For Quick Alerts
ALLOW NOTIFICATIONS  
For Daily Alerts

ರಾಕೇಶ್ ಜುಂಜುನ್‌ವಾಲಾ ಹೊಸ ಏರ್‌ಲೈನ್ಸ್ ಯೋಜನೆ ಅನಾವರಣ: ಹೂಡಿಕೆ ಕುರಿತಾದ ಮಾಹಿತಿ ಇಲ್ಲಿದೆ

|

ಭಾರತದ ವಾರೆನ್ ಬಫೆಟ್ ಎಂದೇ ಖ್ಯಾತಿ ಪಡೆದಿರುವ, ಖ್ಯಾತ ಹೂಡಿಕೆದಾರ ರಾಕೇಶ್‌ ಜುಂಜುನ್‌ವಾಲಾ ಉದ್ದೇಶಿಸಿರುವ ಹೊಸ ವಿಮಾನಯಾನ ಸಂಸ್ಥೆ ಮುಂದಿನ ನಾಲ್ಕು ವರ್ಷಗಳಲ್ಲಿ 70 ವಿಮಾನಗಳನ್ನು ಹೊಂದಲು ಯೋಜನೆಯನ್ನು ಹೊಂದಿದೆ.

ಸಾವಿರಾರು ಕೋಟಿ ರೂ. ಹೂಡಿಕೆದಾರ ರಾಕೇಶ್‌ ಜುಂಜುನ್‌ವಾಲಾ 70 ವಿಮಾನಗಳಿರುವ ಕಡಿಮೆ ಪ್ರಯಾಣ ಬೆಲೆಯ ವಿಮಾನಯಾನ ಸಂಸ್ಥೆ ಆರಂಭಿಸಲು ಚಿಂತನೆ ನಡೆಸಿದ್ದಾರೆ. ಹೀಗಂಥ ಬ್ಲೂಮ್‌ಬರ್ಗ್‌ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಜುಂಜುನ್‌ವಾಲಾ ತಿಳಿಸಿದ್ದಾರೆ. ಹಾಗಿದ್ದರೆ ಈ ಏರ್‌ಲೈನ್ಸ್‌ ಕುರಿತಾಗಿ ಲೇಟೆಸ್ಟ್ ಮಾಹಿತಿಯನ್ನ ಮುಂದೆ ತಿಳಿಯಿರಿ.

ರಾಕೇಶ್ ಜುಂಜುನ್‌ವಾಲಾ ಹೊಸ ಏರ್‌ಲೈನ್ಸ್ ಕುರಿತು ಮಾಹಿತಿ ಇಲ್ಲಿದೆ

* ಪ್ರಾರಂಭವಾಗಲಿರುವ ಹೊಸ ವಿಮಾನಯಾನ ಸಂಸ್ಥೆಗೆ ರಾಕೇಶ್‌ ಜುಂಜುನ್‌ವಾಲಾ 35 ಮಿಲಿಯನ್ ಯುಎಸ್‌ ಡಾಲರ್ ಹೂಡಿಕೆ ಮಾಡುತ್ತಿದ್ದಾರೆ ಎಂದು ಬ್ಲೂಮ್‌ಬರ್ಗ್ ಟೆಲಿವಿಷನ್‌ಗೆ ತಿಳಿಸಿದ್ದಾರೆ.

* ರಾಕೇಶ್‌ ಜುಂಜುನ್‌ವಾಲಾ ಏರ್‌ಲೈನ್‌ನ ಶೇಕಡಾ 40 ರಷ್ಟು ಪಾಲನ್ನು ಹೊಂದುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.

* ಉದ್ದೇಶಿತ ವಿಮಾನಯಾನ ಸಂಸ್ಥೆಗೆ "ಆಕಾಶ್ ಏರ್" ಎಂದು ಹೆಸರಿಸುವ ಸಾಧ್ಯತೆಯಿದೆ. ವರದಿಯ ಪ್ರಕಾರ ಮುಂದಿನ 15 ದಿನಗಳಲ್ಲಿ ನಾಗರಿಕ ವಿಮಾನಯಾನ ಸಚಿವಾಲಯದಿಂದ ಯಾವುದೇ ಆಕ್ಷೇಪಣೆ ಪ್ರಮಾಣಪತ್ರವನ್ನು ಪಡೆಯಲು ವಿಮಾನಯಾನ ಸಂಸ್ಥೆಯು ಪಡೆಯಬಹುದು.

* ಜುಂಜುನ್‌ವಾಲಾ 70 ವಿಮಾನಗಳನ್ನು ಹೊಂದಲು ಯೋಚಿಸುತ್ತಿದ್ದು, ತಲಾ 180 ಜನರಿಗೆ ಬೋರ್ಡಿಂಗ್ ಸಾಮರ್ಥ್ಯವಿದೆ.

* ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ ಜುಂಜುನ್‌ವಾಲಾ ಹೂಡಿಕೆಯ ಏರ್‌ಲೈನ್ಸ್ ಈ ವರ್ಷದ ಅಂತ್ಯದ ವೇಳೆಗೆ ಅಥವಾ ಮುಂದಿನ ವರ್ಷದ ಆರಂಭದ ವೇಳೆಗೆ ಕಾರ್ಯಾಚರಣೆ ಶುರು ಮಾಡಬಹುದು.

* ರಾಕೇಶ್ ಜುಂಜುನ್‌ವಾಲಾ ಅವರ ನಿವ್ವಳ ಆಸ್ತಿ ಮೌಲ್ಯ 34,250 ಕೋಟಿ ರೂ ಎಂದು ಅಂದಾಜಿಸಲಾಗಿದೆ ಎಂದು ಫೋರ್ಬ್ಸ್ ವರದಿ ತಿಳಿಸಿದೆ.

* ಕೋವಿಡ್ ಸಾಂಕ್ರಾಮಿಕದಿಂದಾಗಿ ತೀವ್ರವಾದ ಹಾನಿಗೊಳಗಾಗಿರುವ ದೇಶೀಯ ವಿಮಾನಯಾನ ಸಂಸ್ಥೆಗಳು ನಷ್ಟದಲ್ಲಿರುವ ಸಮಯದಲ್ಲಿ ಜುಂಜುನ್‌ವಾಲಾ ಹೊಸ ಏರ್‌ಲೈನ್‌ ಶುರು ಮಾಡಲು ಯೋಜಿಸಿದ್ದಾರೆ.

* ಈ ವರ್ಷ ಏಪ್ರಿಲ್ ನಿಂದ ಜೂನ್ ವರೆಗೆ ದೇಶದಲ್ಲಿ ಸುಮಾರು 11 ಮಿಲಿಯನ್ ದೇಶೀಯ ವಾಯು ಪ್ರಯಾಣಿಕರಿದ್ದು, ಇದು ಜನವರಿ-ಮಾರ್ಚ್ ಅವಧಿಗೆ ಹೋಲಿಸಿದರೆ ಶೇಕಡಾ 53 ರಷ್ಟು ಕಡಿಮೆಯಾಗಿದೆ ಎಂದು ನಾಗರಿಕ ವಿಮಾನಯಾನ ರಾಜ್ಯ ಸಚಿವ ವಿ ಕೆ ಸಿಂಗ್ ಬುಧವಾರ ಹೇಳಿದ್ದಾರೆ ಎಂದು ಪಿಟಿಐ ವರದಿಯೊಂದು ತಿಳಿಸಿದೆ.

* ಪ್ರಸ್ತುತ, ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ನಾಗರಿಕ ವಿಮಾನಯಾನ ಸಚಿವಾಲಯವು ತಮ್ಮ ಕೋವಿಡ್ ಪೂರ್ವ ದೇಶೀಯ ವಿಮಾನಗಳಲ್ಲಿ ಶೇಕಡಾ 65 ಕ್ಕಿಂತ ಹೆಚ್ಚು ಕಾರ್ಯನಿರ್ವಹಿಸಲು ಅನುಮತಿ ನೀಡಿದೆ ಎಂದು ಪಿಟಿಐ ವರದಿ ಹೇಳಿದೆ.

English summary

Rakesh Jhunjhunwala's Airlines Plan Revealed: Investment Details Here

Rakesh Jhunjhunwala New Airline Stock, Investment, Key Details here
Story first published: Thursday, July 29, 2021, 10:49 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X