For Quick Alerts
ALLOW NOTIFICATIONS  
For Daily Alerts

NIPFP ಅಧ್ಯಕ್ಷರಾಗಿ ನೇಮಕಗೊಂಡ ಆರ್‌ಬಿಐ ಮಾಜಿ ಗವರ್ನರ್ ಊರ್ಜಿತ್ ಪಟೇಲ್

|

ನವದೆಹಲಿ, ಜೂನ್ 20: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾಜಿ ಗವರ್ನರ್ ಉರ್ಜಿತ್ ಪಟೇಲ್ ಅವರು National Institute of Public Finance and Policy (NIPFP) ಅಧ್ಯಕ್ಷರಾಗಿ ನಿಯುಕ್ತಿಗೊಂಡಿದ್ದಾರೆ.

 

ಅವರು ಜೂನ್ 22 ರಿಂದ NIPFP ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಅವರು ನಿವೃತ್ತಿಗೊಳ್ಳುತ್ತಿರುವ ವಿಜಯ್ ಕೇಲ್ಕರ್ ಅವರ ಸ್ಥಾನವನ್ನು ತುಂಬಲಿದ್ದಾರೆ.

 

ಊರ್ಜಿತ್ ಪಟೇಲ್ ಅವರು ಆರ್‌ಬಿಐ ಗೆ ಡಿಸೆಂಬರ್ 10, 2018 ರಂದು ತಮ್ಮ ಮೂರು ವರ್ಷಗಳ ಅವಧಿ ಮುಗಿಯುವ ಕೆಲ ತಿಂಗಳುಗಳ ಮೊದಲು ಅನಿರೀಕ್ಷಿತವಾಗಿ ರಾಜೀನಾಮೆ ನೀಡಿದ್ದರು. ವೈಯಕ್ತಿಕ ಕಾರಣ ನೀಡಿ ಅವರು ರಾಜೀನಾಮೆ ನೀಡಿದ್ದರು. ಆ ನಂತರ ಅವರು ಇದೇ ಮೊದಲ ಬಾರಿಗೆ ಸಾರ್ವಜನಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.

NIPFPಅಧ್ಯಕ್ಷರಾಗಿ ನೇಮಕಗೊಂಡ ಆರ್‌ಬಿಐ ಮಾಜಿ ಗವರ್ನರ್ ಊರ್ಜಿತ್ ಪಟೇಲ್

ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್, ಆಕ್ಸ್‌ಫರ್ಡ್ ಯುನಿವರ್ಸಿಟಿ ಮತ್ತು ಯೇಲ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ ಊರ್ಜಿತ್ ಪಟೇಲ್ ಅವರು 2013 ರವರೆಗೆ ಕೀನ್ಯಾದ ಪ್ರಜೆಯಾಗಿದ್ದರು. 2013 ರ ಜನವರಿಯಲ್ಲಿ ಆರ್‌ಬಿಐ ಉಪ ಗವರ್ನರ್ ಆಗಿ ನೇಮಕಗೊಳ್ಳುವ ಮೊದಲು ಅವರು ಭಾರತೀಯ ಪೌರತ್ವವನ್ನು ಪಡೆದಿದ್ದರು. ವಿಜಯ್ ಕೆಲ್ಕರ್ ಅವರು ತಮ್ಮ ಅಧಿಕಾರಾವಧಿಯಲ್ಲಿ ನೀಡಿದ ಮಹತ್ವದ ಕೊಡುಗೆಗಳಿಗಾಗಿ NIPFP ಹಣಕಾಸು ವಲಯದಲ್ಲಿ ಮೆಚ್ಚುಗೆ ದಾಖಲಿಸಿದೆ ಎಂದು ಎಕನಾಮಿಕ್ ಥಿಂಕ್ ಟ್ಯಾಂಕ್ ಹೇಳಿದೆ.

English summary

Former RBI Governor Urjit Patel appointed as NIPFP Chariman

RBI Former Governor Urjit Patel Appointed NIPFP Chairman.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X