For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ನವೆಂಬರ್ ತಿಂಗಳ ಉತ್ಪಾದನಾ ಚಟುವಟಿಕೆ ಮಂದಗತಿ

By ಅನಿಲ್ ಆಚಾರ್
|

ಭಾರತದ ಉತ್ಪಾದನಾ ಚಟುವಟಿಕೆಗಳ ಚೇತರಿಕೆಗೆ ನವೆಂಬರ್ ನಲ್ಲಿ ತಡೆಯಾಗಿದೆ. ಸಮೀಕ್ಷೆಗಳ ಪ್ರಕಾರ, ಸತತ ಎಂಟನೇ ತಿಂಗಳು ಸಂಸ್ಥೆಗಳು ಉದ್ಯೋಗ ಕಡಿತ ಮಾಡುತ್ತಿರುವುದು ತಿಳಿದುಬಂದಿದೆ. ಬೇಡಿಕೆ ಮತ್ತು ಉತ್ಪಾದನೆ ಮೇಲೆ ಕೊರೊನಾದ ಪ್ರಭಾವ ಆಗಿದೆ. ಐಎಚ್ ಎಸ್ ಮಾರ್ಕ್ ಇಟ್ ಸಂಗ್ರಹಿಸುವ ನಿಕೈ ಮ್ಯಾನ್ಯುಫ್ಯಾಕ್ಚರಿಂಗ್ ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್ (ಪಿಎಂಐ) ನವೆಂಬರ್ ನಲ್ಲಿ 56.3 ತಲುಪಿದೆ.

ಅಕ್ಟೋಬರ್ ತಿಂಗಳಲ್ಲಿ ಇದು ದಶಕಗಳಲ್ಲೇ ಅತಿ ಹೆಚ್ಚಿನ ಪ್ರಮಾಣದ 58.9 ಇತ್ತು. ಆದರೂ ಸೂಚ್ಯಂಕವು 50ಕ್ಕಿಂತ ಮೇಲ್ಮಟ್ಟದಲ್ಲೇ ಇದೆ. ಉಪ ಸೂಚ್ಯಂಕಗಳು ಒಟ್ಟಾರೆ ಬೇಡಿಕೆ ಮತ್ತು ಉತ್ಪಾದನೆಯ ಬೇಡಿಕೆಯನ್ನು ಉತ್ತೇಜಿಸುವುದು ತೋರಿಸುತ್ತದೆ. ಆದರೆ ವಿಸ್ತರಣೆ ದರವು ಮೂರು ತಿಂಗಳಲ್ಲೇ ಅತ್ಯಂತ ದುರ್ಬಲವಾಗಿದೆ.

FPIನಿಂದ ನವೆಂಬರ್ ನಲ್ಲಿ 62,591 ಕೋಟಿ ರು. ಗರಿಷ್ಠ ಹೂಡಿಕೆFPIನಿಂದ ನವೆಂಬರ್ ನಲ್ಲಿ 62,591 ಕೋಟಿ ರು. ಗರಿಷ್ಠ ಹೂಡಿಕೆ

ನವೆಂಬರ್ ತಿಂಗಳ ಬೆಳವಣಿಗೆಯನ್ನು ಅಳೆಯುವುದರಲ್ಲಿ ಪ್ರಮುಖ ಸಂಗತಿ ಆಗಿರುವುದು ಕೊರೊನಾ ಬಿಕ್ಕಟ್ಟು ಎಂಬುದನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಕೊರೊನಾಗೆ ಸಂಬಂಧಿಸಿದ ಅನಿಶ್ಚಿತತೆಯು ಉದ್ಯಮದ ವಿಶ್ವಾಸವನ್ನು ಮಿತಿಗೊಳಿಸಿದೆ. ಈಚೆಗೆ ದೇಶದ ಕೆಲವು ಭಾಗಗಳಲ್ಲಿ ಮತ್ತೆ ಕೊರೊನಾ ಸಂಖ್ಯೆ ಹೆಚ್ಚಳವಾದದ್ದರಿಂದ ಸಂಚಾರಕ್ಕೆ ನಿಯಂತ್ರಣ ಬಿತ್ತು ಮತ್ತು ಆರ್ಥಿಕ ಚೇತರಿಕೆಗೆ ಆತಂಕ ಎದುರಾಯಿತು.

ಭಾರತದಲ್ಲಿ ನವೆಂಬರ್ ತಿಂಗಳ ಉತ್ಪಾದನಾ ಚಟುವಟಿಕೆ ಮಂದಗತಿ

ಈ ಮಧ್ಯೆ ಇನ್ ಪುಟ್ ದರವು ಆಗಸ್ಟ್ ನಿಂದ ಈಚೆಗೆ ತೀರಾ ಜಾಸ್ತಿ ಆಗಿದೆ. ಇದರಿಂದಾಗಿ ಮಾರಾಟದ ಬೆಲೆಯನ್ನೂ ಶೀಘ್ರವಾಗಿ ಏರಿಸಲಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಗುರಿ ಹಾಕಿಕೊಂಡಿದ್ದ ಎರಡರಿಂದ ಆರು ಪರ್ಸೆಂಟ್ ಹಣದುಬ್ಬರ ದರದ ಮಿತಿಯನ್ನು ನಿಯಂತ್ರಿಸಲು ಆ ಕಾರಣಕ್ಕೆ ಆಗುತ್ತಿಲ್ಲ.

English summary

PMI Number Shows India's Manufacturing Activity Recovery Slows Down In November Month

PMI number shows that, India's manufacturing activity recovery slow down in the month of November. Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X