For Quick Alerts
ALLOW NOTIFICATIONS  
For Daily Alerts

ಹಳಿಗಳ ಮೇಲಿನ್ನು ಖಾಸಗಿ ರೈಲುಗಳು; ಆರಂಭ ಯಾವಾಗ ಗೊತ್ತಾ?

|

ನವದೆಹಲಿ: ದೇಶದ ಕೋಲ್‌ (ಕಲ್ಲಿದ್ದಲು) ಬ್ಲಾಕ್‌ಗಳನ್ನು ಖಾಸಗಿಯವರಿಗೆ ಹರಾಜು ಹಾಕಲು ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡ ಬೆನ್ನಲ್ಲೇ ಖಾಸಗೀಕರಣದ ಕುರಿತಂತೆ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

 

ಇನ್ಮುಂದೆ ಪ್ರಯಾಣಿಕರ ರೈಲು ಸೇವೆಯಲ್ಲಿ ಖಾಸಗಿಯವರಿಗೆ ಅವಕಾಶ ಮಾಡಿ ಕೊಡುವ ಮಹತ್ವದ ನಿರ್ಧಾರವನ್ನು ರೈಲ್ವೆ ಸಚಿವಾಲಯ ಘೋಷಣೆ ಮಾಡಿದೆ. ಸಚಿವಾಲಯದ ಪ್ರಸ್ತಾಪಕ್ಕೆ ಅನುಗುಣವಾಗಿ ಖಾಸಗಿ ಸಂಸ್ಥೆಗಳು 35 ವರ್ಷಗಳ ಕಾಲ ಪ್ರಯಾಣಿಕರ ರೈಲುಗಳನ್ನು ಓಡಿಸಬಹುದು. 109 ಮಾರ್ಗಗಳಲ್ಲಿ 151 ರೈಲುಗಳನ್ನು ಓಡಿಸುವುದನ್ನು ಇದು ಒಳಗೊಂಡಿದೆ.

ನಗರಗಳತ್ತ ವಲಸೆ ಕಾರ್ಮಿಕರು, ಆರ್ಥಿಕ ಪುನಶ್ಚೇತನದ ಸಂಕೇತ: ರೈಲ್ವೆ ಮಂಡಳಿನಗರಗಳತ್ತ ವಲಸೆ ಕಾರ್ಮಿಕರು, ಆರ್ಥಿಕ ಪುನಶ್ಚೇತನದ ಸಂಕೇತ: ರೈಲ್ವೆ ಮಂಡಳಿ

ಈ ಯೋಜನೆಯು ಖಾಸಗಿ ವಲಯದ ಹೂಡಿಕೆಗೆ ಸುಮಾರು ₹ 30,000 ಕೋಟಿ ಹರಿಸಲಿದೆ ಎಂದು ರೈಲ್ವೆ ಸಚಿವಾಲಯ ಹೇಳಿದೆ.

2023 ರ ವೇಳೆಗೆ ಕಾರ್ಯಾಚರಣೆ ಪ್ರಾರಂಭ

2023 ರ ವೇಳೆಗೆ ಕಾರ್ಯಾಚರಣೆ ಪ್ರಾರಂಭ

ಏಪ್ರಿಲ್ 2023 ರ ವೇಳೆಗೆ ಖಾಸಗಿ ರೈಲು ಕಾರ್ಯಾಚರಣೆ ಪ್ರಾರಂಭವಾಗುವ ಸಾಧ್ಯತೆಯಿದೆ. ಮೇಕ್ ಇನ್ ಇಂಡಿಯಾ ನೀತಿಯಡಿಯಲ್ಲಿ ಎಲ್ಲಾ ಬೋಗಿಗಳನ್ನು ಖರೀದಿಸಲಾಗುತ್ತದೆ. ಪ್ರಯಾಣಿಕರ ರೈಲು ಕಾರ್ಯಾಚರಣೆಯಲ್ಲಿ ಖಾಸಗಿ ಭಾಗವಹಿಸುವಿಕೆ ರೈಲ್ವೆಯ ಒಟ್ಟು ಕಾರ್ಯಾಚರಣೆಯ ಶೇ 5 ರಷ್ಟು ಮಾತ್ರ ಎಂದು ರೈಲ್ವೆ ಮಂಡಳಿಯ ಅಧ್ಯಕ್ಷರು ಗುರುವಾರ ತಿಳಿಸಿದ್ದಾರೆ.

ಭಾರೀ ಪ್ರಮಾಣದ ದಂಡ ಕೂಡ ಇದೆ

ಭಾರೀ ಪ್ರಮಾಣದ ದಂಡ ಕೂಡ ಇದೆ

ಪ್ರಯಾಣಿಕರ ರೈಲುಗಳನ್ನು ಓಡಿಸುವಲ್ಲಿ ಖಾಸಗಿ ಭಾಗವಹಿಸುವಿಕೆಯ ವಿಷಯದ ಕುರಿತು ಆನ್‌ಲೈನ್ ಸುದ್ದಿಗೋಷ್ಠಿಯಲ್ಲಿ ರೈಲ್ವೆ ಮಂಡಳಿಯ ಅಧ್ಯಕ್ಷ ವಿನೋದ್ ಕುಮಾರ್ ಯಾದವ್, ಪ್ರಯಾಣಿಕರ ರೈಲು ಕಾರ್ಯಾಚರಣೆಯಲ್ಲಿ ಖಾಸಗಿಯವರು ಯಾವುದೇ ಕಾರ್ಯಕ್ಷಮತೆ ಸೂಚಕಗಳನ್ನು ಪೂರೈಸದಿದ್ದರೆ ಅವರಿಗೆ ಭಾರೀ ಪ್ರಮಾಣದ ದಂಡ ವಿಧಿಸಲಾಗುತ್ತದೆ ಎಂದು ಹೇಳಿದ್ದಾರೆ.

ತೇಜಸ್ ಎಕ್ಸ್‌ಪ್ರೆಸ್ ಪರಿಚಯಿಸಲಾಗಿತ್ತು
 

ತೇಜಸ್ ಎಕ್ಸ್‌ಪ್ರೆಸ್ ಪರಿಚಯಿಸಲಾಗಿತ್ತು

ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಕರ ರೈಲುಗಳನ್ನು ಓಡಿಸಲು ಖಾಸಗಿ ಹೂಡಿಕೆಗೆ ಅವಕಾಶ ಮಾಡಿಕೊಟ್ಟಿರುವುದು ಇದು ಮೊದಲ ಉಪಕ್ರಮ. ಕಳೆದ ವರ್ಷ ಐಆರ್‌ಸಿಟಿಸಿ ವತಿಯಿಂದ ಲಕ್ನೋ-ದೆಹಲಿ ತೇಜಸ್ ಎಕ್ಸ್‌ಪ್ರೆಸ್ ಪರಿಚಯಿಸಲಾಗಿತ್ತು. ಸುಮಾರು 13,000 ರೈಲುಗಳನ್ನು ಓಡಿಸುವ ವಿಶ್ವದ ಅತಿದೊಡ್ಡ ರೈಲ್ವೆ ಜಾಲವಾದ ಭಾರತೀಯ ರೈಲ್ವೆಯಲ್ಲಿ ಸುಮಾರು 12 ಲಕ್ಷ ಜನರು ಕೆಲಸ ಮಾಡುತ್ತಾರೆ.

ರಾಹುಲ್ ಗಾಂಧಿ ತೀವ್ರ ವಿರೋಧ

ರಾಹುಲ್ ಗಾಂಧಿ ತೀವ್ರ ವಿರೋಧ

ರೈಲ್ವೆ ಖಾಸಗೀಕರಣಗೊಳಿಸುವ ಮೊದಲ ಹೆಜ್ಜೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರವಾಗಿ ಖಂಡಿಸಿದ್ದಾರೆ. ಭಾರತದ ಜನತೆ ಈ ಕ್ರಮವನ್ನು ಕ್ಷಮಿಸುವುದಿಲ್ಲ. ಆದರೆ ನೆನಪಿಡಿ, ಜನರು ಇದಕ್ಕೆ ಸೂಕ್ತ ಸಂದರ್ಭದಲ್ಲಿ ಸೂಕ್ತ ಪ್ರತಿಕ್ರಿಯೆ ನೀಡುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.

English summary

Private Trains Will Run In The Country By 2020

ಹಳಿಗಳ ಮೇಲಿನ್ನು ಖಾಸಗಿ ರೈಲುಗಳು; ಆರಂಭ ಯಾವಾಗ ಗೊತ್ತಾ?
Story first published: Thursday, July 2, 2020, 18:33 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X