For Quick Alerts
ALLOW NOTIFICATIONS  
For Daily Alerts

ಭಾರತ ರತ್ನ ಅಭಿಯಾನ: ಭಾರತೀಯನಾಗಿರುವುದೇ ನನ್ನ ಅದೃಷ್ಟ ಎಂದ ರತನ್ ಟಾಟಾ!

|

ಖ್ಯಾತ ಉದ್ಯಮಿ ರತನ್ ಟಾಟಾಗೆ ಭಾರತ ರತ್ನ ನೀಡುವಂತೆ ಟ್ವಿಟರ್ ಅಭಿಯಾನಕ್ಕೆ ಪ್ರತಿಕ್ರಿಯಿಸಿರುವ ಟಾಟಾ, ಅಭಿಯಾನವನ್ನು ಕೈ ಬಿಡುವಂತೆ ಮನವಿ ಮಾಡಿದ್ದಾರೆ. ಭಾರತದ ಬೆಳವಣಿಗೆ ಮತ್ತು ಸಮೃದ್ಧಿಗೆ ಕೊಡುಗೆ ನೀಡಲು ಸಾಧ್ಯವಾಗಿದ್ದಕ್ಕೆ ನನಗೆ ಹೆಮ್ಮೆಯಿದೆ, ಆದರೆ ಅಭಿಯಾನ ಕೈ ಬಿಡುವಂತೆ ಅವರು ಟ್ಟಿಟ್ಟರ್‌ನಲ್ಲಿ ಕೋರಿದ್ದಾರೆ.

ಶನಿವಾರ ಟ್ವೀಟ್ ಮಾಡಿರುವ ರತನ್ ಟಾಟಾ "ಪ್ರಶಸ್ತಿಯ ವಿಷಯದಲ್ಲಿ ಸಾಮಾಜಿಕ ಮಾಧ್ಯಮಗಳ ಒಂದು ಭಾಗವು ವ್ಯಕ್ತಪಡಿಸಿದ ಭಾವನೆಗಳನ್ನು ನಾನು ಪ್ರಶಂಸಿಸುತ್ತೇನೆ, ಅಂತಹ ಅಭಿಯಾನಗಳನ್ನು ನಿಲ್ಲಿಸುವಂತೆ ವಿನಮ್ರವಾಗಿ ವಿನಂತಿಸಲು ಬಯಸುತ್ತೇನೆ. " ಎಂದು ಹೇಳಿದ್ದಾರೆ.

ಭಾರತೀಯನಾಗಿರುವುದೇ ನನ್ನ ಅದೃಷ್ಟ ಎಂದ ರತನ್ ಟಾಟಾ

''ನಾನು ಭಾರತೀಯನಾಗಿದ್ದು, ಭಾರತದ ಬೆಳವಣಿಗೆ ಮತ್ತು ಸಮೃದ್ಧಿಗೆ ಕೊಡುಗೆ ನೀಡಲು ಸಾಧ್ಯವಾಗಿದ್ದು ನನ್ನ ಅದೃಷ್ಟ ಎಂದು ನಾನು ಅಂದುಕೊಂಡಿದ್ದೇನೆ. ಭಾರತದ ಬೆಳವಣಿಗೆ ಮತ್ತು ಸಮೃದ್ಧಿಗೆ ಪ್ರಯತ್ನಿಸಲು ಮತ್ತು ಕೊಡುಗೆ ನೀಡಲು ಪ್ರಯತ್ನಿಸುತ್ತಾನೆ'' ಎಂದು ರತನ್ ಟಾಟಾ ಟ್ವೀಟ್ ಮಾಡಿದ್ದಾರೆ.

1937ರಲ್ಲಿ ಈಗಿನ ಮುಂಬಯಿನಲ್ಲಿ ಜನಿಸಿದ ರತನ್‌ ಟಾಟಾ, ಟಾಟಾ ಸಮೂಹದ ಹಲವು ಕಂಪನಿಗಳನ್ನು ಮುನ್ನಡೆಸಿದ್ದಾರೆ. ಟಾಟಾ ಮೋಟಾರ್ಸ್‌, ಟಾಟಾ ಸ್ಟೀಲ್‌, ಟಿಸಿಎಸ್‌, ಟಾಟಾ ಪವರ್‌, ಟಾಟಾ ಗ್ಲೋಬಲ್‌ ಬೇವರೇಜಸ್‌, ಟಾಟಾ ಕೆಮಿಕಲ್ಸ್‌, ಇಂಡಿಯನ್‌ ಹೋಟೆಲ್ಸ್‌, ಟಾಟಾ ಟೆಲಿಸರ್ವೀಸಸ್‌ ಇದರಲ್ಲಿ ಪ್ರಮುಖವಾದವು. ಸದ್ಯ ಅವರು ಟಾಟಾ ಗ್ರೂಪ್‌ನ ಗೌರವಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

English summary

Ratan Tata On Bharat Ratna Campaign: Tata Urges Campaigns Be Stopped

Tata Group’s Chairman Emeritus Ratan Tata has urged Twitterati to end the campaign seeking to confer him India’s highest civilian honour Bharat Ratna
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X