For Quick Alerts
ALLOW NOTIFICATIONS  
For Daily Alerts

PF New Rule: ತೆರಿಗೆ ತಪ್ಪಿಸಬೇಕಾದರೆ ಪಿಎಫ್‌ ಹೊಸ ನಿಯಮ ತಿಳಿಯಿರಿ!

|

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ 2023 ಅನ್ನು ಫೆಬ್ರವರಿ 1ರಂದು ಮಂಡನೆ ಮಾಡಿದ್ದಾರೆ. ಈ ಸಂದರ್ಭದಲ್ಲೆ ಟಿಡಿಎಸ್ ಅನ್ನು ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ಯಾನ್‌ ಇಲ್ಲದ ಇಪಿಎಫ್‌ ಖಾತೆಗಳಿಗೆ ತೆರಿಗೆಯನ್ನು ಶೇಕಡ 30ರಿಂದ ಶೇಕಡ 20ಕ್ಕೆ ಇಳಿಕೆ ಮಾಡುವ ಪ್ರಸ್ತಾಪವನ್ನು ವಿತ್ತ ಸಚಿವೆ ಈ ಸಂದರ್ಭದಲ್ಲೇ ಮಾಡಿದ್ದಾರೆ.

 

ಹೊಸ ಆದಾಯ ತೆರಿಗೆ ನಿಯಮದ ಪ್ರಕಾರ ಪಿಎಫ್ ಪಾವತಿದಾರರು ಇಪಿಎಫ್‌ ವಿತ್‌ಡ್ರಾ ಮಾಡುವಾಗ ಕೊಂಚ ಎಡವಿದರೂ ತೆರಿಗೆಯನ್ನು ಪಾವತಿ ಮಾಡಬೇಕಾಗುತ್ತದೆ. ಹೌದು ಹೊಸ ನಿಯಮದ ಪ್ರಕಾರ ನೀವು ಪಿಎಫ್ ಖಾತೆಯನ್ನು ತೆರೆದು 5 ವರ್ಷಗಳಾಗಿಲ್ಲದಿದ್ದರೆ, ಪಿಎಫ್ ಮೊತ್ತದ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಹಾಗೆಯೇ ವಾರ್ಷಿಕವಾಗಿ 2.5 ಲಕ್ಷ ರೂಪಾಯಿಗಿಂತ ಅಧಿಕ ಆದಾಯವನ್ನು ಹೊಂದಿದ್ದರೂ ನಿಮಗೆ ಪಿಎಫ್‌ ಮೊತ್ತದ ಮೇಲೆ ತೆರಿಗೆ ವಿಧಿಸಲಾಗುತ್ತದೆ.

 

ದೀಪಾವಳಿ ಬಳಿಕ ಪಿಎಫ್‌ ಬಡ್ಡಿದರ ಜಮೆ ಸಾಧ್ಯತೆ, ಹೀಗೆ ಚೆಕ್ ಮಾಡಿದೀಪಾವಳಿ ಬಳಿಕ ಪಿಎಫ್‌ ಬಡ್ಡಿದರ ಜಮೆ ಸಾಧ್ಯತೆ, ಹೀಗೆ ಚೆಕ್ ಮಾಡಿ

ದೀಪಾವಳಿ ಬಳಿಕ ಪಿಎಫ್‌ ಬಡ್ಡಿದರ ಜಮೆ ಸಾಧ್ಯತೆ, ಹೀಗೆ ಚೆಕ್ ಮಾಡಿ

"ಪ್ಯಾನ್ ಲಿಂಕ್ ಆಗಿರದ ಪ್ರಾವಿಡೆಂಟ್ ಫಂಡ್ ಖಾತೆಗೆ ಪ್ರಸ್ತುತ ಶೇಕಡ 30ರಷ್ಟು ಬಡ್ಡಿದರವನ್ನು ವಿಧಿಸಲಾಗುತ್ತದೆ. ಆದರೆ ಇದನ್ನು ಶೇಕಡ 20ಕ್ಕೆ ಇಳಿಸುವ ನಿರ್ಧಾರವನ್ನು ನಾವು ಮಾಡಿದ್ದೇವೆ. ಇದು ಪ್ಯಾನ್ ಲಿಂಕ್ ಆಗದ ಪ್ರಕರಣಗಳಿಗೆ ಅನ್ವಯವಾಗಲಿದೆ," ಎಂದು ಕೇಂದ್ರ ಹಣಕಾಸು ಸಚಿವೆ ಬಜೆಟ್ ಮಂಡನೆ ಮಾಡುವಾಗ ತಿಳಿಸಿದ್ದಾರೆ.

 PF New Rule: ತೆರಿಗೆ ತಪ್ಪಿಸಬೇಕಾದರೆ ಪಿಎಫ್‌ ಹೊಸ ನಿಯಮ ತಿಳಿಯಿರಿ!

ತೆರಿಗೆಗೆ ಒಳಪಡುವ ಆದಾಯ

ಈ ಬಗ್ಗೆ ಮಾಹಿತಿ ನೀಡಿದ ತೆರಿಗೆ ತಜ್ಞ ಬಲ್ವಂತ್ ಜೈನ್, "ನೀವು ಐದು ವರ್ಷಕ್ಕೂ ಮುನ್ನ ತೆರಿಗೆಯನ್ನು ಪಾವತಿ ಮಾಡಿದರೆ ನಿಮಗೆ ನಿಮ್ಮ ಪಿಎಫ್‌ ಮೊತ್ತದ ಮೇಲೆ ತೆರಿಗೆಯನ್ನು ವಿಧಿಸಲಾಗುತ್ತದೆ. ಪಿಎಫ್ ಖಾತೆಯಲ್ಲಿ ಪ್ಯಾನ್ ಕಾರ್ಡ್ ಲಿಂಕ್ ಆಗಿದ್ದರೆ ಹಣ ವಿತ್‌ಡ್ರಾ ಮಾಡಿದರೆ ಯಾವುದೇ ಟಿಡಿಎಸ್ ವಿಧಿಸಲಾಗುವುದಿಲ್ಲ. ಪ್ಯಾನ್ ಲಿಂಕ್ ಆಗಿಲ್ಲದಿದ್ದರೆ ಪಿಎಫ್ ಖಾತೆಯ ಮೊತ್ತವನ್ನು ತೆರಿಗೆಗೆ ಅನ್ವಯವಾಗುವ ಆದಾಯಕ್ಕೆ ಸೇರ್ಪಡೆ ಮಾಡಲಾಗುತ್ತದೆ," ಎಂದು ತಿಳಿಸಿದ್ದಾರೆ.

ಪ್ರಾವಿಡೆಂಟ್ ಫಂಡ್ ಖಾತೆಗೆ ಪ್ಯಾನ್ ಕಾರ್ಡ್ ಲಿಂಕ್ ಆಗಿಲ್ಲದಿದ್ದರೆ, ಪಿಎಫ್‌ ಖಾತೆಯ ಒಟ್ಟು ಮೊತ್ತದಿಂದ ನಿವ್ವಳ ಮೊತ್ತವನ್ನು ಕಡಿತಗೊಳಿಸಲಾಗುತ್ತದೆ. ಟಿಡಿಎಸ್ ದರ ಪ್ರಸ್ತುತ ಶೇಕಡ 30ರಷ್ಟು ಆಗಿದೆ. ಇದನ್ನು ಏಪ್ರಿಲ್ 2023ರಿಂದ ಅಥವಾ ಹಣಕಾಸು ವರ್ಷ 2023-2024ರಿಂದ ಜಾರಿಗೆ ಬರುವಂತೆ ಶೇಕಡ 20ಕ್ಕೆ ಇಳಿಸಲಾಗುತ್ತದೆ ಎಂದು ಕೂಡಾ ಮಾಹಿತಿ ನೀಡಿದ್ದಾರೆ.

English summary

PF New Rule: PF Withdrawal Will Be Taxable If Money Withdrawn Before 5 Years

Provident Fund New Rule: PF Withdrawal Will Be Taxable If Money Withdrawn Before 5 Years Of Account Opening.
Story first published: Saturday, February 4, 2023, 18:18 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X