For Quick Alerts
ALLOW NOTIFICATIONS  
For Daily Alerts

ಯುರೋಪ್ ದೇಶಗಳಲ್ಲಿ ಪಾಕ್ (PIA) ವಿಮಾನ ಹಾರಾಟ ಅಮಾನತು

|

ಯುರೋಪಿಯನ್ ಒಕ್ಕೂಟ ವಿಮಾನ ಸುರಕ್ಷತಾ ಸಂಸ್ಥೆಯು (EASA) ಪಾಕಿಸ್ತಾನದ ರಾಷ್ಟ್ರೀಯ ವಿಮಾನ ಯಾನ ಸಂಸ್ಥೆಯ ವಿಮಾನ ಹಾರಾಟವನ್ನು ಆರು ತಿಂಗಳ ಅವಧಿಗೆ ಅಮಾನತು ಮಾಡಿದೆ ಎಂದು ಏರ್ ಲೈನ್ಸ್ ವಕ್ತಾರರು ಮಂಗಳವಾರ ಹೇಳಿದ್ದಾರೆ. ಪಾಕಿಸ್ತಾನದ 262 ಪೈಲಟ್ ಗಳು ನಕಲಿ ಲೈಸೆನ್ಸ್ ಹೊಂದಿದ್ದಾರೆ ಎಂದು ಅಲ್ಲಿನ ವಿಮಾನಯಾನ ಸಚಿವರು ಹೇಳಿದ್ದರು. ಅಂಥವರನ್ನು ವಿಮಾನ ಹಾರಾಟ ನಡೆಸದಂತೆ ಸೂಚಿಸಿದ್ದರು.

'ಹೆಲ್ಪ್' ಮಾಡಲು ಸಿದ್ಧ ಎಂದಿದ್ದ ಇಮ್ರಾನ್ ಖಾನ್ ಗೆ ಭಾರತದ ತಿರುಗೇಟು'ಹೆಲ್ಪ್' ಮಾಡಲು ಸಿದ್ಧ ಎಂದಿದ್ದ ಇಮ್ರಾನ್ ಖಾನ್ ಗೆ ಭಾರತದ ತಿರುಗೇಟು

ಯುರೋಪಿಯನ್ ಒಕ್ಕೂಟದ ರಾಷ್ಟ್ರಗಳಲ್ಲಿ ಪಿಐಎ ವಿಮಾನ ಯಾನ ಸಂಸ್ಥೆಯ ವಿಮಾನ ಹಾರಾಟವನ್ನು ನಡೆಸದಂತೆ EASA ತಾತ್ಕಾಲಿಕವಾಗಿ ಅಮಾನತು ಮಾಡಿದೆ. ಜುಲೈ 1, 2020ರಿಂದ ಅನ್ವಯ ಆಗುವಂತೆ 6 ತಿಂಗಳ ಕಾಲ ಈ ಅಮಾನತು ಜಾರಿಯಲ್ಲಿ ಇರುತ್ತದೆ. ಈ ತೀರ್ಮಾನಕ್ಕೆ ಮೇಲ್ಮನವಿ ಸಲ್ಲಿಸಬಹುದಾಗಿದೆ ಎಂದು ಪಾಕಿಸ್ತಾನ ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ಯುರೋಪ್ ದೇಶಗಳಲ್ಲಿ ಪಾಕ್ (PIA) ವಿಮಾನ ಹಾರಾಟ ಅಮಾನತು

ಪಾಕಿಸ್ತಾನದ ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆಯ ಎಲ್ಲ ವಿಮಾನಗಳನ್ನು ತಾತ್ಕಾಲಿಕವಾಗಿ ಯುರೋಪ್ ಒಕ್ಕೂಟದ ದೇಶಗಳಲ್ಲಿ ಹಾರಾಟ ನಿಲ್ಲಿಸಲಾಗುತ್ತದೆ ಎಂದು ಕೂಡ ಮಾಹಿತಿ ನೀಡಲಾಗಿದೆ.

English summary

Pakistan International Airlines Flights Suspended For 6 Months By EASA

European Union Air Safety Authority (EASA) suspended Pakistan International Airlines flights for 6 months.
Story first published: Tuesday, June 30, 2020, 20:56 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X