For Quick Alerts
ALLOW NOTIFICATIONS  
For Daily Alerts

ಬಜಾಜ್ ಆಟೋ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಬಜಾಜ್ ರಾಜೀನಾಮೆ

|

ದ್ವಿಚಕ್ರ ವಾಹನಗಳ ತಯಾರಕ ಬಜಾಜ್ ಆಟೋ ಅಧ್ಯಕ್ಷ ರಾಹುಲ್ ಬಜಾಜ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪರಿಣಾಮ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ನೀರಜ್ ಬಜಾಜ್ ಮೇ 1ರಿಂದ ಜಾರಿಗೆ ಬರುವಂತೆ ಬಜಾಜ್ ಆಟೋ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.

"ಕಂಪನಿಯ ಕಾರ್ಯನಿರ್ವಾಹಕೇತರ ಅಧ್ಯಕ್ಷ ರಾಹುಲ್ ಬಜಾಜ್ ಅವರ ವಯಸ್ಸನ್ನು ಪರಿಗಣಿಸಿ, 2021 ರ ಏಪ್ರಿಲ್ 30 ರಿಂದ ಜಾರಿಗೆ ಬರುವಂತೆ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಕಂಪನಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ'' ಎಂದು ಬಜಾಜ್ ಆಟೋ ಷೇರು ವಿನಿಮಯ ಕೇಂದ್ರಗಳಿಗೆ ತಿಳಿಸಿದೆ.

ಬಜಾಜ್ ಆಟೋ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಬಜಾಜ್ ರಾಜೀನಾಮೆ

ರಾಹುಲ್ ಬಜಾಜ್ ಬದಲಿಗೆ, ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ನೀರಜ್ ಬಜಾಜ್ 2021ರ ಮೇ 1ರಿಂದ ಬಜಾಜ್ ಆಟೋ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಕಳೆದ ಐದು ದಶಕಗಳಲ್ಲಿ ರಾಹುಲ್ ಬಜಾಜ್ ಕಂಪನಿಯ ಮತ್ತು ಬಜಾಜ್ ಗ್ರೂಪ್‌ನ ಯಶಸ್ಸಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಕಂಪನಿ ತಿಳಿಸಿದೆ.

ಮಾರ್ಚ್ ತ್ರೈಮಾಸಿಕದಲ್ಲಿ ಬಜಾಜ್ ಆಟೋ ನಿವ್ವಳ ಲಾಭ ಸುಮಾರು ಶೇಕಡಾ 2ರಷ್ಟು ಏರಿಕೆಯಾಗಿ 1,332 ಕೋಟಿ ರೂಪಾಯಿಗೆ ತಲುಪಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ 1,310 ಕೋಟಿ ರೂಪಾಯಿ ದಾಖಲಾಗಿದ್ದು. ಕಂಪನಿಯ ಆದಾಯವು ವರ್ಷದಿಂದ ವರ್ಷಕ್ಕೆ ಹಿಂದಿನ 6,815.8 ಕೋಟಿಗೆ ಹೋಲಿಸಿದರೆ ಶೇಕಡಾ 26ರಷ್ಟು ಹೆಚ್ಚಳವಾಗಿ, 8,596 ಕೋಟಿಗೆ ತಲುಪಿದೆ.

ಬಜಾಜ್ ಆಟೋ ಕಂಪನಿಯು ಪ್ರತಿ ಷೇರಿಗೆ 140 ರೂಪಾಯಿ ಲಾಭಾಂಶವನ್ನು ಘೋಷಿಸಿದೆ.

Read more about: bike ಬೈಕ್
English summary

Rahul Bajaj Resigns As Bajaj Auto Chairman

Rahul Bajaj has resigned as Chairman of Bajaj Auto. He will be replaced by Niraj Bajaj, the Non-Executive Director of the company.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X