For Quick Alerts
ALLOW NOTIFICATIONS  
For Daily Alerts

ಕ್ರಿಪ್ಟೋಕರೆನ್ಸಿ ಸ್ಥಗಿತ ಅಸಾಧ್ಯ, ನಿಯಂತ್ರಣ ಮುಖ್ಯ: ಸಂಸದೀಯ ಸಮಿತಿ

|

ಭಾರತದಲ್ಲಿ ಕ್ರಿಪ್ಟೋಕರೆನ್ಸಿಯ ನಿಯಂತ್ರಣ ಹಾಗೂ ಪ್ರಚಾರದ ಬಗ್ಗೆ ಚರ್ಚೆ ಮಾಡುವ ನಿಟ್ಟಿನಲ್ಲಿ ಹಣಕಾಸು ಸಂಸದೀಯ ಸ್ಥಾಯಿ ಸಮಿತಿಯು ಉದ್ಯಮ ಸಂಘಗಳು ಮತ್ತು ತಜ್ಞರನ್ನು ಭೇಟಿ ಮಾಡಿದೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಜಯಂತ್ ಸಿನ್ಹಾ ನೇತೃತ್ವದಲ್ಲಿ ಮೊದಲ ಬಾರಿಗೆ ಸಂಸದೀಯ ಸಮಿತಿಯನ್ನು ನೇಮಕ ಮಾಡಲಾಗಿದೆ.

ಈ ಸಭೆಯಲ್ಲಿ ಎಲ್ಲಾ ಪಕ್ಷಗಳು ಚರ್ಚೆ ನಡೆಸಿದ್ದು, "ಕ್ರಿಪ್ಟೋಕರೆನ್ಸಿಯನ್ನು ಸ್ಥಗಿತ ಮಾಡಲು ಸಾಧ್ಯವಾಗದು," ಎಂದು ಕೊನೆಯದಾಗಿದೆ ನಿರ್ಣಯ ಮಾಡಲಾಗಿದೆ. "ಕ್ರಿಪ್ಟೋಕರೆನ್ಸಿಯನ್ನು ಸ್ಥಗಿತ ಮಾಡಲು ಸಾಧ್ಯವಾಗದು. ಆದರೆ ಕ್ರಿಪ್ಟೋಕರೆನ್ಸಿಯನ್ನು ನಿಯಂತ್ರಣ ಮಾಡುವುದು ಮುಖ್ಯ," ಎಂದು ಹಣಕಾಸು ಸಂಸದೀಯ ಸ್ಥಾಯಿ ಸಮಿತಿಯು ಅಭಿಪ್ರಾಯಿಸಿದೆ.

ನ.15: ನಿರಂತರ ಕುಸಿತದ ನಂತರ ಕ್ರಿಪ್ಟೋಕರೆನ್ಸಿ ಮೌಲ್ಯದಲ್ಲಿ ಏರಿಕೆನ.15: ನಿರಂತರ ಕುಸಿತದ ನಂತರ ಕ್ರಿಪ್ಟೋಕರೆನ್ಸಿ ಮೌಲ್ಯದಲ್ಲಿ ಏರಿಕೆ

ಕ್ರಿಪ್ಟೋಕರೆನ್ಸಿಯನ್ನು ನಿಯಂತ್ರಿಸಲು ಯಾಂತ್ರಿಕ ವ್ಯವಸ್ಥೆಯನ್ನು ಜಾರಿಗೆ ತರಲು ಒಮ್ಮತವಿದೆ ಎಂದು ಹಣಕಾಸು ಸಂಸದೀಯ ಸ್ಥಾಯಿ ಸಮಿತಿಯು ಹೇಳಿದೆ. ಆದರೂ ಈ ನಿಯಂತ್ರಕರು ಯಾರು ಎಂಬ ಬಗ್ಗೆ ಉದ್ಯಮ ಸಂಘಗಳು ಮತ್ತು ಮಧ್ಯಸ್ಥಗಾರರಿಗೆ ಇನ್ನೂ ಕೂಡಾ ಸ್ಪಷ್ಟವಾಗಿಲ್ಲ ಎಂದು ಮೂಲಗಳು ಎಎನ್‌ಐಗೆ ತಿಳಿಸಿವೆ.

 ಕ್ರಿಪ್ಟೋಕರೆನ್ಸಿ ಸ್ಥಗಿತ ಅಸಾಧ್ಯ, ನಿಯಂತ್ರಣ ಮುಖ್ಯ: ಸಂಸತ್ ಸಮಿತಿ

ಇನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಜಯಂತ್ ಸಿನ್ಹಾ ನೇತೃತ್ವದಲ್ಲಿ ಮೊದಲ ಬಾರಿಗೆ ನಡೆದ ಸಂಸದೀಯ ಸಮಿತಿ ಸಭೆಯಲ್ಲಿ ಮುಖ್ಯವಾಗಿ ಹೂಡಿಕೆದಾರರ ಹಣದ ಭದ್ರತೆಯ ಬಗ್ಗೆ ಚರ್ಚೆ ನಡೆದಿದೆ. ಮಾಜಿ ಕೇಂದ್ರ ಸಚಿವ ಜಯಂತ್ ಸಿನ್ಹಾ ಹೂಡಿಕೆದಾರರ ಹಣದ ಭದ್ರತೆಯ ಬಗ್ಗೆ ಗಂಭೀರ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ದಿನಪತ್ರಿಕೆಗಳಲ್ಲಿ ಪೂರ್ಣ ಪುಟದ ಕ್ರಿಪ್ಟೋ ಜಾಹೀರಾತುಗಳ ಬಗ್ಗೆ ಸಂಸದರೊಬ್ಬರು ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ಕ್ರಿಪ್ಟೋಕರೆನ್ಸಿಗಳು ಕೆಲವು ರೀತಿಯ ಹೂಡಿಕೆದಾರರ ಪ್ರಜಾಪ್ರಭುತ್ವ ಎಂದು ತಜ್ಞರು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕ್ರಿಪ್ಟೋಕರೆನ್ಸಿಯನ್ನು ಕಾನೂನುಬದ್ಧ ಟೆಂಡರ್ ಎಂದು ಗುರುತಿಸುವ ಏಕೈಕ ದೇಶ ಎಲ್ ಸಾಲ್ವಡಾರ್ ಎಂದು ಸಂಸದರೊಬ್ಬರು ಸಭೆಗೆ ತಿಳಿಸಿದರು. "ಕೋಟಿಗಟ್ಟಲೆ ಭಾರತೀಯರು 600,000 ಕೋಟಿ ರೂಪಾಯಿಗೂ ಅಧಿಕ ಕ್ರಿಪ್ಟೋ-ಸ್ವತ್ತುಗಳಿಗೆ ಹೂಡಿಕೆ ಮಾಡಿದ್ದಾರೆ," ಎಂಬ ಜಾಹೀರಾತನ್ನು ಸದಸ್ಯರೊಬ್ಬರು ಉಲ್ಲೇಖ ಮಾಡಿದ್ದಾರೆ.

ಎಸ್‌ಬಿಐ ಚಿನ್ನದ ಸಾಲ: ಬಡ್ಡಿಯೆಷ್ಟು?, ಇಲ್ಲಿದೆ ವಿವರಎಸ್‌ಬಿಐ ಚಿನ್ನದ ಸಾಲ: ಬಡ್ಡಿಯೆಷ್ಟು?, ಇಲ್ಲಿದೆ ವಿವರ

'ಕ್ರಿಪ್ಟೋ ಫೈನಾನ್ಸ್: ಅವಕಾಶಗಳು ಮತ್ತು ಸವಾಲುಗಳು' ಎಂಬ ಬಗ್ಗೆ ಸಂಘಗಳು ಮತ್ತು ಉದ್ಯಮ ತಜ್ಞರ ಅಭಿಪ್ರಾಯಗಳನ್ನು ಮಾಜಿ ಕೇಂದ್ರ ಸಚಿವ ಜಯಂತ್ ಸಿನ್ಹಾ ನೇತೃತ್ವದ ಹಣಕಾಸು ಸ್ಥಾಯಿ ಸಮಿತಿಯು ಕೇಳಿದೆ. ಹಾಗೆಯೇ ಇನ್ನು ಮುಂದೆ ಸರ್ಕಾರಿ ಅಧಿಕಾರಿಗಳು ಈ ಸಮಿತಿ ಸಭೆಗೆ ಹಾಜರು ಆಗಿ ಸಮಸ್ಯೆಗಳನ್ನು ತಿಳಿಸಬೇಕಾಗಿದೆ ಎಂದು ಸಮಿತಿ ಸದಸ್ಯರು ಅಭಿಪ್ರಾಯಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಶನಿವಾರ ಕ್ರಿಪ್ಟೋಕರೆನ್ಸಿ ಮತ್ತು ಸಂಬಂಧಿತ ವಿಷಯಗಳ ಬಗ್ಗೆ ಚರ್ಚೆಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಆರ್‌ಬಿಐ, ಹಣಕಾಸು ಸಚಿವಾಲಯ, ಗೃಹ ಸಚಿವಾಲಯಗಳು ಈ ಕುರಿತು ವಿಸ್ತೃತವಾದ ಚರ್ಚೆಯನ್ನು ನಡೆಸಿದೆ. ದೇಶ ಮತ್ತು ವಿಶ್ವದಾದ್ಯಂತ ತಜ್ಞರ ಸಲಹೆಯನ್ನು ಪಡೆದು ಈ ಈ ಸಭೆಯನ್ನು ನಡೆಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ಇನ್ನು ಅನಿಯಂತ್ರಿತ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯು ಮನಿ ಲಾಂಡರಿಂಗ್‌ ಮತ್ತು ಭಯೋತ್ಪಾದನೆಗೆ ಹಣಕಾಸು ಸಹಾಯ ಮಾಡಲು ಕಾರಣವಾಗಲಾರದು ಎಂದು ಕೂಡಾ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಹಾಗೆಯೇ ಈ ಕ್ಷೇತ್ರದಲ್ಲಿ ಸರ್ಕಾರ ಕೈಗೊಂಡ ಕ್ರಮವು ಪ್ರಗತಿಪರವಾದದು ಎಂಬ ಒಮ್ಮತವು ಬಂದಿದೆ. ಹಾಗೆಯೇ ಅತಿಯಾದ ಭರವಸೆಯ ಮತ್ತು ಪಾರದರ್ಶಕವಲ್ಲದ ಜಾಹೀರಾತಿನ ಮೂಲಕ ಯುವಕರನ್ನು ದಾರಿ ತಪ್ಪಿಸುವ ಪ್ರಯತ್ನಗಳನ್ನು ನಿಲ್ಲಿಸಬೇಕು ಎಂದು ಹಣಕಾಸು ಸ್ಥಾಯಿ ಸಮಿತಿ ಅಭಿಪ್ರಾಯ ವ್ಯಕ್ತಪಡಿಸಿದೆ.

English summary

Parliamentary Panel says Cryptocurrency Can’t Be Stopped, Stresses On Importance Of Regulation

Parliamentary Panel says Cryptocurrency Can’t Be Stopped, Stresses On Importance Of Regulation.
Story first published: Monday, November 15, 2021, 23:36 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X