For Quick Alerts
ALLOW NOTIFICATIONS  
For Daily Alerts

ದೆಹಲಿಯಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿದ ಪೆಟ್ರೋಲ್: ನಿಮ್ಮ ನಗರದಲ್ಲೆಷ್ಟು?

|

ದೆಹಲಿಯಲ್ಲಿ ಜನವರಿ 18ನೇ ತಾರೀಕಿನ ಸೋಮವಾರ ಪೆಟ್ರೋಲ್ ದರವು ಲೀಟರ್ ಗೆ ರು. 84.95 ತಲುಪಿರುವುದರಿಂದ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿದೆ. ತೈಲ ಮಾರ್ಕೆಟಿಂಗ್ ಕಂಪೆನಿಗಳ ಅಧಿಸೂಚನೆ ಅನ್ವಯ ದೆಹಲಿ ಮತ್ತು ಇತರ ಕಡೆಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಲೀಟರ್ ಗೆ ತಲಾ 25 ಪೈಸೆ ಹೆಚ್ಚಳ ಆಗಿದೆ.

ಇಂದಿನ ಬೆಲೆ ಏರಿಕೆ ನಂತರ ದೆಹಲಿಯಲ್ಲಿ ಪೆಟ್ರೋಲ್ ದರ ಸಾರ್ವಕಾಲಿಕ ಗರಿಷ್ಠ ಮಟ್ಟ ಲೀಟರ್ ಗೆ ರು. 84.95 ತಲುಪಿತು. ಇನ್ನು ಮುಂಬೈನಲ್ಲಿ ಲೀಟರ್ ಗೆ ರು. 91.56 ಇದೆ. ಡೀಸೆಲ್ ದರದ ವಿಚಾರಕ್ಕೆ ಬಂದರೆ, ದೆಹಲಿಯಲ್ಲಿ ಲೀಟರ್ ಗೆ ರು. 71.13 ಹಾಗೂ ಮುಂಬೈನಲ್ಲಿ ರು. 81.87 ಇದೆ.

 

ಪೆಟ್ರೋಲ್- ಡೀಸೆಲ್ ಗೆ ನೀವು ನೀಡುವ ಬೆಲೆಯಲ್ಲಿ 48% ಕೇಂದ್ರದ ಸುಂಕ

ಒಂದು ತಿಂಗಳ ಕಾಲ ಪೆಟ್ರೋಲ್- ಡೀಸೆಲ್ ದರ ಪರಿಷ್ಕರಣೆ ಆಗಿರಲಿಲ್ಲ. ಜನವರಿ 6ನೇ ತಾರೀಕಿನಂದು ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂನಿಂದ ಪರಿಷ್ಕರಣೆ ಆಯಿತು. ಈ ಹಿಂದೆ ಪೆಟ್ರೋಲ್ ದರವು ದೆಹಲಿಯಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ ರು. 84 ಅನ್ನು ಅಕ್ಟೋಬರ್ 4, 2018ರಂದು ತಲುಪಿತ್ತು. ಅದೇ ದಿನ ಡೀಸೆಲ್ ದರ ಸಾರ್ವಕಾಲಿಕ ಗರಿಷ್ಠ ಮಟ್ಟ ರು. 75.45 ಮುಟ್ಟಿತ್ತು.

ಪ್ರಮುಖ ನಗರಗಳಲ್ಲಿ ಪೆಟ್ರೋಲ್ ದರ (ಲೀಟರ್)

ಬೆಂಗಳೂರು ರು. 87.82

ಚೆನ್ನೈ ರು. 87.64

ಹೈದರಾಬಾದ್ ರು. 88.37

ಮುಂಬೈ ರು. 91.56

ದೆಹಲಿ ರು. 84.95

ಕೋಲ್ಕತ್ತಾ ರು. 86.39

ದೆಹಲಿಯಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿದ ಪೆಟ್ರೋಲ್ ದರ

ಪ್ರಮುಖ ನಗರಗಳಲ್ಲಿ ಡೀಸೆಲ್ ದರ (ಲೀಟರ್)

ಬೆಂಗಳೂರು ರು. 79.67

ಚೆನ್ನೈ ರು. 80.44

ಹೈದರಾಬಾದ್ ರು. 81.99

ಮುಂಬೈ ರು. 81.87

ದೆಹಲಿ ರು. 75.13

ಕೋಲ್ಕತ್ತಾ ರು. 78.72

English summary

Petrol Rate Touches All Time High In New Delhi

Petrol price in New Delhi touched all time high in January 18, 2021. Here is the petrol and diesel price in India's major cities.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X