For Quick Alerts
ALLOW NOTIFICATIONS  
For Daily Alerts

ದುಬೈನಲ್ಲಿ ರಿಯಲ್ ಎಸ್ಟೇಟ್ ಹತ್ತು ವರ್ಷಗಳ ಹಿಂದಿನ ಸ್ಥಿತಿಗೆ

|

ಕೊರೊನಾದಿಂದ ನಡುಗುತ್ತಿರುವ ವಿಶ್ವದ ಹಲವು ದೇಶಗಳು ಒಂದು ಕಡೆ ಇವೆ. ಮರಳುಗಾಡಿನಲ್ಲಿ ಇಂದ್ರನ 'ಅಮರಾವತಿ'ಯನ್ನು ನಾಚಿಸುವಂತೆ ಇರುವ ದುಬೈ, ಅದೇ ಕೊರೊನಾಗೆ ಪತರುಗುಟ್ಟಿದೆ. ದುಬೈನಲ್ಲಿ ಆಸ್ತಿ ಮೌಲ್ಯ 10 ವರ್ಷಗಳ ಹಿಂದೆ ಎಷ್ಟಿತ್ತೋ ಅಲ್ಲಿಗೆ ಕುಸಿದಿದೆ ಎಂದು S&P ಗ್ಲೋಬಲ್ ರೇಟಿಂಗ್ಸ್ ತಿಳಿಸಿದೆ.

 

2010ರಲ್ಲಿ ತಲುಪಿದ್ದ ಹಂತಕ್ಕಿಂತ ಕೆಳಗೆ ಇವತ್ತಿನ ರಿಯಲ್ ಎಸ್ಟೇಟ್ ನಿಂತಿದೆ. ಹಣದುಬ್ಬರಕ್ಕೆ ಹೊಂದಾಣಿಕೆ ಮಾಡಿ ನೋಡಿದರೆ ಮತ್ತು ಕೆಲವು ಹೊಸ ಆಸ್ತಿಗಳಿಗೆ ಮಾರಾಟದ ಇನ್ಸೆಂಟಿವ್ ನೀಡುತ್ತೇವೆ ಎಂದಿರುವುದನ್ನು ಗಮನಿಸಿದರೆ ಆಗಿನ ಸ್ಥಿತಿಗಿಂತ ಆಸ್ತಿಗಳ ಮೌಲ್ಯದಲ್ಲಿ ಇಳಿಕೆ ಕಾಣುತ್ತಿದೆ. ಇದೇ ಸಂದರ್ಭದಲ್ಲಿ ಉದ್ಯೋಗದಲ್ಲಿ ನಕಾರಾತ್ಮಕ ಪರಿಣಾಮ ಆಗಿದೆ.

 
ದುಬೈನಲ್ಲಿ ರಿಯಲ್ ಎಸ್ಟೇಟ್ ಹತ್ತು ವರ್ಷಗಳ ಹಿಂದಿನ ಸ್ಥಿತಿಗೆ

ದುಬೈನಲ್ಲೂ ಸಹ ಕೊರೊನಾ ಆತಂಕಕ್ಕಾಗಿ ತಾತ್ಕಾಲಿಕವಾಗಿ ವ್ಯಾಪಾರ ವ್ಯವಹಾರಗಳು ಸ್ಥಗಿತವಾಗಬಹುದು. ಭವಿಷ್ಯದ ವಸತಿ ಯೋಜನೆಗಳ ನಿರ್ಮಾಣ ಕಾರ್ಯಗಳು ಕೂಡ ಇದರಿಂದ ವಿಳಂಬ ಆಗಬಹುದು. ಇದರಿಂದ ಬಿಲ್ಡರ್ಸ್ ಗಳಿಂದ ವರ್ಕಿಂಗ್ ಕ್ಯಾಪಿಟಲ್ (ದುಡಿಯುವ ಬಂಡವಾಳ) ಕೊರತೆ ಎದುರಾಗಬಹುದು ಎನ್ನಲಾಗುತ್ತಿದೆ.

English summary

Real Estate In Dubai Reached To 10 Years Before Situation

Dubai real estate sector hit badly. Down to 10 years before situation. Here is the details.
Story first published: Sunday, March 29, 2020, 17:16 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X