For Quick Alerts
ALLOW NOTIFICATIONS  
For Daily Alerts

ರೆಪೋ ದರವನ್ನು ಏರಿಕೆ ಮಾಡಿದ ಆರ್‌ಬಿಐ

|

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ದಿಡೀರ್ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಆರ್‌ಬಿಐ ರೆಪೋ ದರವನ್ನು ಶೇಕಡ 4.40ಕ್ಕೆ ಹೆಚ್ಚಿಸಲು ಸರ್ವಾನುಮತದಿಂದ ನಿರ್ಧರಿಸಿದೆ.

ಕಳೆದ ತಿಂಗಳು ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಸತತ 10 ಬಾರಿಯೂ ರೆಪೋ ದರದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ. ಆದರೆ ಈಗ ಆರ್‌ಬಿಐ ರೆಪೋ ದರವನ್ನು ಕೂಡಲೇ ಜಾರಿಗೆ ಬರುವಂತೆ ಏರಿಕೆ ಮಾಡಿದೆ.

ಭಾರತದಲ್ಲಿ ಸತತ 10ನೇ ಬಾರಿ ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಆರ್‌ಬಿಐಭಾರತದಲ್ಲಿ ಸತತ 10ನೇ ಬಾರಿ ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಆರ್‌ಬಿಐ

ಈ ಹಿಂದೆ ರೆಪೋ ದರವು ಶೇಕಡ 4ರಲ್ಲೇ ಉಳಿಸಿಕೊಳ್ಳಲಾಗಿತ್ತು. ಆದರೆ ಈಗ ರೆಪೋ ದರವನ್ನು ಏರಿಕೆ ಮಾಡಲಾಗಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಪಾಲಿಸಿ ರೆಪೊ ದರಗಳನ್ನು 40 ಬಿಪಿಎಸ್‌ಗಳಷ್ಟು ಹೆಚ್ಚಿಸಲು ಎಂಪಿಸಿ ಸರ್ವಾನುಮತದಿಂದ ಮತ ಹಾಕಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

 ರೆಪೋ ದರವನ್ನು ಏರಿಕೆ ಮಾಡಿದ ಆರ್‌ಬಿಐ


ಭಾರತೀಯ ಆರ್ಥಿಕತೆಯನ್ನು ದೃಢವಾಗಿಡಲು ಹಣದುಬ್ಬರವನ್ನು ಸರಿದೂಗಿಸಬೇಕು ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ಬೆಲೆ ಸ್ಥಿರತೆಯನ್ನು ಕಾಯ್ದುಕೊಳ್ಳುವ ಪ್ರಯತ್ನಗಳು ಆಆರ್ಥಿಕ ಸ್ಥಿರತೆಗೆ ಸಹಾಯ ಮಾಡುತ್ತದೆ ಎಂದು ಕೂಡಾ ತಿಳಿಸಿದ್ದಾರೆ.

ರೆಪೋ ದರ ಎಂದರೇನು?

ರೆಪೋ ದರ ಎಂದರೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ದೇಶದ ವಾಣಿಜ್ಯ ಬ್ಯಾಂಕುಗಳಿಗೆ ಕೊಡುವ ಸಾಲದ ಮೇಲಿನ ಬಡ್ಡಿ ದರವೇ ರೆಪೋ ರೇಟ್. ವಾಣಿಜ್ಯ ಬ್ಯಾಂಕುಗಳು ತಮ್ಮಲ್ಲಿ ಹಣದ ಕೊರತೆಯಾದಾಗ ಆರ್‌ಬಿಐನಿಂದ ಹಣ ಪಡೆಯುತ್ತವೆ. ಈ ಹಣಕ್ಕೆ ಬಡ್ಡಿ ನೀಡುವ ದರ ಇದಾಗಿದೆ.

ರೆಪೋ ದರವನ್ನು ಹೇಗೆ ವಿಧಿಸಲಾಗುತ್ತದೆ?

ತಾತ್ಕಾಲಿಕ ಅವಧಿಯ ಅಗತ್ಯ ಪೂರೈಸಲು ಭಾರತೀಯ ರಿಸರ್ವ್ ಬ್ಯಾಂಕಿನಿಂದ ಬ್ಯಾಂಕುಗಳು ಫಂಡ್ ಪಡೆಯುತ್ತವೆ. ಬ್ಯಾಂಕುಗಳು ಪಡೆದ ಸಾಲದ ಮೇಲೆ ಆರ್‌ಬಿಐ ಕೊಂಚ ಬಡ್ಡಿದರ ವಿಧಿಸುತ್ತದೆ. ಈ ಬಡ್ಡಿದರವನ್ನೇ ರೆಪೋ ದರವಾಗಿದೆ. ಬ್ಯಾಂಕುಗಳಿಗೆ ಸಾಲ ಪಡೆಯುವುದು ಹೆಚ್ಚು ಕಠಿಣಗೊಳಿಸಲು ಆರ್‌ಬಿಐ ಇಚ್ಚಿಸಿದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವೂ ರೆಪೋ ದರಗಳನ್ನು ಹೆಚ್ಚಿಸುತ್ತದೆ. ರೆಪೋ ದರ ತಗ್ಗಿಸಿದರೆ ಬ್ಯಾಂಕುಗಳು ಆರ್‌ಬಿಐನಿಂದ ಕಡಿಮೆ ಬಡ್ಡಿದರಕ್ಕೆ ಸಾಲ ಪಡೆಯಬಹುದಾಗಿದೆ. ದೇಶದ ಒಟ್ಟಾರೆ ಬ್ಯಾಂಕಿಂಗ್ ಕ್ಷೇತ್ರದ ಹೃದಯದ ಬಡಿತವು ರೆಪೋ ದರದ ಜೊತೆ ಮಿಡಿಯುತ್ತದೆ.

English summary

RBI Repo Rate: Repo rate hike by 40 bps to 4.40 percent with immediate effect

RBI Repo Rate: Repo rate hike by 40 bps to 4.40 percent with immediate effect.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X