For Quick Alerts
ALLOW NOTIFICATIONS  
For Daily Alerts

ಸಾರ್ವಕಾಲಿಕ ದಾಖಲೆ ಬರೆದ ಪೆಟ್ರೋಲ್: ಬೆಂಗಳೂರಲ್ಲಿ ಡೀಸೆಲ್ ರು. 79.94

|

ಸರ್ಕಾರಿ ಸ್ವಾಮ್ಯದ ತೈಲ ಮಾರ್ಕೆಟಿಂಗ್ ಕಂಪೆನಿಗಳು ಸತತ ಎರಡನೇ ದಿನವಾದ ಮಂಗಳವಾರ (ಜನವರಿ 19, 2021) ಏರಿಕೆ ಕಂಡಿದ್ದು, ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಪೆಟ್ರೋಲ್ ದರವು ಲೀಟರ್ ಗೆ 25 ಪೈಸೆ ಏರಿಕೆಯಾಗಿ, ನವದೆಹಲಿಯಲ್ಲಿ ರು. 85.20, ಬೆಂಗಳೂರಿನಲ್ಲಿ ರು. 88.07, ಕೋಲ್ಕತ್ತಾದಲ್ಲಿ ರು. 86.63, ಮುಂಬೈನಲ್ಲಿ ರು. 91.80 ಮತ್ತು ಚೆನ್ನೈನಲ್ಲಿ ರು. 87.85 ಇದೆ.

ಡೀಸೆಲ್ ದರವು ಲೀಟರ್ ಗೆ 25 ಪೈಸೆ ಏರಿಕೆಯಾಗಿ, ನವದೆಹಲಿಯಲ್ಲಿ ರು. 75.38 ಇದ್ದರೆ, ಬೆಂಗಳೂರಿನಲ್ಲಿ ರು. 79.94, ಕೋಲ್ಕತ್ತಾದಲ್ಲಿ ರು. 78.97, ಮುಂಬೈನಲ್ಲಿ ರು. 82.13 ಮತ್ತು ಚೆನ್ನೈನಲ್ಲಿ ರು. 80.67 ಇದೆ. ಪೆಟ್ರೋಲ್- ಡೀಸೆಲ್ ದರವು ಎನ್ ಸಿಆರ್ ನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ.

ಪೆಟ್ರೋಲ್- ಡೀಸೆಲ್ ಗೆ ನೀವು ನೀಡುವ ಬೆಲೆಯಲ್ಲಿ 48% ಕೇಂದ್ರದ ಸುಂಕಪೆಟ್ರೋಲ್- ಡೀಸೆಲ್ ಗೆ ನೀವು ನೀಡುವ ಬೆಲೆಯಲ್ಲಿ 48% ಕೇಂದ್ರದ ಸುಂಕ

29 ದಿನಗಳ ಕಾಲ ಪೆಟ್ರೋಲ್ ದರದಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಜನವರಿಯಲ್ಲಿ ತೈಲ ಮಾರ್ಕೆಟಿಂಗ್ ಕಂಪೆನಿಗಳು ಬೆಲೆ ಏರಿಕೆಯನ್ನು ಮಾಡಿತ್ತು. ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆ ಮತ್ತು ವಿದೇಶಿ ವಿನಿಮಯ ಮತ್ತಿತರ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು, ತೈಲ ಮಾರ್ಕೆಟಿಂಗ್ ಕಂಪೆನಿಗಳು ಪ್ರತಿ ನಿತ್ಯ ದರ ಪರಿಷ್ಕರಣೆ ಮಾಡುತ್ತವೆ.

ಸಾರ್ವಕಾಲಿಕ ದಾಖಲೆ ಬರೆದ ಪೆಟ್ರೋಲ್: ಬೆಂಗಳೂರಲ್ಲಿ ಡೀಸೆಲ್ ರು. 79.94

ಈ ಬಗ್ಗೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಮಾತನಾಡಿ, ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ತೈಲ ಉತ್ಪಾದಿಸುವ ದೇಶಗಳಲ್ಲಿ ತೈಲ ಉತ್ಪಾದನೆ ಕಡಿಮೆ ಆಗಿರುವುದರಿಂದ ಬೆಲೆ ಏರಿಕೆ ಆಗಿದೆ. ಬೇಡಿಕೆ ಮತ್ತು ಪೂರೈಕೆ ಅಸಮತೋಲನದ ಕಾರಣಕ್ಕೆ ಉತ್ಪಾದನೆ ಕಡಿಮೆ ಆಗಿದೆ ಎಂದಿದ್ದಾರೆ.

English summary

Petrol Price At All Time High In New Delhi; Diesel Price In Bengaluru Near Rs 80

Petrol price in all time high in New Delhi on January 19, 2021. Diesel price in Bengaluru near at Rs 80.
Story first published: Tuesday, January 19, 2021, 13:13 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X