For Quick Alerts
ALLOW NOTIFICATIONS  
For Daily Alerts

"ಮೋದಿ ಸೃಷ್ಟಿಸಿದ ವಿಪತ್ತು": ರಾಹುಲ್ ಗಾಂಧಿ ಪಟ್ಟಿ ಮಾಡಿದ 6 ಸಮಸ್ಯೆ

|

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬುಧವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬುಧವಾರ ಕಿಡಿ ಕಾರಿದ್ದಾರೆ. ಜಿಡಿಪಿ ಇಳಿಕೆ, ಉದ್ಯೋಗ ನಷ್ಟ, ನಿತ್ಯವೂ ಕೊರೊನಾ ಪ್ರಕರಣಗಳಲ್ಲಿನ ಹೆಚ್ಚಳ ಹಾಗೂ ಗಡಿಯಲ್ಲಿ ಉದ್ಭವವಾಗಿರುವ ಶತ್ರು ದೇಶಗಳ ಆತಂಕ "ಮೋದಿ ಸೃಷ್ಟಿಸಿದ ವಿಪತ್ತು" ಎಂದು ಟ್ವಿಟ್ಟರ್ ನಲ್ಲಿ ಪಟ್ಟಿಯೊಂದನ್ನು ಟ್ವೀಟ್ ಮಾಡಿದ್ದಾರೆ.

ಆರ್ಥಿಕ ಸ್ಥಿತಿಯು 'ಭಗವಂತನ ಆಟ' ಎಂದ ನಿರ್ಮಲಾ ದೇವದೂತರೇ?: ಚಿದುಆರ್ಥಿಕ ಸ್ಥಿತಿಯು 'ಭಗವಂತನ ಆಟ' ಎಂದ ನಿರ್ಮಲಾ ದೇವದೂತರೇ?: ಚಿದು

ತಮ್ಮ ಟ್ವೀಟ್ ನಲ್ಲಿ ದೇಶ ಎದುರಿಸುತ್ತಿರುವ ಆರು ವಿಪತ್ತುಗಳು ಎಂದು ಪಟ್ಟಿ ಮಾಡಿದ್ದು, ಅದನ್ನು "ಮೋದಿ ಸೃಷ್ಟಿಸಿದ ವಿಪತ್ತು" ಎಂದಿದ್ದಾರೆ. ಅಂದಹಾಗೆ ರಾಹುಲ್ ಪ್ರಸ್ತಾವ ಮಾಡಿರುವ ಸಮಸ್ಯೆಗಳೇನು ಎಂಬ ಮಾಹಿತಿ ಹೀಗಿದೆ:

1 ಜಿಡಿಪಿಯಲ್ಲಿ ಐತಿಹಾಸಿಕ ಇಳಿಕೆ -23.9%

2 ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

3 12 ಕೋಟಿ ಉದ್ಯೋಗ ನಷ್ಟ

4 ರಾಜ್ಯಗಳಿಗೆ ಪಾವತಿ ಮಾಡಬೇಕಾದ ಜಿಎಸ್ ಟಿ ಬಾಕಿ ನೀಡುತ್ತಿಲ್ಲ

5 ಜಾಗತಿಕ ಮಟ್ಟದಲ್ಲೇ ಭಾರತವು ಪ್ರತಿ ದಿನ ಅತಿ ಹೆಚ್ಚು ಕೊರೊನಾ ಸೋಂಕಿತ ಮತ್ತು ಸಾವಿನ ಪ್ರಕರಣ ದಾಖಲಿಸುತ್ತಿದೆ

6 ಗಡಿ ಪ್ರದೇಶದಲ್ಲಿ ಬಾಹ್ಯ ಆತಂಕ ಎದುರಾಗಿದೆ.

ಆಗಸ್ಟ್ 31ನೇ ತಾರೀಕಿನಂದು ಕೂಡ ಎನ್ ಡಿಎ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಆರೋಪ ಮಾಡಿದ್ದರು. ಕಳೆದ ಆರು ವರ್ಷಗಳಿಂದ ಅಸಂಘಟಿತ ವಲಯಗಳ ಮೇಲೆ ಎನ್ ಡಿಎ ಸರ್ಕಾರ ದಾಳಿ ನಡೆಸುತ್ತಿದೆ. ಅಪನಗದೀಕರಣ, ಜಿಎಸ್ ಟಿ ತಪ್ಪಾದ ಜಾರಿ ಹಾಗೂ ಲಾಕ್ ಡೌನ್ ನಿಂದ ಈ ವಲಯಗಳು ನಾಶವಾಗಿವೆ ಎಂದಿದ್ದರು.

English summary

Rahul Gandhi Slammed PM Narendra Modi And List Out 6 Problems Country Facing

Congress leader Rahul Gandhi slammed PM Narendra Modi on Wednesday and list out 6 problems country facing for "Modi Made Disaster".
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X