ಪೆಟ್ರೋಲ್ ದರ ಲೀಟರ್ ಗೆ 29 ಪೈಸೆ ಏರಿಕೆ ಆಗುವ ಮೂಲಕ ಶುಕ್ರವಾರ (ಫೆಬ್ರವರಿ 12, 2021) ದೆಹಲಿಯಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ದಾಖಲಿಸಿದೆ. ನವದೆಹಲಿಯಲ್ಲಿ ಈಗ ಪೆಟ್ರೋಲ್ ಲೀಟರ್ ಗೆ ರು. 88.14 ಆಗಿದ್ದು, ಡೀಸೆಲ್ 35 ಪೈಸೆ ಏರಿಕೆಯಾಗಿ ಲೀಟರ್ ಗೆ ರು. 78.38 ಆಗಿದೆ. ಇನ್ನು ಮುಂಬೈನಲ್ಲಿ ಪೆಟ್ರೋಲ್ ಲೀಟರ್ ಗೆ ರು. 94.64 ಹಾಗೂ ಡೀಸೆಲ್ ರು. 85.32 ಇದೆ.
ತೈಲ ಬೆಲೆಯು ರಾಜ್ಯದಿಂದ ರಾಜ್ಯಕ್ಕೆ ಬೇರೆ ಆಗುತ್ತದೆ. ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್ ಮೇಲೆ ಬೆಲೆ ನಿರ್ಧಾರವಾಗುತ್ತದೆ. ಸದ್ಯಕ್ಕೆ ದೇಶದಲ್ಲಿ ದಾಖಲೆ ಎತ್ತರದಲ್ಲಿ ಇರುವುದರಿಂದ ಕೇಂದ್ರ ಅಬಕಾರಿ ಸುಂಕವನ್ನು ಇಳಿಕೆ ಮಾಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.
ಅಂತರರಾಷ್ಟ್ರೀಯ ಬೆಂಚ್ ಮಾರ್ಕ್ ದರ ಹಾಗೂ ವಿದೇಶಿ ವಿನಿಮಯ ದರ ಈ ಎರಡನ್ನೂ ಅವಲಂಬಿಸಿ, ಪ್ರತಿ ದಿನ ಪೆಟ್ರೋಲ್- ಡೀಸೆಲ್ ದರ ಪರಿಷ್ಕರಣೆ ಆಗುತ್ತದೆ.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್- ಡೀಸೆಲ್ ದರ ಹೀಗಿದೆ:
ಬೆಂಗಳೂರು: ರು. 91.09- ರು. 83.09
ಚೆನ್ನೈ: ರು. 90.44- ರು. 83.52
ಹೈದರಾಬಾದ್: ರು. 91.65- ರು. 85.50
ಮುಂಬೈ: ರು. 94.64- ರು. 85.32
ನವದೆಹಲಿ: ರು. 88.14- ರು. 78.38
ಕೋಲ್ಕತ್ತಾ: ರು. 89.44- ರು. 81.96


Click it and Unblock the Notifications