For Quick Alerts
ALLOW NOTIFICATIONS  
For Daily Alerts

ಸಾರ್ವಜನಿಕ ಬ್ಯಾಂಕ್ ಗಳಿಗೆ ಮೂರು ತಿಂಗಳಲ್ಲಿ 19,964 ಕೋಟಿ ವಂಚನೆ

|

ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳಿಗೆ (PSB's) ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್ ನಿಂದ ಜೂನ್ ತ್ರೈಮಾಸಿಕದಲ್ಲಿ 2,867 ಪ್ರಕರಣಗಳಲ್ಲಿ 19,964 ಕೋಟಿ ರುಪಾಯಿ ವಂಚನೆ ಆಗಿದೆ ಎಂದು ಆರ್ ಟಿಐ ಅಡಿ ಹಾಕಿಕೊಂಡಿದ್ದ ಅರ್ಜಿಯಲ್ಲಿ ಪ್ರತಿಕ್ರಿಯೆ ಬಂದಿದೆ. ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ (ಎಸ್ ಬಿಐ) ಹೆಚ್ಚಿನ ಸಂಖ್ಯೆಯಲ್ಲಿ ವಂಚನೆಯಾಗಿವೆ. ಆದರೆ ಮೌಲ್ಯದ ದೃಷ್ಟಿಯಿಂದ ಬ್ಯಾಂಕ್ ಆಫ್ ಇಂಡಿಯಾಗೆ ಅತಿ ಹೆಚ್ಚು ವಂಚನೆಯಾಗಿದೆ.

ಆರ್ ಟಿಐ ಕಾರ್ಯಕರ್ತ ಚಂದ್ರ ಶೇಖರ್ ಗೌರ್ ಹಾಕಿಕೊಂಡಿದ್ದ ಅರ್ಜಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾಹಿತಿ ನೀಡಿದೆ. 2020ರ ಏಪ್ರಿಲ್ ನಿಂದ ಜೂನ್ ಮಧ್ಯೆ ಒಟ್ಟು 12 ಸಾರ್ವಜನಿಕ ಬ್ಯಾಂಕ್ ನಲ್ಲಿ ಎಸ್ ಬಿಐನಲ್ಲಿ ಅತಿ ಹೆಚ್ಚು, ಅಂದರೆ 2050 ವಂಚನೆ ಪ್ರಕರಣಗಳು ದಾಖಲಾಗಿದ್ದು, 2,325.88 ಕೋಟಿ ರುಪಾಯಿ ವಂಚನೆಯಾಗಿದೆ.

ಸಾರ್ವಜನಿಕ ಬ್ಯಾಂಕ್ ಗಳಿಗೆ ಮೂರು ತಿಂಗಳಲ್ಲಿ 19,964 ಕೋಟಿ ವಂಚನೆ

ಯಾವ ಬ್ಯಾಂಕ್ ಗೆ ಎಷ್ಟು ವಂಚನೆ?
ಬ್ಯಾಂಕ್ ಆಫ್ ಇಂಡಿಯಾ 47 ಪ್ರಕರಣ, 5,124.87 ಕೋಟಿ

ಕೆನರಾ ಬ್ಯಾಂಕ್ 33 ಪ್ರಕರಣ, 3,885.26 ಕೋಟಿ

ಬ್ಯಾಂಕ್ ಆಫ್ ಬರೋಡಾ 60 ಪ್ರಕರಣ, 2842.94 ಕೋಟಿ

ಇಂಡಿಯನ್ ಬ್ಯಾಂಕ್ 45 ಪ್ರಕರಣ, 1469.79 ಕೋಟಿ

ಇಂಡಿಯನ್ ಓವರ್ ಸೀಸ್ ಬ್ಯಾಂಕ್ 37 ಪ್ರಕರಣ, 1207.65 ಕೋಟಿ

ಬ್ಯಾಂಕ್ ಆಫ್ ಮಹಾರಾಷ್ಟ್ರ 9 ಪ್ರಕರಣ, 1,140.37 ಕೋಟಿ

ಪಂಜಾಬ್ ನ್ಯಾಷನಲ್ ಬ್ಯಾಂಕ್ 240 ಪ್ರಕರಣ, 270.65 ಕೋಟಿ

ಯುಕೋ ಬ್ಯಾಂಕ್ 130 ಪ್ರಕರಣ, 831.35 ಕೋಟಿ

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 149 ಪ್ರಕರಣ, 655.84 ಕೋಟಿ

ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್ 18 ಪ್ರಕರಣ, 163.3 ಕೋಟಿ

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 49 ಪ್ರಕರಣ, 46.52 ಕೋಟಿ

PMC Bank Scam: 100 ಕೋಟಿ ಮೌಲ್ಯದ 3 ಹೋಟೆಲ್ ಇ.ಡಿ.ಯಿಂದ ಮುಟ್ಟುಗೋಲುPMC Bank Scam: 100 ಕೋಟಿ ಮೌಲ್ಯದ 3 ಹೋಟೆಲ್ ಇ.ಡಿ.ಯಿಂದ ಮುಟ್ಟುಗೋಲು

ಈ ದತ್ತಾಂಶಗಳ ಪೈಕಿ ಕೆಲವು ಬದಲಾವಣೆ ಕೂಡ ಆಗಬಹುದು ಎಂದು ಆರ್ ಬಿಐ ಪ್ರತಿಕ್ರಿಯೆ ನೀಡಿದೆ.

English summary

Public Sector Banks Reported 19964 Crore Fraud Between April To June 2020

Public sector banks in India reported frauds worth over Rs 19,964 crore in total 2,867 cases during the April-June, 2020, according to a reply to an RTI query.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X