For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಸಾರ್ವಕಾಲಿಕ ಗರಿಷ್ಠ ದರ ದಾಟುವತ್ತ ಪೆಟ್ರೋಲ್

|

ನವದೆಹಲಿಯಲ್ಲಿ 29 ದಿನಗಳ ಕಾಲ ಯಾವುದೇ ಬದಲಾವಣೆ ಆಗದಿದ್ದ ಪೆಟ್ರೋಲ್- ಡೀಸೆಲ್ ದರವು ಬುಧವಾರ ಏರಿಕೆ ಆಗಿದೆ. ಪೆಟ್ರೋಲ್ ಲೀಟರ್ ಗೆ 26 ಪೈಸೆ ಏರಿಕೆಯಾಗಿ, ರು. 83.97 ಆಗಿದೆ. ಕೋಲ್ಕತ್ತಾದಲ್ಲಿ ರು. 85.44, ಮುಂಬೈನಲ್ಲಿ ರು. 90.60 ಮತ್ತು ಚೆನ್ನೈನಲ್ಲಿ ರು. 86.75, ಬೆಂಗಳೂರಿನಲ್ಲಿ ರು. 86.79 ಇದೆ.

ಇನ್ನು ಡೀಸೆಲ್ ದರದಲ್ಲಿ ಲೀಟರ್ ಗೆ 25 ಪೈಸೆ ಹೆಚ್ಚಳವಾಗಿದೆ. ನವದೆಹಲಿಯಲ್ಲಿ ರು. 74.12, ಕೋಲ್ಕತ್ತಾದಲ್ಲಿ ರು. 77.70, ಮುಂಬೈನಲ್ಲಿ ರು. 80.78 ಹಾಗೂ ಚೆನ್ನೈನಲ್ಲಿ ರು. 79.46, ಬೆಂಗಳೂರಿನಲ್ಲಿ ರು. 78.59 ಇದೆ. ಈಗ ದೆಹಲಿಯಲ್ಲಿ ಪೆಟ್ರೋಲ್ ದರವು ಲೀಟರ್ 84 ರುಪಾಯಿ ಇದ್ದು, 2018ರ ಸೆಪ್ಟೆಂಬರ್ ನಲ್ಲಿ ಇದ್ದ ಸಾರ್ವಕಾಲಿಕ ಗರಿಷ್ಠ ಮಟ್ಟದ ಸಮೀಪ ಇದೆ.

ಕೇಂದ್ರ ಬಜೆಟ್ 2021- 22 ಫೆಬ್ರವರಿ 1ಕ್ಕೆ ಮಂಡನೆಕೇಂದ್ರ ಬಜೆಟ್ 2021- 22 ಫೆಬ್ರವರಿ 1ಕ್ಕೆ ಮಂಡನೆ

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಏರಿಕೆ ಆದ ಹಿನ್ನೆಲೆಯಲ್ಲಿ ಭಾರತದಲ್ಲಿ ರೀಟೇಲ್ ದರದಲ್ಲಿ ಏರಿಕೆ ಆಗಿದೆ. ತೈಲ ದರಕ್ಕೆ ಅಂತರರಾಷ್ಟ್ರೀಯ ಬೆಂಚ್ ಮಾರ್ಕ್ ಬ್ರೆಂಟ್ ಕ್ರೂಡ್ ಬ್ಯಾರೆಲ್ ಗೆ $ 53.94 ಆಗಿದೆ. ಕಳೆದ ವರ್ಷದ ಫೆಬ್ರವರಿ ನಂತರ ಕಂಡುಬಂದಿರುವ ಅತ್ಯಂತ ಹೆಚ್ಚಿನ ದರ ಇದು.

ಭಾರತದಲ್ಲಿ ಸಾರ್ವಕಾಲಿಕ ಗರಿಷ್ಠ ದರ ದಾಟುವತ್ತ ಪೆಟ್ರೋಲ್

ಅಂತರರಾಷ್ಟ್ರೀಯ ಕಚ್ಚಾ ತೈಲ ದರ ಮತ್ತು ಡಾಲರ್ ವಿರುದ್ಧದ ರುಪಾಯಿ ಮೌಲ್ಯ ಇತರ ಅಂಶಗಳ ಆಧಾರದಲ್ಲಿ ತೈಲ ಮಾರ್ಕೆಟಿಂಗ್ ಕಂಪೆನಿಗಳಿಂದ ಭಾರತದಲ್ಲಿ ತೈಲ ದರವು ನಿತ್ಯ ಪರಿಷ್ಕರಣೆ ಆಗುತ್ತದೆ.

English summary

Petrol Price Near To All Time High In India

Petrol price in India close to breach all time high. Petrol per litre near Rs 84 in New Delhi on January 6, 2021.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X