For Quick Alerts
ALLOW NOTIFICATIONS  
For Daily Alerts

ಪಿಎಂ ಕಿಸಾನ್‌: 12ನೇ ಕಂತಿನಲ್ಲಿ 16,000 ಕೋಟಿ ರೂಪಾಯಿ ಜಮೆ

|

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ (ಪಿಎಂ ಕಿಸಾನ್) 12ನೇ ಕಂತನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಕ್ಟೋಬರ್ 17, 2022ರಂದು ಬಿಡುಗಡೆ ಮಾಡಿದ್ದಾರೆ. ಒಟ್ಟು ಫಲಾನುಭವಿಗಳ ಖಾತೆಗೆ ಪ್ರಧಾನಿ ಮೋದಿ 12ನೇ ಕಂತಿನಲ್ಲಿ 16,000 ಕೋಟಿ ರೂಪಾಯಿ ಜಮೆ ಮಾಡಿದ್ದಾರೆ.

2018ರಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು, ವಾರ್ಷಿಕವಾಗಿ ರೈತರಿಗೆ ಆರು ಸಾವಿರ ರೂಪಾಯಿ ನೀಡಲಾಗುತ್ತದೆ. ಈ ಆರು ಸಾವಿರ ರೂಪಾಯಿಯನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತದೆ. ಪ್ರತಿ ನಾಲ್ಕು ತಿಂಗಳಿಗೆ ಒಂದು ಕಂತಿನಂತೆ ಪ್ರತಿ ಕಂತಿನಲ್ಲಿ ಎರಡು ಸಾವಿರ ರೂಪಾಯಿಯನ್ನು ಪಿಎಂ ಕಿಸಾನ್ ಯೋಜನೆ ಫಲಾನುಭವಿಗಳಾದ ರೈತರ ಖಾತೆಗೆ ಹೂಡಿಕೆ ಮಾಡಲಾಗುತ್ತದೆ.

ಪಿಎಂ ಕಿಸಾನ್ ಯೋಜನೆ: ಸೋಮವಾರ 12ನೇ ಕಂತು ಬಿಡುಗಡೆ- ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಪರಿಶೀಲಿಸಿಪಿಎಂ ಕಿಸಾನ್ ಯೋಜನೆ: ಸೋಮವಾರ 12ನೇ ಕಂತು ಬಿಡುಗಡೆ- ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಪರಿಶೀಲಿಸಿ

ಈವರೆಗೆ ಫಲಾನುಭವಿಗಳು ಎರಡು ಲಕ್ಷ ಕೋಟಿ ರೂಪಾಯಿಯನ್ನು ಈ ಯೋಜನೆಯಡಿಯಲ್ಲಿ ಪಡೆದಿದ್ದಾರೆ. ಇನ್ನು ಈ ಹಿಂದೆಯೇ ಕೆವೈಸಿ ಅಪ್‌ಡೇಟ್ ಮಾಡಲು ಕೇಳಲಾಗಿತ್ತು. ಹಲವಾರು ಬಾರಿ ಗಡುವು ವಿಸ್ತರಣೆ ಮಾಡಲಾಗಿತ್ತು. ಆದರೆ ಹಲವಾರು ಮಂದಿ ಇನ್ನು ಕೂಡಾ ಅಪ್‌ಡೇಟ್ ಮಾಡಿಲ್ಲ. ಆದ್ದರಿಂದಾಗಿ ಕಂತು ಲಭ್ಯವಾಗುವುದರಲ್ಲಿ ವ್ಯತ್ಯಯ ಉಂಟಾಗಬಹುದು.

 ಏನಿದು ಪಿಎಂ ಕಿಸಾನ್ ಯೋಜನೆ?

ಏನಿದು ಪಿಎಂ ಕಿಸಾನ್ ಯೋಜನೆ?

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯನ್ನು 2018ರಲ್ಲಿ ಪ್ರಧಾನಿ ಮೋದಿಯವರು ಪ್ರಾರಂಭಿಸಿದರು. ಕೆಲವು ವಿನಾಯಿತಿಗಳಿಗೆ ಒಳಪಟ್ಟು ಕೃಷಿಯೋಗ್ಯ ಭೂಮಿಯೊಂದಿಗೆ ದೇಶಾದ್ಯಂತ ಎಲ್ಲಾ ಭೂಮಾಲೀಕ ರೈತ ಕುಟುಂಬಗಳಿಗೆ ಆದಾಯ ಬೆಂಬಲವನ್ನು ಒದಗಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ಯೋಜನೆಯಡಿಯಲ್ಲಿ, ಪ್ರತಿ ವರ್ಷಕ್ಕೆ ರೂ 6000 ಮೊತ್ತವನ್ನು ಮೂರು ನಾಲ್ಕು ಮಾಸಿಕ ಕಂತುಗಳಲ್ಲಿ ತಲಾ ರೂ 2000 ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಬಿಡುಗಡೆ ಮಾಡಲಾಗುತ್ತದೆ. ಒಂದು ಹಣಕಾಸು ವರ್ಷದಲ್ಲಿ, ಪಿಎಂ ಕಿಸಾನ್ ಕಂತು ಮೂರು ಬಾರಿ ಲಭಿಸುತ್ತದೆ. ಅವಧಿ 1 ರಿಂದ ಏಪ್ರಿಲ್-ಜುಲೈ; ಅವಧಿ 2 ಆಗಸ್ಟ್ ನಿಂದ ನವೆಂಬರ್‌ವರೆಗೆ; ಮತ್ತು ಅವಧಿ 3 ಡಿಸೆಂಬರ್ ನಿಂದ ಮಾರ್ಚ್‌ವರೆಗೆ ಆಗಿರುತ್ತದೆ.

 ಪಿಎಂ ಇಕೆವೈಸಿ ಕಡ್ಡಾಯ

ಪಿಎಂ ಇಕೆವೈಸಿ ಕಡ್ಡಾಯ

ಪಿಎಂ ಕಿಸಾನ್ ವೆಬ್‌ಸೈಟ್ ಪ್ರಕಾರ ಪ್ರಸ್ತುತ ಇಕೆವೈಸಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ನೀವು ಇಕೆವೈಸಿ ಮಾಡಿಕೊಂಡಿಲ್ಲದಿದ್ದರೆ, ನಿಮ್ಮ ಖಾತೆಗೆ ಕಂತಿನ ಹಣ ಜಮೆ ಆಗದೆ ಇರಬಹುದು. ಆದ್ದರಿಂದ ಶೀಘ್ರವೇ ಇಕೆವೈಸಿ ಮಾಡಿಕೊಳ್ಳುವುದು ಉತ್ತಮ. ಇತ್ತೀಚೆಗೆ ಇಕೆವೈಸಿ ಗಡುವನ್ನು ಜುಲೈ 31, 2022ರವರೆಗೆ ವಿಸ್ತರಣೆ ಮಾಡಲಾಗಿದೆ. ಈ ಹಿಂದೆ ಗಡುವನ್ನು ಮೇ 31, 2022 ಕ್ಕೆ ನಿಗದಿಪಡಿಸಲಾಗಿತ್ತು. ಆದರೆ ಬಳಿಕ ವಿಸ್ತರಣೆ ಮಾಡಲಾಗಿದೆ. ಆಗಸ್ಟ್ 31ರವರೆಗೆ ಗಡುವು ವಿಸ್ತರಣೆ ಮಾಡಲಾಗಿತ್ತು. ನೀವು ಇಕೆವೈಸಿ ಮಾಡದಿದ್ದರೆ ಹಣ ಬಾರದೆ ಇರಬಹುದು.

 ಹಣ ಬಂದಿದೆಯೇ ನೋಡುವುದು ಹೇಗೆ?

ಹಣ ಬಂದಿದೆಯೇ ನೋಡುವುದು ಹೇಗೆ?

* ಮೊದಲು PM ಕಿಸಾನ್ ವೆಬ್‌ಸೈಟ್‌ಗೆ ಭೇಟಿ ನೀಡಿ
* ಬಳಿಕ Farmers Corner ಮೇಲೆ ಕ್ಲಿಕ್ ಮಾಡಿ
* ನಂತರ Beneficiary Status ಮೇಲೆ ಕ್ಲಿಕ್ ಮಾಡಿ
* ನಂತರದ ಪುಟದಲ್ಲಿ ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ನಮೂದಿಸಿ
* ಬಳಿಕ ಸ್ಟೇಟಸ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯುತ್ತೀರಿ

 ಹಣ ಬರದಿದ್ದರೆ ದೂರು ನೀಡಿ..

ಹಣ ಬರದಿದ್ದರೆ ದೂರು ನೀಡಿ..

ಒಂದು ವೇಳೆ ನಿಮಗೆ ಹನ್ನೆರಡನೆ ಕಂತಿನ ಹಣ ಜಮೆ ಆಗಿಲ್ಲದಿದ್ದರೆ, ನೀವು ಪಿಎಂ ಕಿಸಾನ್ ಸಹಾಯವಾಣಿ ಸಂಖ್ಯೆ - 011-24300606 ಗೆ ಕರೆ ಮಾಡಬಹುದು. ನೀವು ಪಿಎಂ ಕಿಸಾನ್ ಟೋಲ್ ಫ್ರೀ ಸಂಖ್ಯೆ 18001155266 ಕ್ಕೂ ಕೂಡಾ ಕರೆ ಮಾಡಬಹುದು. ಇದಲ್ಲದೇ ಇಮೇಲ್ ಕೂಡಾ ಮಾಡಬಹುದು. PMkisan-ict@gov.in ಗೆ ಮೇಲ್ ಮಾಡುವ ಮೂಲಕ ಪಿಎಂ ಕಿಸಾನ್ ಯೋಜನೆಯ 12 ನೇ ಕಂತಿಗೆ ಹಣವನ್ನು ಸ್ವೀಕರಿಸದ ಕಾರಣವನ್ನು ನೀವು ಕೇಳಬಹುದು.

PM Kisan Yojana KYC last date : ರೈತರಿಗೆ ಸಿಹಿಸುದ್ದಿ: ಪಿಎಂ ಕಿಸಾನ್ ಯೋಜನೆ ಇಕೆವೈಸಿ ಮತ್ತೆ ವಿಸ್ತರಣೆPM Kisan Yojana KYC last date : ರೈತರಿಗೆ ಸಿಹಿಸುದ್ದಿ: ಪಿಎಂ ಕಿಸಾನ್ ಯೋಜನೆ ಇಕೆವೈಸಿ ಮತ್ತೆ ವಿಸ್ತರಣೆ

English summary

PM Modi Releases PM KISAN 12th installment, Here's Details

PM Kisan 12th Installment Date 2022; PM Modi Releases PM KISAN 12th installment, Here's Details...
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X