For Quick Alerts
ALLOW NOTIFICATIONS  
For Daily Alerts

ತಲಾ ಜಿಡಿಪಿ 30% ಏರಿಕೆಯಾಗಿದೆ ಎಂದು ಟೀಕೆಗಳಿಗೆ ಸಮಜಾಯಿಷಿ ಕೊಟ್ಟ ಅಧಿಕಾರಿಗಳು

|

2019ನೇ ಇಸವಿಯಲ್ಲಿ ಭಾರತದ ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್ (ಜಿಡಿಪಿ) ಪರ್ಚೇಸಿಂಗ್ ಪವರ್ ಪಾರಿಟಿ (PPP) ಲೆಕ್ಕಾಚಾರದಲ್ಲಿ ಬಾಂಗ್ಲಾದೇಶ್ ಗಿಂತ 11 ಪಟ್ಟು ಹೆಚ್ಚಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಬಾಂಗ್ಲಾದೇಶ್ ಗಿಂತ ಭಾರತದ ಜನಸಂಖ್ಯೆ ಎಂಟು ಪಟ್ಟು ಹೆಚ್ಚಿದೆ. 2019ರಲ್ಲಿ ಪರ್ಚೇಸಿಂಗ್ ಪವರ್ ಪಾರಿಟಿ (PPP) ಲೆಕ್ಕಾಚಾರದಲ್ಲಿ ಭಾರತದ ಜಿಡಿಪಿ ಬಾಂಗ್ಲಾದೇಶ್ ಗಿಂತ 11 ಪಟ್ಟು ಹೆಚ್ಚಿದೆ.

 

ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯ (IMF) ಪ್ರಕಾರ, PPP ಲೆಕ್ಕಾಚಾರದಲ್ಲಿ ಹೇಳಬೇಕು ಅಂದರೆ, ಭಾರತದ ತಲಾ ಜಿಡಿಪಿ 2020ರಲ್ಲಿ $ 6284 ಇದ್ದು, ಬಾಂಗ್ಲಾದೇಶ್ $ 5139 ಇದೆ. ಐಎಂಎಫ್ ಅಂದಾಜಿಸಿರುವಂತೆ ಭಾರತದ ಜಿಡಿಪಿ 2021ರಲ್ಲಿ 8.8% ಏರಿಕೆ ಆಗಲಿದೆ. ಇನ್ನು ಬಾಂಗ್ಲಾದೇಶ್ 4.4% ಬೆಳವಣಿಗೆ.

 

2020ರಲ್ಲಿ ತಲಾ ಜಿಡಿಪಿಯಲ್ಲಿ ಭಾರತವನ್ನು ಹಿಂದಿಕ್ಕಲಿದೆ ಬಾಂಗ್ಲಾದೇಶ್2020ರಲ್ಲಿ ತಲಾ ಜಿಡಿಪಿಯಲ್ಲಿ ಭಾರತವನ್ನು ಹಿಂದಿಕ್ಕಲಿದೆ ಬಾಂಗ್ಲಾದೇಶ್

2014- 15ರಲ್ಲಿ ತಲಾ ಜಿಡಿಪಿ 83,091 ರುಪಾಯಿ ಇತ್ತು. ಈಗಿನ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ 2019- 20ರಲ್ಲಿ 1,08,620 ರುಪಾಯಿ ಇದ್ದು, 30.7% ಏರಿಕೆ ಆಗಿದೆ. ಯುಪಿಎ- 2ರ ಅವಧಿಯಲ್ಲಿ ಇದು 19.8% ಏರಿಕೆ ಆಗಿತ್ತು ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ತಲಾ ಜಿಡಿಪಿ 30% ಏರಿಕೆಯಾಗಿದೆ ಎಂದು ಟೀಕೆಗಳಿಗೆ ಸಮಜಾಯಿಷಿ

ಬಾಂಗ್ಲಾದೇಶ್ ನಿಂದ ಭಾರತದ ತಲಾ ಜಿಡಿಪಿಯನ್ನು ಮೀರಿಸುವಂತೆ ಆಗುತ್ತದೆ ಎಂದು ಐಎಂಎಫ್ ವರದಿ ಮಾಡಿದ್ದನ್ನು ಆಧರಿಸಿ ಬುಧವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ದಾಳಿ ನಡೆಸಿದ್ದರು. ಐಎಂಎಫ್ ಗ್ರಾಫ್ ಪ್ರಕಾರ 2020ರಲ್ಲಿ ಭಾರತ ಹಾಗೂ ಬಾಂಗ್ಲಾದೇಶ್ ಎರಡೂ ದೇಶದ ತಲಾ ಜಿಡಿಪಿ $ 1888 ಇರುತ್ತದೆ.

English summary

Per Capita GDP; BJP Increased 30 Percent: Government Sources

According to sources, India's Gross Domestic Product (GDP) in terms of Purchasing power parity (PPP) in 2019 was 11 times more than Bangladesh.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X