For Quick Alerts
ALLOW NOTIFICATIONS  
For Daily Alerts

ಕೊರೊನಾ ವೈರಸ್ ಎಫೆಕ್ಟ್; 3 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಯಿತು ತೈಲ ಬೆಲೆ

|

ದೇಶದ ಎಲ್ಲ ಪ್ರಮುಖ ನಗರಗಳಲ್ಲಿ ಡೀಸೆಲ್ ದರವು ಸೋಮವಾರ ಪ್ರತಿ ಲೀಟರ್ ಗೆ 7ರಿಂದ 8 ಪೈಸೆ ಇಳಿಕೆಯಾಗಿದೆ. ಇನ್ನು ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರವು ರು. 71.94 ಇದ್ದರೆ, ಮುಂಬೈನಲ್ಲಿ 77.6 ಇದೆ. ಕೋಲ್ಕತ್ತಾದಲ್ಲಿ ರು. 74.58 ಹಾಗೂ ಚೆನ್ನೈನಲ್ಲಿ ರು. 74.73 ಇದೆ.

ಸೋಮವಾರದ ದರ ಪರಿಷ್ಕರಣೆ ನಂತರ ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ ಇಂತಿದೆ. ದೆಹಲಿ- ರು. 64.70, ಮುಂಬೈ- ರು. 67.80, ಕೋಲ್ಕತ್ತಾ- ರು. 67.02 ಹಾಗೂ ಚೆನ್ನೈ- ರು. 68.32.

ಭಾರತದಲ್ಲಿ ಪೆಟ್ರೋಲ್- ಡೀಸೆಲ್ ದರವು ಪ್ರತಿ ದಿನ ಪರಿಷ್ಕರಣೆಯಾಗುತ್ತದೆ. ತೈಲ ಮಾರ್ಕೆಟಿಂಗ್ ಕಂಪೆನಿಗಳು ಪ್ರತಿ ದಿನ ಬೆಳಗ್ಗೆ 6 ಗಂಟೆಗೆ ತೈಲ ದರದ ಪರಿಷ್ಕರಣೆ ಮಾಡುತ್ತಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ, ಅಮೆರಿಕ ಡಾಲರ್ ವಿರುದ್ಧದ ರುಪಾಯಿ ವಿನಿಮಯ ಮೌಲ್ಯವು ಪೆಟ್ರೋಲ್- ಡೀಸೆಲ್ ಬೆಲೆಗಳ ಮೇಲೆ ಪರಿಣಾಮ ಬೀರುತ್ತವೆ.

ಕೊರೊನಾ ವೈರಸ್ ಎಫೆಕ್ಟ್; 3 ತಿಂಗಳ ಕನಿಷ್ಠ ಮಟ್ಟಕ್ಕೆ ತೈಲ ಬೆಲೆ

ಚೀನಾದಲ್ಲಿ ಭಾರೀ ಪರಿಣಾಮ ಬೀರಿರುವ ಕೊರೊನಾ ವೈರಾಣುವಿನಿಂದ ತೈಲ ಬೇಡಿಕೆ ಮೇಲೂ ಪ್ರಭಾವ ಆಗಿದೆ. ಕಳೆದ ವಾರ ತೈಲ ಕಂಪೆನಿಗಳು ಸಬ್ಸಿಡಿ ರಹಿತ ಎಲ್ ಪಿಜಿ ಸಿಲಿಂಡರ್ ಗಳ ಬೆಲೆಯಲ್ಲಿ ಭಾರೀ ಏರಿಕೆ ಮಾಡಿದ್ದವು.

English summary

Petrol, Diesel Price Reached 3 Month Low

Due to Corona virus effect in China, low demand for oil. Retail price of Petrol and Diesel reached 3 month low.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X