For Quick Alerts
ALLOW NOTIFICATIONS  
For Daily Alerts

ನವೆಂಬರ್ 3ರಂದು ಆರ್‌ಬಿಐ ಸಭೆ, ಯಾಕಾಗಿ?

|

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ನವೆಂಬರ್ 3ರಂದು ಎಂಪಿಸಿ ಸಭೆಯನ್ನು ನಡೆಸುವುದಾಗಿ ಅಕ್ಟೋಬರ್ 27ರಂದು ತಿಳಿಸಿದೆ. ಆದರೆ ಈ ಬೆನ್ನಲ್ಲೇ ಈ ಸಭೆ ನಡೆಸಿದ ಬಳಿಕ ಆರ್‌ಬಿಐ ಮತ್ತೆ ರೆಪೋ ದರ ಹೆಚ್ಚಳ ಮಾಡುತ್ತದೆಯೇ ಎಂಬ ಚರ್ಚೆ ನಡೆಯಲು ಆರಂಭವಾಗಿದೆ. ಆದರೆ ಆರ್‌ಬಿಐ ಈ ಸಭೆಯನ್ನು ಯಾಕಾಗಿ ನಡೆಸಲಾಗುತ್ತಿದೆ ಎಂಬ ಸ್ಪಷ್ಟನೆಯನ್ನು ನೀಡಿದೆ.

ಪ್ರಮುಖವಾಗಿ ಆರ್‌ಬಿಐ ಸಿಪಿಐ ದರವನ್ನು (consumer price index) ಅಂದರೆ ಹಣದುಬ್ಬರವನ್ನು ಹತೋಟಿಗೆ ತರುವಲ್ಲಿ ವಿಫಲವಾಗಿದೆ. ಕಳೆದ ಜನವರಿಯಿಂದ ಸೆಪ್ಟೆಂಬರ್‌ವರೆಗೆ ಸುಮಾರು 9 ತಿಂಗಳ ಅವಧಿಯಲ್ಲಿ ಆರ್‌ಬಿಐ ರೆಪೋ ದರವನ್ನು ಶೇಕಡ 2-6ರ ನಡುವೆ ತರುವಲ್ಲಿ ವಿಫಲವಾಗಿದೆ. ಸೆಪ್ಟೆಂಬರ್ ಹಣದುಬ್ಬರ ನಿರೀಕ್ಷೆಗಿಂತ ಅಧಿಕವಾಗಿದೆ. ತಜ್ಞರ ಪ್ರಕಾರ ಹಣದುಬ್ಬರ ಇನ್ನಷ್ಟು ಏರಿಕೆಯಾಗಲಿದೆ.

ಹಣದುಬ್ಬರ ನಿಯಂತ್ರಿಸಲು ಸತತ ವೈಫಲ್ಯ; ಸರ್ಕಾರಕ್ಕೆ ವರದಿ ಕೊಡಲಿರುವ ಆರ್‌ಬಿಐಹಣದುಬ್ಬರ ನಿಯಂತ್ರಿಸಲು ಸತತ ವೈಫಲ್ಯ; ಸರ್ಕಾರಕ್ಕೆ ವರದಿ ಕೊಡಲಿರುವ ಆರ್‌ಬಿಐ

ಇನ್ನು ಆರ್‌ಬಿಐ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಕಾಯ್ದೆ 1934ರ ಸೆಕ್ಷನ್ 45ZN ಅಡಿಯಲ್ಲಿ ಈ ಸಭೆಯನ್ನು ನಡೆಸುತ್ತಿದೆ ಎಂದು ಈಗಾಗಲೇ ತಿಳಿಸಿದೆ. ಹಾಗೆಯೇ ಈ ಸಂದರ್ಭದಲ್ಲೇ ಆರ್‌ಬಿಐ, ಮಾನೆಟರಿ ಪಾಲಿಸಿ ಕಮಿಟಿಯ ರೆಗ್ಯೂಲೇಷನ್ 7 ಹಾಗೂ ಮಾನೆಟರಿ ಪಾಲಿಸಿ ಪ್ರೊಸೆಸ್ ರೆಗ್ಯೂಲೇಷನ್, 2016 ಅನ್ನು ಕೂಡಾ ಉಲ್ಲೇಖ ಮಾಡಿದೆ. ಹಾಗಾದರೆ ಈ ಸೆಕ್ಷನ್ ಏನು ಹೇಳುತ್ತದೆ?, ಯಾಕಾಗಿ ಈ ಸಭೆ ಎಂಬ ಬಗ್ಗೆ ತಿಳಿಯೋಣ ಮುಂದೆ ಓದಿ...

 ಆರ್‌ಬಿಐ ಕಾಯ್ದೆಯ ಸೆಕ್ಷನ್  45ZN ಏನು ಹೇಳುತ್ತದೆ?

ಆರ್‌ಬಿಐ ಕಾಯ್ದೆಯ ಸೆಕ್ಷನ್ 45ZN ಏನು ಹೇಳುತ್ತದೆ?

2016ರಲ್ಲಿ ಹಣದುಬ್ಬದ ಟಾರ್ಗೆಟ್ ಅನ್ನು ನಿಗದಿ ಮಾಡಿದ ಬಳಿಕ ಮೊದಲ ಬಾರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಕಾಯ್ದೆ 1934ರ ಸೆಕ್ಷನ್ 45ZN ಅಡಿಯಲ್ಲಿ ಸಭೆಯನ್ನು ಕರೆಯಲಾಗುತ್ತಿದೆ. ಈ ಸೆಕ್ಷನ್ ಪ್ರಕಾರ, ಆರ್‌ಬಿಐ ಹಣದುಬ್ಬರ ನಿಯಂತ್ರಣ ಮಾಡುವಲ್ಲಿ ವಿಫಲವಾದರೆ, ಯಾಕೆ ವಿಫಲವಾಗಿದೆ ಎಂಬ ಬಗ್ಗೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಬೇಕಾಗುತ್ತದೆ. ಈ ವರದಿಯಲ್ಲಿ ಸರ್ಕಾರ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಬಗ್ಗೆಯೂ ಆರ್‌ಬಿಐ ಉಲ್ಲೇಖ ಮಾಡುತ್ತದೆ.

 ರೆಗ್ಯೂಲೇಷನ್ 7  ಏನು ಹೇಳುತ್ತದೆ?

ರೆಗ್ಯೂಲೇಷನ್ 7 ಏನು ಹೇಳುತ್ತದೆ?

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾನೆಟರಿ ಪಾಲಿಸಿ ಕಮಿಟಿಯ ರೆಗ್ಯೂಲೇಷನ್ 7 ಹಾಗೂ ಮಾನೆಟರಿ ಪಾಲಿಸಿ ಪ್ರೊಸೆಸ್ ರೆಗ್ಯೂಲೇಷನ್, 2016 ವಿಶೇಷ ಸಭೆಯನ್ನು ನಡೆಸುವ ಅವಶ್ಯಕತೆ ಬಂದಿದೆ ಎಂಬುವುದನ್ನು ಹೇಳುತ್ತದೆ. ಸಾಮಾನ್ಯ ಪಾಲಿಸಿಯ ಬಗ್ಗೆ ಚರ್ಚೆ ಮಾಡುವುದಕ್ಕಿಂತ ವಿಶೇಷವಾಗಿ ಸಭೆ ನಡೆಸಬೇಕಾಗಿದೆ ಎಂಬುವುದನ್ನು ಉಲ್ಲೇಖಿಸುತ್ತದೆ. ಹಾಗೆಯೇ ಸರ್ಕಾರಕ್ಕೆ ಈ ಬಗ್ಗೆ ವರದಿಯನ್ನು ಸಲ್ಲಿಕೆ ಮಾಡಬೇಕಾಗುತ್ತದೆ ಎಂದು ಕೂಡಾ ಉಲ್ಲೇಖವಾಗಿರುತ್ತದೆ. ಆದರೂ ಹಣದುಬ್ಬರವನ್ನು ನಿಯಂತ್ರಣ ಮಾಡುವುದು ಎಂಪಿಸಿಯ ಜವಾಬ್ದಾರಿಯಾಗಿಯೇ ಇರುತ್ತದೆ. ಆದರೆ, ಟಾರ್ಗೆಟ್ ಅನ್ನು ಆರ್‌ಬಿಐ ಉಲ್ಲೇಖಿಸಿರುತ್ತದೆ.

 ಆರ್‌ಬಿಐನ ನಿಗದಿತ ಸಭೆಗಳು ಯಾವುದು?

ಆರ್‌ಬಿಐನ ನಿಗದಿತ ಸಭೆಗಳು ಯಾವುದು?

ಪ್ರಸ್ತುತ ಒಂದು ಹಣಕಾಸು ವರ್ಷದಲ್ಲಿ ಆರು ಬಾರಿ ಎಂಪಿಸಿ ಸಭೆಯನ್ನು ನಡೆಸಲಾಗುತ್ತದೆ. ಅಂದರೆ ಎರಡು ತಿಂಗಳಿಗೊಮ್ಮೆ ಸಭೆಯನ್ನು ನಡೆಸಲಾಗುತ್ತದೆ. ಈ ಸಭೆಯ ದಿನಾಂಕವನ್ನು ಮೊದಲೇ ಘೋಷಣೆ ಮಾಡಲಾಗಿರುತ್ತದೆ. ಆರ್‌ಬಿಐ ಏಪ್ರಿಲ್ 6-8, ಜೂನ್ 6-8, ಆಗಸ್ಟ್ 2-4, ಸೆಪ್ಟೆಂಬರ್ 28-30, ಡಿಸೆಂಬರ್ 5-7 ಹಾಗೂ 2023ರ ಫೆಬ್ರವರಿ 6-8ರಂದು ಸಭೆಯನ್ನು ಗೊತ್ತುಪಡಿಸಿದೆ. ಈ ಪೈಕಿ ಸೆಪ್ಟೆಂಬರ್‌ವರೆಗಿನ ಸಭೆಗಳು ಮುಗಿದಿದೆ. ಆದರೆ ಎಂಪಿಸಿ 2022ರ ಮೇ 2-4ರವರೆಗೂ ಸಭೆಯನ್ನು ನಡೆಸಿದೆ. ಈ ಸಂದರ್ಭದಲ್ಲಿ ರೆಪೋ ದರವನ್ನು ಏರಿಕೆ ಮಾಡಲಾಗಿದೆ. ಮುಂದಿನ ಸಭೆಯು ನವೆಂಬರ್ 3ರಂದು ನಡೆಯಲಿದೆ. ಇದು ಕೂಡಾ ಆರ್‌ಬಿಐ ಮೊದಲೇ ನಿಗದಿ ಮಾಡದ ಸಭೆಯಾಗಿದೆ.

ಬ್ಯಾಂಕ್ ಸಿಬ್ಬಂದಿ ವರ್ತನೆ ಬಗ್ಗೆ ಅಸಮಾಧಾನವಾ? ಆರ್‌ಬಿಐಗೆ ದೂರು ಕೊಡುವ ಮಾರ್ಗಬ್ಯಾಂಕ್ ಸಿಬ್ಬಂದಿ ವರ್ತನೆ ಬಗ್ಗೆ ಅಸಮಾಧಾನವಾ? ಆರ್‌ಬಿಐಗೆ ದೂರು ಕೊಡುವ ಮಾರ್ಗ

English summary

RBI Panel Holding a Special Meeting on November 3, Here's Why?

Failing to meet the inflation target: RBI panel holding a special meeting on November 3, Here's Why?. read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X