ಡಿಸೆಂಬರ್ 25ರ ಪೆಟ್ರೋಲ್-ಡೀಸೆಲ್ ಬೆಲೆ
ಸತತ 6 ದಿನಗಳ ಏರಿಕೆ ಬಳಿಕ ಪೆಟ್ರೋಲ್-ಡೀಸೆಲ್ ದರದಲ್ಲಿ ಸ್ಥಿರತೆ ಕಂಡುಬಂದಿದೆ. ಡಿಸೆಂಬರ್ 25ರಂದು ತೈಲ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಪೆಟ್ರೋಲ್ ಬೆಲೆಯು ಏಂಟನೇ ದಿನವೂ ಸ್ಥಿರವಾಗಿದೆ. ನವೆದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ದರವು 74.63 ರುಪಾಯಿ ಮತ್ತು ಡೀಸೆಲ್ ಬೆಲೆಯು ಲೀಟರ್‌ಗೆ 66.99 ರುಪಾಯಿ ಆಗಿದೆ.
ಕಳೆದ ತಿಂಗಳು ಡೀಸೆಲ್ ಬೆಲೆಯು ಪ್ರತಿ ಲೀಟರ್‌ಗೆ 65 ರಿಂದ 66 ರುಪಾಯಿಗಳ ಒಳಗೆ ಏರಿಳಿತ ಕಾಣುತ್ತಿತ್ತು. ಹಾಗೆಯೇ ಪೆಟ್ರೋಲ್ ಕಳೆದ ತಿಂಗಳಿನಲ್ಲಿ ಲೀಟರ್‌ಗೆ 2.30 ರುಪಾಯಿ ಏರಿಕೆ ದಾಖಲಿಸಿತ್ತು. ಭಾರತದಲ್ಲಿ ಇಂಧನದ ಚಿಲ್ಲರೆ(ರಿಟೈಲ್) ದರವನ್ನು ನಿಗದಿಪಡಿಸಲು ಅಂತರರಾಷ್ಟ್ರೀಯ ಕಚ್ಚಾ ಬೆಲೆಗಳು ಮತ್ತು ವಿದೇಶಿ ವಿನಿಮಯ ದರಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ಪೆಟ್ರೋಲ್ ದರವು ಈ ಕೆಳ ಕಂಡ ನಗರಗಳಲ್ಲಿ ಹೀಗಿವೆ
ನವದೆಹಲಿಯಲ್ಲಿ ರು. 74.63
ಮುಂಬೈನಲ್ಲಿ ರು. 80.29
ಬೆಂಗಳೂರಿನಲ್ಲಿ ರು. 77.18
ಚೆನ್ನೈನಲ್ಲಿ ರು. 77.58
ಹೈದ್ರಾಬಾದ್ ರು. 74.92
ಕೋಲ್ಕತ್ತಾದಲ್ಲಿ ರು. 77.29
ಡೀಸಲ್ ದರ ಈ ಕೆಳಕಂಡ ನಗರಗಳಲ್ಲಿ ಹೀಗಿವೆ.
ನವದೆಹಲಿಯಲ್ಲಿ ರು. 66.99
ಮುಂಬೈನಲ್ಲಿ ರು. 70.28
ಬೆಂಗಳೂರಿನಲ್ಲಿ ರು. 69.27
ಚೆನ್ನೈ ನಲ್ಲಿ ರು. 70.82
ಹೈದ್ರಾಬಾದ್ ರು. 73.10
ಕೋಲ್ಕತ್ತಾದಲ್ಲಿ ರು.. 69.40