For Quick Alerts
ALLOW NOTIFICATIONS  
For Daily Alerts

ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ 10 ಕೋಟಿ ರೂಪಾಯಿ ದಂಡ ವಿಧಿಸಿದ ಆರ್‌ಬಿಐ

|

ವಾಹನ ಸಾಲಕ್ಕೆ ಸಂಬಂಧಿಸಿದಂತೆ ಶಾಸನಬದ್ಧವಾಗಿ ಮಾಡಬೇಕಿದ್ದ ಕೆಲವು ಕೆಲಸಗಳಲ್ಲಿ ಆಗಿರುವ ಲೋಪಕ್ಕೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ 10 ಕೋಟಿ ರೂಪಾಯಿ ದಂಡ ವಿಧಿಸಿದೆ.

 

ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ನೀಡಲಾಗುವ ವಾಹನ ಸಾಲಕ್ಕೆ ಸಂಬಂಧಿಸಿದಂತೆ ಕೆಲವೊಂದು ಲೋಪದೋಷಗಳಿರುವ ಬಗ್ಗೆ ದೂರು ಬಂದಿದ್ದ ಹಿನ್ನೆಲೆಯಲ್ಲಿ ಪರಿಶೀಲಿಸಿದ ಆರ್‌ಬಿಐ ಗುರುವಾರವೇ ದಂಡ ಪಾವತಿಸುವಂತೆ ಆದೇಶ ನೀಡಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ 10 ಕೋಟಿ ರೂಪಾಯಿ ದಂಡ ವಿಧಿಸಿದ ಆರ್‌ಬಿಐ

ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949 (ಕಾಯ್ದೆ) ಯ ಸೆಕ್ಷನ್ 6 (2) ಮತ್ತು ಸೆಕ್ಷನ್ 8 ರ ನಿಯಮಗಳನ್ನು ಬ್ಯಾಂಕ್ ಉಲ್ಲಂಘಿಸಿದೆ ಎಂದು ಹೇಳುವ ಮೂಲಕ ದಂಡ ವಿಧಿಸಿದೆ. ದೂರಿಗೆ ಸಂಬಂಧಿಸಿದಂತೆ ಆರ್‌ಬಿಐ ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ನೋಟಿಸ್ ನೀಡಿತ್ತು. ಆನಂತರ ಬ್ಯಾಂಕ್ ನೀಡಿದ ಉತ್ತರವನ್ನು ಪರಿಶೀಲಿಸಿದ ಬಳಿಕ ದಂಡ ಪಾವತಿಗೆ ತಿಳಿಸಿದೆ.

ಕಾಯಿದೆಯ ಸೆಕ್ಷನ್ 46 (4) (ಐ) ಯೊಂದಿಗೆ ಸೆಕ್ಷನ್ 47 ಎ (1) (ಸಿ) ನ ನಿಬಂಧನೆಗಳ ಅಡಿಯಲ್ಲಿ ಆರ್‌ಬಿಐಗೆ ನೀಡಲಾಗಿರುವ ಅಧಿಕಾರವನ್ನು ಚಲಾಯಿಸಲು ಈ ದಂಡವನ್ನು ವಿಧಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಬ್ಯಾಂಕಿನ ವಾಹನ ಸಾಲ ಖಾತೆಗೆ ಸಂಬಂಧಿಸಿದಂತೆ ವಿಸ್ಲ್ ಬ್ಲೋವರ್ ದೂರನ್ನು ಪರಿಶೀಲಿಸಿದ ನಂತರ ಅಕ್ರಮಗಳು ಕಂಡುಬಂದಿವೆ ಎಂದು ಆರ್‌ಬಿಐ ತಿಳಿಸಿದೆ.

English summary

RBI Imposes Rs 10 Crore Penalty On HDFC Bank

RBI has imposed a monetary penalty of Rs 10 crore on HDFC Bank Limited for contravention of provisions of section 6(2) and section 8 of the Banking Regulation Act, 1949 (the Act), an order dated 27 May stated.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X