For Quick Alerts
ALLOW NOTIFICATIONS  
For Daily Alerts

3,562 ಕೋಟಿ ಆದಾಯ ಸಂಪಾದಿಸಿದ 'ಪತಂಜಲಿ ಆಯುರ್ವೇದ'

|

ಬಾಬಾ ರಾಮ್‌ದೇವ್ ಒಡೆತನದ ಪತಂಜಲಿ ಆಯುರ್ವೇದ 2019-20ರ ಏಪ್ರಿಲ್‌-ಸೆಪ್ಟೆಂಬರ್‌ ಅವಧಿಯಲ್ಲಿ ಬರೋಬ್ಬರಿ 3,562 ಕೋಟಿ ರುಪಾಯಿ ಆದಾಯ ಗಳಿಸಿದೆ ಎಂದು ಮಂಗಳವಾರ ಘೋಷಿಸಿದೆ.

 

2019-20ರ ಹಣಕಾಸಿನ ವರ್ಷದ ಮೊದಲಾರ್ಧದಲ್ಲಿ 3,562 ಕೋಟಿ ಆದಾಯ ಹರಿದು ಬಂದಿದ್ದು, ಕಂಪನಿಯ ಇತಿಹಾಸದಲ್ಲೇ ಹಣಕಾಸಿನ ವರ್ಷದ ಮೊದಲಾರ್ಧದಲ್ಲಿ ಗಳಿಸಿದ ಅತಿ ಹೆಚ್ಚಿನ ಆದಾಯ ಇದಾಗಿದೆ ಎಂದು ತಿಳಿಸಿದೆ.

 

ಅತೀ ಕಡಿಮೆ ಬಂಡವಾಳದಲ್ಲಿ ವರ್ಷಕ್ಕೆ 8-10 ಲಕ್ಷ ಹಣ ಗಳಿಸುವ ಬಿಸಿನೆಸ್ಅತೀ ಕಡಿಮೆ ಬಂಡವಾಳದಲ್ಲಿ ವರ್ಷಕ್ಕೆ 8-10 ಲಕ್ಷ ಹಣ ಗಳಿಸುವ ಬಿಸಿನೆಸ್

ಹರಿದ್ವಾರ ಮೂಲದ ಉದ್ಯಮವಾದ ಪತಂಜಲಿ ಆಯುರ್ವೇದ ಏಪ್ರಿಲ್-ಜೂನ್ ತಿಂಗಳಿನಲ್ಲಿ 1,793 ಕೋಟಿ ರುಪಾಯಿ, ಜುಲೈ- ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ 1,769 ಕೋಟಿ ರುಪಾಯಿ ಆದಾಯ ಸಂಪಾದಿಸಿದೆ ಎಂದು ಕಂಪನಿ ತಿಳಿಸಿದೆ.

3,562 ಕೋಟಿ ಆದಾಯ ಸಂಪಾದಿಸಿದ 'ಪತಂಜಲಿ ಆಯುರ್ವೇದ'

2018-19ರ ಹಣಕಾಸಿನ ವರ್ಷದಲ್ಲಿ ಪತಂಜಲಿ ಆಯುರ್ವೇದ ಕಂಪನಿಯು ಜೂನ್ ತ್ರೈಮಾಸಿಕದಲ್ಲಿ 937 ಕೋಟಿ ರುಪಾಯಿ ಮತ್ತು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 1,576 ಕೋಟಿ ರುಪಾಯಿ ಆದಾಯವನ್ನು ವರದಿ ಮಾಡಿದೆ.

''ಅತ್ಯಂತ ಗಮನಾರ್ಹ ಸಂಗತಿಯೆಂದರೆ ಪಂತಜಲಿ ಆಯುರ್ವೇದವು ಪುನರಾಗಮನ ಮಾಡಿದೆ. ಇದು ತನ್ನ ಇತಿಹಾಸದಲ್ಲಿಯೇ ಅತ್ಯದಿಕ ಹೆಚ್‌1 ಅಂಕಿ ಅಂಶವನ್ನು ಸಾಧಿಸಿದೆ'' ಎಂದು ಪತಂಜಲಿ ವಕ್ತಾರ ಎಸ್‌.ಕೆ ತಿಜರಾವಾಲಾ ಪಿಟಿಐಗೆ ತಿಳಿಸಿದ್ದಾರೆ.

2018-19ರ ಹಣಕಾಸಿನ ವರ್ಷದಲ್ಲಿ ಪತಂಜಲಿ ಆಯುರ್ವೇದ ಒಟ್ಟಾರೆ 8,329 ಕೋಟಿ ರುಪಾಯಿಗಳನ್ನು ಸಂಪಾದಿಸಿತ್ತು ಎಂದು ಎಸ್‌.ಕೆ ತಿಜರಾವಾಲಾ ಹೇಳಿದ್ದಾರೆ. ಆದರೆ ಕಂಪನಿಯು ನಿವ್ವಳ ಲಾಭದ ಸಂಖ್ಯೆಯನ್ನು ಘೋಷಿಸಿಲ್ಲ.

English summary

Patanjali Ayurved Posts Highest Ever Revenue For April-September

Patanjali Ayurved Posts Highest Ever Revenue For April-September
Story first published: Tuesday, November 19, 2019, 18:12 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X