For Quick Alerts
ALLOW NOTIFICATIONS  
For Daily Alerts

ಆನ್ ಲೈನ್ ನಲ್ಲಿ ಹೇಗಿರಬೇಕು? ಕೇಳಿಸಿಕೊಳ್ಳಿ ರತನ್ ಟಾಟಾ ಮಾತು

|

ಆನ್ ಲೈನ್ ನಲ್ಲಿ ದ್ವೇಷ ಬಿತ್ತುವುದನ್ನು ಹಾಗೂ ಬೆದರಿಸುವುದನ್ನು ನಿಲ್ಲಿಸಿ. ಈ ವರ್ಷವಿಡೀ ಸವಾಲುಗಳಿವೆ. ಇಂಥ ಸಂದರ್ಭದಲ್ಲಿ ಪರಸ್ಪರರನ್ನು ಬೆಂಬಲಿಸಿ ಎಂದು ಭಾನುವಾರ ಹಿರಿಯ ಉದ್ಯಮಿ ರತನ್ ಟಾಟಾ ಸಲಹೆ ಮಾಡಿದ್ದಾರೆ. ಇನ್ ಸ್ಟಾಗ್ರಾಮ್ ನಲ್ಲಿ ಈ ಬಗ್ಗೆ ಅವರು ಪೋಸ್ಟ್ ಮಾಡಿದ್ದಾರೆ.

ಉದ್ಯಮಿ ರತನ್ ಟಾಟಾ ಪ್ರೀತಿಯನ್ನು ಮುರಿದಿತ್ತು ಭಾರತ- ಚೀನಾ ಯುದ್ಧಉದ್ಯಮಿ ರತನ್ ಟಾಟಾ ಪ್ರೀತಿಯನ್ನು ಮುರಿದಿತ್ತು ಭಾರತ- ಚೀನಾ ಯುದ್ಧ

ಆನ್ ಲೈನ್ ಸಮುದಾಯದಲ್ಲಿ ಒಬ್ಬರಿಗೊಬ್ಬರು ನೋವು ಮಾಡುತ್ತಿದ್ದಾರೆ ಹಾಗೂ ಒಬ್ಬರು ಮತ್ತೊಬ್ಬರನ್ನು ಕೀಳು ಮಾಡುತ್ತಿದ್ದಾರೆ. ಎಲ್ಲರಿಗೂ ಈ ವರ್ಷ ಸವಾಲಾಗಿದೆ. ಅದು ಒಬ್ಬೊಬ್ಬರಿಗೆ ಒಂದು ಮಟ್ಟದಲ್ಲಿ ಇರಬಹುದು. ನಾನು ಕಂಡಂತೆ ಆನ್ ಲೈನ್ ಸಮುದಾಯದಲ್ಲಿ ಒಬ್ಬರಿಗೊಬ್ಬರು ನೋವು ಮಾಡುತ್ತಿದ್ದಾರೆ. ಒಬ್ಬರು ಮತ್ತೊಬ್ಬರನ್ನು ಹೀಯಾಳಿಸುತ್ತಿದ್ದಾರೆ. ಕಟುವಾದ ಹಾಗೂ ಶೀಘ್ರ ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದಾರೆ ಎಂದಿದ್ದಾರೆ.

ಆನ್ ಲೈನ್ ನಲ್ಲಿ ಹೇಗಿರಬೇಕು? ಕೇಳಿಸಿಕೊಳ್ಳಿ ರತನ್ ಟಾಟಾ ಮಾತು

ಈ ವರ್ಷದಲ್ಲಿ ನಾವೆಲ್ಲ ಒಗ್ಗಟ್ಟಾಗಿರುವುದು ಹಿಂದೆಂದಿಗಿಂತ ಅಗತ್ಯವಾಗಿದೆ. ಒಬ್ಬರಿಗೊಬ್ಬರು ಸಹಾಯ ಮಾಡಿಕೊಳ್ಳಬೇಕು. ಹೆಚ್ಚು ವಿನಮ್ರರಾಗಿ, ಅರ್ಥ ಮಾಡಿಕೊಂಡು ಹಾಗೂ ತಾಳ್ಮೆಯಿಂದ ಇರಬೇಕು ಎಂದು ಹೇಳಿದ್ದಾರೆ. ಆನ್ ಲೈನ್ ನಲ್ಲಿ ನನ್ನ ಇರುವಿಕೆ ಬಹಳ ಸೀಮಿತ. ಆದರೆ ದ್ವೇಷ ಹಾಗೂ ಬೆದರಿಕೆ ಬದಲಿಗೆ ಇದು ಎಲ್ಲರಿಗೂ ಸಹಾನುಭೂತಿ ಹಾಗೂ ಬೆಂಬಲವನ್ನು ನೀಡುತ್ತದೆ. ನಿಮ್ಮ ಉದ್ದೇಶ ಏನೇ ಆಗಿರಲಿ, ಅದು ಲೆಕ್ಕಕ್ಕೆ ಬರಲ್ಲ. ಎಂದು ರತನ್ ಟಾಟಾ ಹೇಳಿದ್ದಾರೆ.

English summary

Ratan Tata Called People To Stop Online Hatred And Bullying

Veteran industrialist Ratan Tata called people to stop online hatred and bullying.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X