For Quick Alerts
ALLOW NOTIFICATIONS  
For Daily Alerts

ಶುಭ ಸುದ್ದಿ: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಇಳಿಕೆ

|

ವಾಣಿಜ್ಯ ಸಿಲಿಂಡರ್ ಮೇಲಿನ ಬೆಲೆಯಲ್ಲಿ ಕಡಿತ ಮಾಡಲಾಗಿದೆ. ಈ ಹಿಂದೆ ಜೂನ್ ಒಂದರಿಂದ ಜಾರಿಗೆ ಬರುವಂತೆ ವಾಣಿಜ್ಯ ಸಿಲಿಂಡರ್ ಮೇಲಿನ ಬೆಲೆಯು 135 ರೂಪಾಯಿ ಇಳಿಕೆಯಾಗಿತ್ತು. ಸೆಪ್ಟೆಂಬರ್ 1ರಿಂದ 18 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 91.5 ರು ಇಳಿಕೆಯಾಗಿದೆ.

ದೇಶದ ಪ್ರಮುಖ ನಗರಗಳಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಇಳಿಕೆ ಮಾಡಲಾಗಿದೆ. ಈ ಮೂಲಕ ಗ್ರಾಹಕರಿಗೆ ಸಿಹಿ ಸುದ್ದಿ ದೊರೆತಿದೆ. ದೆಹಲಿಯಲ್ಲಿ ಗುರುವಾರದಂದು ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ರೂಪಾಯಿ ಇಳಿಕೆ ಬಳಿಕ 1,976.50 ರು ನಿಂದ 1885 ರು ಗೆ ಇಳಿದಿದೆ.

ಮೇ ತಿಂಗಳಲ್ಲಿ ವಾಣಿಜ್ಯ ಬಳಕೆ ಏರಿಕೆಯಾಗಿ 2,354 ರು ಮುಟ್ಟಿತ್ತು. ನಂತರ ಪ್ರಮುಖ ನಗರಗಳಾದ ದೆಹಲಿ, ಕೋಲ್ಕತಾ, ಮುಂಬೈ ಹಾಗೂ ಚೆನ್ನೈನಲ್ಲಿ ಬೆಲೆ ತಗ್ಗಿತ್ತು.

ಇನ್ನು ಕೋಲ್ಕತ್ತಾದಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ಇಳಿಕೆಯಾಗಿ 2095 ರು ನಿಂದ 1995 ರು ಆಗಿದೆ. ಮುಂಬೈನಲ್ಲಿ ರೂಪಾಯಿ 1,936.50 ರು ನಿಂದ ಇಳಿಕೆಯಾಗಿ 1,844 ರು ಆಗಿದೆ. ಚೆನ್ನೈನಲ್ಲಿ 2,045 ರು ನಿಂದ 2,141ರು ಆಗಿದೆ.

ಶುಭ ಸುದ್ದಿ: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಇಳಿಕೆ

ಆದರೆ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಮೇ 19ರಂದು ಗೃಹ ಬಳಕೆಯ ಸಿಲಿಂಡರ್ ಬೆಲೆ ಏರಿಕೆ ಮಾಡಲಾಗಿತ್ತು.

ಬದಲಾಗಿಲ್ಲ ಗೃಹ ಬಳಕೆಯ ಎಲ್‌ಪಿಜಿ ದರ

ಈ ನಡುವೆ ಗೃಹ ಬಳಕೆಯ 14.2 ಕೆಜಿ ತೂಗುವ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕಳೆದ ತಿಂಗಳು ದೆಹಲಿಯಲ್ಲಿ ಬೆಲೆಯು 1053 ರು, ಕೋಲ್ಕತಾ 1079ರು, ಮುಂಬೈ 1052 ರು, ಚೆನ್ನೈ 1052 ರು, ಬೆಂಗಳೂರು 1055 ರು ಇದೆ. ಈ ನಡುವೆ ಕಳೆದ ಮೇ ತಿಂಗಳಿನಿಂದ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಬೆಲೆ ಸ್ಥಿರವಾಗಿದೆ.

ಎಟಿಎಫ್ ಇಳಿಕೆ

ಎಟಿಎಫ್ ಶೇಕಡ 0.7ರಷ್ಟು ಇಳಿಕೆಯಾಗಿದೆ. ಜೆಟ್ ಇಂಧನ ದರ ಕಿಲೋ ಮೀಟರ್‌ಗೆ ರೂಪಾಯಿ 874.13ರಷ್ಟು ಅಥವಾ ಶೇಕಡ 7ರಷ್ಟು ಇಳಿಕೆಯಾಗಿದೆ. ಪ್ರಸ್ತುತ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಿಲೋ ಮೀಟರ್‌ಗೆ 121,041.44 ರೂಪಾಯಿ ಆಗಿದೆ. ಸ್ಥಳೀಯವಾಗಿ ತೆರಿಗೆಯನ್ನು ಆಧಾರಿಸಿ ರಾಜ್ಯದಿಂದ ರಾಜ್ಯಕ್ಕೆ ದರವು ಬದಲಾವಣೆ ಆಗುತ್ತದೆ.

English summary

Price of commercial LPG cylinder slashed by Rs 91.50

According to pricing issued by Indian Oil on September 1, the 19 kg commercial cylinder (LPG Commercial Cylinder Price) in the capital Delhi became cheaper by Rs 91.5. Cylinder, previously priced at Rs 1,976.50, is now available in the national capital for Rs 1,885.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X