For Quick Alerts
ALLOW NOTIFICATIONS  
For Daily Alerts

ಭಾರತದ 70 ಲಕ್ಷ ಕ್ರೆಡಿಟ್, ಡೆಬಿಟ್ ಕಾರ್ಡ್‌ ಡೇಟಾ ಸೋರಿಕೆ!

|

ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್‌ ಕಾರ್ಡ್ ಹೊಂದಿರುವವರು ಕೂಡಲೇ ಎಚ್ಚೆತ್ತುಕೊಳ್ಳಬೇಕಾದ ಸುದ್ದಿ ಇಲ್ಲಿದೆ. ಭಾರತದಲ್ಲಿ 70 ಲಕ್ಷ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ನ ಡೇಟಾ ಸೋರಿಕೆಯಾಗಿದೆ.

ಈ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಹೊಂದಿರುವವರಿಗೆ ಸಂಬಂಧಿಸಿದ ಸೂಕ್ಷ್ಮ ಡೇಟಾವು ಡಾರ್ಕ್ ವೆಬ್ ಮೂಲಕ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಈ ಡೇಟಾವು ಕಾರ್ಡ್ ಹೊಂದಿರುವವರ ಹೆಸರು ಮಾತ್ರವಲ್ಲದೆ ಮೊಬೈಲ್ ಸಂಖ್ಯೆ, ಆದಾಯ ಮಟ್ಟ, ಇಮೇಲ್ ವಿಳಾಸ ಮತ್ತು ಪ್ಯಾನ್ ಸಂಖ್ಯೆಯನ್ನು ಸಹ ಒಳಗೊಂಡಿದೆ. ಇದು ಗೂಗಲ್ ಡ್ರೈವ್ ಲಿಂಕ್ ಮೂಲಕ ಡೌನ್‌ಲೋಡ್ ಮಾಡಲು ಸಹ ಲಭ್ಯವಿದೆ. ಈ ಲಿಂಕ್ ಸಾರ್ವಜನಿಕ ಪ್ರವೇಶಕ್ಕಾಗಿ ಮುಕ್ತವಾಗಿದೆ ಮತ್ತು ಕೆಲವು ದಿನಗಳಿಂದ ಡಾರ್ಕ್ ವೆಬ್‌ನಲ್ಲಿ ಲಭ್ಯವಿದೆ.

ಗ್ಯಾಜೆಟ್ಸ್ 360 ರ ವರದಿಯ ಪ್ರಕಾರ, ಸೈಬರ್‌ ಸೆಕ್ಯುರಿಟಿ ಸಂಶೋಧಕರೊಬ್ಬರು ಈ ತಿಂಗಳ ಆರಂಭದಲ್ಲಿ ಡಾರ್ಕ್ ವೆಬ್‌ನಿಂದ ಈ ಗೂಗಲ್ ಡ್ರೈವ್ ಲಿಂಕ್ ಅನ್ನು ಪಡೆದರು. ಇದು "ಕ್ರೆಡಿಟ್ ಕಾರ್ಡ್ ಹೊಂದಿರುವವರ ಡೇಟಾ" ಶೀರ್ಷಿಕೆಯೊಂದಿಗೆ ಚಲಾವಣೆಯಲ್ಲಿದೆ. ಲಿಂಕ್ 59 ಎಕ್ಸೆಲ್ ಫೈಲ್‌ಗಳನ್ನು ಒಳಗೊಂಡಿದೆ, ಇದರಲ್ಲಿ ಪೂರ್ಣ ಹೆಸರುಗಳು, ಮೊಬೈಲ್ ಸಂಖ್ಯೆಗಳು, ನಗರಗಳು, ಆದಾಯ ಮಟ್ಟ ಮತ್ತು ಕಾರ್ಡ್‌ದಾರರ ಇಮೇಲ್ ವಿಳಾಸಗಳು ಸೇರಿವೆ.

 ಭಾರತದ 70 ಲಕ್ಷ ಕ್ರೆಡಿಟ್, ಡೆಬಿಟ್ ಕಾರ್ಡ್‌ ಡೇಟಾ ಸೋರಿಕೆ!

ಇದಲ್ಲದೆ, ಪ್ಯಾನ್ ಕಾರ್ಡ್ ಸಂಖ್ಯೆ, ಉದ್ಯೋಗದಾತ ವಿವರಗಳು ಸೇರಿದ್ದು, ಸೋರಿಕೆಯಾದ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಕೆದಾರರ ಬ್ಯಾಂಕ್ ಖಾತೆಗಳು ಮತ್ತು ಕಾರ್ಡ್ ಸಂಖ್ಯೆ ಮಾತ್ರ ಒಳಗೊಂಡಿಲ್ಲ.

ಇನ್ನೂ ವಿಶೇಷ ಏನಂದ್ರೆ ಈ ಲಿಂಕ್ ಪಡೆದ ಸಂಶೋಧಕನ ವೈಯಕ್ತಿಕ ಡೇಟಾ ಕೂಡ ಸೋರಿಕೆಯಾದ ಲಿಸ್ಟ್‌ನಲ್ಲಿದೆ. ಅವರು ಎಕ್ಸೆಲ್ ಫೈಲ್‌ಗಳಲ್ಲಿ ಪಟ್ಟಿ ಮಾಡಲಾದ ಕೆಲವು ಹೆಸರುಗಳನ್ನು ಲಿಂಕ್ಡ್‌ಇನ್‌ನಲ್ಲಿ ಹುಡುಕುವ ಮೂಲಕ ಅಥವಾ ಕಾಲರ್ ಐಡಿ ಅಪ್ಲಿಕೇಶನ್ ಟ್ರೂ ಕಾಲರ್‌ನಲ್ಲಿ ಮೊಬೈಲ್ ಸಂಖ್ಯೆಗಳನ್ನು ಸರ್ಫಿಂಗ್ ಮಾಡುವ ಮೂಲಕ ಗುರುತಿಸಿದ್ದಾರೆ. ಕಾರ್ಡುದಾರರ ವಿವರಗಳು ಸೋರಿಕೆಯಾದ ಬ್ಯಾಂಕುಗಳ ಬಗ್ಗೆ ಯಾವುದೇ ಸ್ಪಷ್ಟ ಉಲ್ಲೇಖವಿಲ್ಲದಿದ್ದರೂ, ಈ ಡೇಟಾವು ಹೆಚ್ಚಿನ ಕಾರ್ಡ್‌ದಾರರ ಮೊದಲ ಸ್ವೈಪ್ ಮೊತ್ತವನ್ನು ಒಳಗೊಂಡಿದೆ.

English summary

Personal Data Of 7 Million Indian Credit And Debit Cardholders Leaked Through Dark Web

Sensitive data related to around seven million credit and debit cardholders has surfaced online through dark Web, according to a security researcher
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X