For Quick Alerts
ALLOW NOTIFICATIONS  
For Daily Alerts

ಡಿಸೆಂಬರ್‌ 1ರಿಂದ ರಿಟೇಲ್ ಡಿಜಿಟಲ್ ರೂಪಾಯಿ ಆರಂಭ, ಹೇಗೆ ಬಳಸುವುದು?

|

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮಂಗಳವಾರ ರಿಟೇಲ್ ಡಿಜಿಟಲ್ ರೂಪಾಯಿ (e₹-R) ಅನ್ನು ಡಿಸೆಂಬರ್ 1ರಿಂದ ಪ್ರಾಯೋಗಿಕವಾಗಿ ಆರಂಭ ಮಾಡಲಿದೆ. ಈ ಬಗ್ಗೆ ಆರ್‌ಬಿಐ ಪ್ರಕಟಣೆಯನ್ನು ಹೊರಡಿಸಿದೆ.

 

ಕೆಲವು ಪ್ರದೇಶಗಳಲ್ಲಿ ರಿಟೇಲ್ ಡಿಜಿಟಲ್ ರೂಪಾಯಿಯನ್ನು ಪ್ರಾಯೋಗಿಕವಾಗಿ ಬಳಕೆ ಮಾಡಲಾಗುತ್ತದೆ. ಡಿಜಿಟಲ್ ರೂಪಾಯಿ ಆರಂಭ ಮಾಡಲಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಳೆದ ಕೇಂದ್ರ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು. ಈಗ ಅದನ್ನು ಜಾರಿ ಮಾಡಲಾಗುತ್ತಿದೆ.

ಡಿಜಿಟಲ್ ರುಪಾಯಿ ಯಾಕೆ ಮುಖ್ಯ? ಪ್ರಮುಖ ಕಾರಣಗಳು ಇಲ್ಲಿವೆಡಿಜಿಟಲ್ ರುಪಾಯಿ ಯಾಕೆ ಮುಖ್ಯ? ಪ್ರಮುಖ ಕಾರಣಗಳು ಇಲ್ಲಿವೆ

ಈ ಪ್ರಾಯೋಗಿಕ ಯೋಜನೆ ಎಲ್ಲ ಪ್ರದೇಶದಲ್ಲಿ ಇರುವುದಿಲ್ಲ. ಮೊದಲು ಕೆಲವು ಪ್ರದೇಶಗಳಲ್ಲಿ ಮಾತ್ರ ಆರಂಭ ಮಾಡಲಾಗುತ್ತದೆ. ಹಂತ ಹಂತವಾಗಿ ಪ್ರಯೋಗವನ್ನು ವಿಸ್ತರಣೆ ಮಾಡಲಾಗುತ್ತದೆ. ಯಾವೆಲ್ಲ ಬ್ಯಾಂಕ್‌ಗಳ ಮೂಲಕ, ಯಾವೆಲ್ಲ ಪ್ರದೇಶದಲ್ಲಿ, ಗ್ರಾಹಕರು ಇದನ್ನು ಹೇಗೆ ಬಳಕೆ ಮಾಡಲು ಸಾಧ್ಯವಾಗುತ್ತದೆ ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

 ಯಾವೆಲ್ಲ ಬ್ಯಾಂಕ್‌ಗಳ ಮೂಲಕ ಆರಂಭ?

ಯಾವೆಲ್ಲ ಬ್ಯಾಂಕ್‌ಗಳ ಮೂಲಕ ಆರಂಭ?

ಪ್ರಮುಖವಾಗಿ ಮೊದಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಐಸಿಐಸಿಐ ಬ್ಯಾಂಕ್, ಯೆಸ್‌ ಬ್ಯಾಂಕ್, ಐಡಿಎಫ್‌ಸಿ ಬ್ಯಾಂಕ್‌ ಮೂಲಕ ಪ್ರಮುಖ ನಾಲ್ಕು ನಗರಗಳಲ್ಲಿ ಈ ರಿಟೇಲ್ ಡಿಜಿಟಲ್ ರೂಪಾಯಿ ಪ್ರಾಯೋಗಿಕ ಬಳಕೆ ಆರಂಭಿಸಲಾಗುತ್ತದೆ. ಬ್ಯಾಂಕ್ ಆಫ್‌ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್ ಹಂತ ಹಂತವಾಗಿ ಈ ಪ್ರಕ್ರಿಯೆಗೆ ಜೊತೆಯಾಗಲಿದೆ.

 ಯಾವೆಲ್ಲ ನಗರದಲ್ಲಿ ಈ ಡಿಜಿಟಲ್ ರು ಪ್ರಾಯೋಗಿಕ ಆರಂಭ?

ಯಾವೆಲ್ಲ ನಗರದಲ್ಲಿ ಈ ಡಿಜಿಟಲ್ ರು ಪ್ರಾಯೋಗಿಕ ಆರಂಭ?

ಮೊದಲು ಪ್ರಮುಖವಾಗಿ ನಾಲ್ಕು ನಗರಗಳಲ್ಲಿ ಈ ರಿಟೇಲ್ ಡಿಜಿಟಲ್ ರೂಪಾಯಿ ಪ್ರಾಯೋಗಿಕವಾಗಿ ಆರಂಭ ಮಾಡಲಾಗುತ್ತದೆ. ನವದೆಹಲಿ, ಬೆಂಗಳೂರು, ಮುಂಬೈ, ಭುವನೇಶ್ವರದಲ್ಲಿ ಮೊದಲು ಆರಂಭ ಮಾಡಲಾಗುತ್ತದೆ. ಬಳಿಕ ಅಹಮದಾಬಾದ್, ಗಾಂಗ್ಟಾಕ್, ಗುವಾಹಟಿ, ಹೈದಾರಾಬಾದ್, ಇಂದೋರ್, ಕೊಚ್ಚಿ, ಲಕ್ನೋ, ಪಾಟ್ನಾ, ಶಿಮ್ಲಾದಲ್ಲಿ ರಿಟೇಲ್ ಡಿಜಿಟಲ್ ರೂಪಾಯಿ ಆರಂಭ ಮಾಡಲಾಗುತ್ತದೆ. ಬಳಿಕ ಇನ್ನಷ್ಟು ಪ್ರದೇಶ, ಬ್ಯಾಂಕ್‌ಗಳಿಗೆ ವಿಸ್ತರಣೆ ಮಾಡಲಾಗುತ್ತದೆ.

 ಬಳಕೆ ಮಾಡುವುದು ಹೇಗೆ?
 

ಬಳಕೆ ಮಾಡುವುದು ಹೇಗೆ?

ಈ ಡಿಜಿಟಲ್ ರೂಪಾಯಿ ಡಿಜಿಟಲ್ ವ್ಯಾಲೆಟ್ ರೂಪದಲ್ಲಿರುತ್ತದೆ. ಇದು ಬ್ಯಾಂಕ್‌ಗಳು ನೀಡುವ ಪೇಪರ್ ಕರೆನ್ಸಿಯ ಡಿಜಿಟಲ್ ರೂಪಾಂತರವಾಗಿದೆ. ಸರಳವಾಗಿ ಹೇಳುವುದಾದರೆ ಇದು ಹಣದ ಎಲೆಕ್ಟ್ರಾನಿಕ್ ರೂಪವಾಗಿದೆ. ಬ್ಯಾಂಕ್‌ಗಳು ನೀಡುವ ಡಿಜಿಟಲ್ ವ್ಯಾಲೆಟ್‌ನಲ್ಲಿರುವ ಈ ಡಿಜಿಟಲ್ ರೂಪಾಯಿಯನ್ನು ಗ್ರಾಹಕರು ಮೊಬೈಲ್‌ ಫೋನ್‌ಗಳ ಮೂಲಕ ಬಳಕೆ ಮಾಡಬಹುದು. ಇದರ ಮೂಲಕ ನಾವು ವ್ಯಕ್ತಿಯಿಂದ ವ್ಯಕ್ತಿಗೆ ಅಥವಾ ವ್ಯಕ್ತಿಯಿಂದ ವ್ಯಾಪಾರಿಗೆ ವಹಿವಾಟನ್ನು ನಡೆಸಲು ಸಾಧ್ಯವಾಗುತ್ತದೆ. ಇನ್ನು ಕ್ಯೂಆರ್‌ ಕೋಡ್ ಬಳಸಿಕೊಂಡು ಕೂಡಾ ಹಣ ಸಂದಾಯ ಮಾಡಬಹುದು.

English summary

RBI To Launch First Pilot For Retail Digital Rupee On Dec 1, How to Use it?

The reserve Bank of India on Tuesday said the first pilot for retail digital rupee (e₹-R) will be launched on December 01. How to Use it?. explained in kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X