣ ಜನಸಾಮಾನ್ಯರ ಮೇಲೆ ಇಂಧನ ಬೆಲೆ ಹೊರೆಯನ್ನು ವರ್ಗಾಯಿಸುವುದು ಅನಿವಾರ್ಯವಾಗಿದೆ," ಎಂದು ಪಾಕಿಸ್ತಾನದ ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್ ತಿಳಿಸಿದ್ದಾರೆ.

ಇನ್ನು ಶ್ರೀಲಂಕಾದಲ್ಲೂ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯು ತೀವ್ರಮಟ್ಟಕ್ಕೆ ಏರಿದೆ. ಶ್ರೀಲಂಕಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ ಇತ್ತೀಚೆಗೆ 420 ರೂಪಾಯಿಗೆ ಏರಿದೆ. ಇನ್ನು ಪ್ರತಿ ಲೀಟರ್ ಡೀಸೆಲ್ 400 ರೂಪಾಯಿಗೆ ತಲುಪಿದೆ.

English summary

Pakistan hikes petrol cost by Rs 30, one litre to cost Rs 180, Here's Reason

Pakistan hikes petrol cost by Rs 30, one litre to cost Rs 180. Here's Reason, Latest Rates.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X