ಇಂದು (ಗುರುವಾರ, ಜೂನ್ 18, 2020) ಕೂಡ ಪೆಟ್ರೋಲ್, ಡೀಸೆಲ್ ದರದಲ್ಲಿ ಏರಿಕೆ ಆಗಿದೆ. ನವದೆಹಲಿಗೆ ಅನ್ವಯಿಸುವಂತೆ ಪೆಟ್ರೋಲ್ ದರ ಲೀಟರ್ ಗೆ 53 ಪೈಸೆ ಹಾಗೂ ಡೀಸೆಲ್ ದರದಲ್ಲಿ 64 ಪೈಸೆ ಏರಿಕೆ ಆಗಿದೆ. ಆ ಮೂಲಕ ಕೇವಲ 12 ದಿನದಲ್ಲಿ ಪೆಟ್ರೋಲ್ 6.55 ರುಪಾಯಿ ಹಾಗೂ ಡೀಸೆಲ್ ದರದಲ್ಲಿ 7.04 ರುಪಾಯಿ ಹೆಚ್ಚಳ ಆದಂತಾಗಿದೆ.
ಈಗ ಈ ಎರಡರ ದರವೂ ಭಾರತದಲ್ಲಿ 19 ತಿಂಗಳ ಗರಿಷ್ಠ ಮಟ್ಟಕ್ಕೆ ಮುಟ್ಟಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ದರವು ಬ್ಯಾರಲ್ ಗೆ $ 40 ನಷ್ಟಿದೆ. ಇನ್ನು ಕೊರೊನಾ ಹಿಂದಿನ ಸ್ಥಿತಿಗೆ ಈಗ ಬೇಡಿಕೆ ನಿಧಾನಕ್ಕೆ ಹಿಂತಿರುಗುತ್ತಿದೆ. ಭಾರತದ ಪ್ರಮುಖ ನಗರಗಳಲ್ಲಿ ಪೆಟ್ರೋಲ್- ಡೀಸೆಲ್ ದರಗಳು ಇಂತಿವೆ.

ಪ್ರಮುಖ ನಗರಗಳಲ್ಲಿನ ಪೆಟ್ರೋಲ್- ಡೀಸೆಲ್ ದರ
ನವದೆಹಲಿ: ಪೆಟ್ರೋಲ್ 77.81- ಡೀಸೆಲ್ 76.43
ಗುರ್ ಗಾಂವ್: ಪೆಟ್ರೋಲ್ 76.24- ಡೀಸೆಲ್ 69.08
ಮುಂಬೈ: ಪೆಟ್ರೋಲ್ 84.66- ಡೀಸೆಲ್ 74.93
ಚೆನ್ನೈ: ಪೆಟ್ರೋಲ್ 81.32- ಡೀಸೆಲ್ 74.23
ಹೈದರಾಬಾದ್: ಪೆಟ್ರೋಲ್ 80.77- ಡೀಸೆಲ್ 74.70
ಬೆಂಗಳೂರು: ಪೆಟ್ರೋಲ್ 80.33- ಡೀಸೆಲ್ 72.68


Click it and Unblock the Notifications