For Quick Alerts
ALLOW NOTIFICATIONS  
For Daily Alerts

ಆಧಾರ್‌-ಪ್ಯಾನ್ ಕಾರ್ಡ್ ಲಿಂಕ್ ಗಡುವನ್ನು ವಿಸ್ತರಿಸಲು ಬಳಕೆದಾರರ ಆಗ್ರಹ

|

31 ಮಾರ್ಚ್ 2021 ಆಧಾರ್ ಮತ್ತು ಪ್ಯಾನ್ ಲಿಂಕ್‌ಗೆ ಕೊನೆಯ ದಿನಾಂಕವಾಗಿದೆ. ಈ ಗಡುವಿನ ಮೊದಲು ನಿಮ್ಮ ಪ್ಯಾನ್-ಆಧಾರ್ ಅನ್ನು ನೀವು ಲಿಂಕ್ ಮಾಡದಿದ್ದರೆ, ನಿಮ್ಮ ಪ್ಯಾನ್ ಕಾರ್ಡ್ ಅನ್ನು ಸಹ ನಿಷ್ಕ್ರಿಯಗೊಳಿಸಬಹುದು. ಹೀಗಾಗಿ ಕೊನೆಯ ದಿನವಾದ್ದರಿಂದ ಭಾರತದಾದ್ಯಂತ ಅನೇಕ ಬಳಕೆದಾರರು ಆತುರ ಪ್ರಯತ್ನದಲ್ಲಿ ಲಿಂಕ್ ಮಾಡಲು ವಿಫಲರಾಗಿದ್ದಾರೆ.

ಆದಾಯ ತೆರಿಗೆ ವೆಬ್‌ಸೈಟ್‌ಗೆ ಬಳಕೆದಾರರು ಲಾಗ್ ಇನ್ ಆಗಿದ್ದು, ಐಟಿ ಪೋರ್ಟಲ್ ಅನ್ನು ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ ಎಂದು ದೂರಿದ್ದಾರೆ. ಆದಾಯ ತೆರಿಗೆ ವೆಬ್‌ಸೈಟ್ ಡೌನ್ ಆಗಿರುವುದರಿಂದ ಹೆಚ್ಚಿನ ಬಳಕೆದಾರರಿಗೆ ಪ್ಯಾನ್ ಕಾರ್ಡ್ ಅನ್ನು ಆಧಾರ್‌ನೊಂದಿಗೆ ಲಾಗಿನ್ ಮಾಡಲು ಮತ್ತು ಲಿಂಕ್ ಮಾಡಲು ಸಾಧ್ಯವಾಗಿಲ್ಲ.

ಆಧಾರ್‌-ಪ್ಯಾನ್ ಕಾರ್ಡ್ ಲಿಂಕ್ ಗಡುವನ್ನು ವಿಸ್ತರಿಸಲು ಆಗ್ರಹ

ನಿಯಮಗಳ ಪ್ರಕಾರ, ಮಾರ್ಚ್ 31, 2021 ರೊಳಗೆ (ಬುಧವಾರ) ನಿಮ್ಮ ಪ್ಯಾನ್ ಅನ್ನು ನಿಮ್ಮ ಆಧಾರ್‌ನೊಂದಿಗೆ ಲಿಂಕ್ ಮಾಡಲು ನೀವು ವಿಫಲವಾದರೆ ನಿಮ್ಮ ಪ್ಯಾನ್ ನಿಷ್ಕ್ರಿಯಗೊಳ್ಳುತ್ತದೆ ಮತ್ತು ನೀವು 1,000 ರೂ ದಂಡವನ್ನು ಪಾವತಿಸಬೇಕಾಗಬಹುದು.

ಇತ್ತೀಚೆಗೆ ಲೋಕಸಭೆಯಲ್ಲಿ ಮಂಡಿಸಲಾದ ಹಣಕಾಸು ಮಸೂದೆಯಲ್ಲಿ ಸೇರಿಸಲಾದ ಹೊಸ ವಿಭಾಗದ ಪ್ರಕಾರ, ನಿರ್ದಿಷ್ಟ ಗಡುವಿನ ಪ್ರಕಾರ ಪ್ಯಾನ್ ಆಧಾರ್ ಆದೇಶವನ್ನು ಕೈಗೊಳ್ಳಲು ವಿಫಲವಾದರೆ 1,000 ರೂ.ವರೆಗೆ ತಡವಾಗಿ ಶುಲ್ಕ ವಿಧಿಸಲಾಗುತ್ತದೆ. ಆದ್ದರಿಂದ, ಭಾರತದಾದ್ಯಂತದ ಬಳಕೆದಾರರು ಆತುರದಲ್ಲಿ ಮುಂದಾಗಿದ್ದು, ಈಗಾಗಲೇ ಇರುವ ಡೆಡ್‌ಲೈನ್ ಅನ್ನು ವಿಸ್ತರಿಸಲು ಅಥವಾ ಸಮಸ್ಯೆಯನ್ನು ಸರಿಪಡಿಸಲು ಆದಾಯ ತೆರಿಗೆ ಇಲಾಖೆಗೆ ಆಗ್ರಹಿಸಿದ್ದಾರೆ.

ಈ ಮೊದಲು ಪ್ಯಾನ್‌ಗೆ ಆಧಾರ್ ಅನ್ನು ಜೋಡಿಸುವ ಕೊನೆಯ ದಿನಾಂಕವನ್ನು 30 ಜೂನ್ 2020ಕ್ಕೆ ನಿಗದಿಪಡಿಸಿತ್ತು. ನಂತರ ಇದನ್ನು ಸರ್ಕಾರವು 31 ಮಾರ್ಚ್ 2021ಕ್ಕೆ ವಿಸ್ತರಿಸಿತು.

English summary

PAN-Aadhaar Card Link Deadline: Users Demand Extension Of Date

Many users were unsuccessful in their attempts and complained that they were unable to access the IT portal. user Demand Extension of date
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X