ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದ ಮೇಲೆ ಇದೇ ಮೊದಲ ಬಾರಿಗೆ ದೊಡ್ಡ ಕಾರ್ಪೊರೇಟ್ ಸಂಸ್ಥೆ ಹಾಗೂ ರೈತರ ಮಧ್ಯೆ ಅತಿ ದೊಡ್ಡ ವಹಿವಾಟು ನಡೆಯುತ್ತಿದೆ. ರಿಲಯನ್ಸ್ ರೀಟೇಲ್ ಲಿಮಿಟೆಡ್ ನಿಂದ ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ರೈತರಿಂದ 1000 ಕ್ವಿಂಟಲ್ ಸೋನಾ ಮಸೂರಿ ಭತ್ತವನ್ನು ಖರೀದಿ ಮಾಡಲಾಗುತ್ತಿದೆ.
ಹದಿನೈದು ದಿನಗಳ ಹಿಂದೆ ರಿಲಯನ್ಸ್ ಜತೆ ನೋಂದಣಿ ಮಾಡಿರುವ ಏಜೆಂಟರು ಸ್ವಾಸ್ಥ್ಯ ಫಾರ್ಮರ್ಸ್ ಪ್ರೊಡ್ಯೂಸಿಂಗ್ ಕಂಪೆನಿ (SFPC) ಜತೆಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಅಂದ ಹಾಗೆ ಎಸ್ ಎಫ್ ಪಿಸಿ ಮೂಲಭೂತವಾಗಿ ತೈಲದ ವ್ಯವಹಾರ ನಡೆಸುತ್ತದೆ. ಅದೀಗ ಭತ್ತದ ಸಂಗ್ರಹ ಮತ್ತು ಮಾರಾಟದಲ್ಲಿ ತೊಡಗಿದೆ.
ಹತ್ತಿರ ಹತ್ತಿರ ಸಾವಿರದ ನೂರು ಭತ್ತದ ಬೆಳೆಗಾರರು ಅದರ ಬಳಿ ನೋಂದಣಿ ಮಾಡಿದ್ದಾರೆ. ಬೆಳೆಯಲ್ಲಿ 16%ಗಿಂತ ಕಡಿಮೆ ತೇವಾಂಶ ಇರಬೇಕು ಎಂದು ರಿಲಯನ್ಸ್ ರೀಟೇಲ್ ಹೇಳಿತ್ತು. ಇನ್ನು ಕಂಪೆನಿಯಿಂದ ಒಂದು ಕ್ಬಿಂಟಲ್ ಸೋನಾ ಮಸೂರಿಗೆ ರು. 1950 ನಿಗದಿ ಮಾಡಲಾಗಿತ್ತು. ಈ ಮೊತ್ತವು ಸರಕಾರ ನಿಗದಿ ಮಾಡಿದ ಕನಿಷ್ಠ ಬೆಂಬಲ ಬೆಲೆ ರು. 1868ಕ್ಕಿಂತ 82 ರುಪಾಯಿ ಹೆಚ್ಚು.
ಎಸ್ ಎಫ್ ಪಿಸಿ ಹಾಗೂ ರೈತರ ಸಂಸ್ಥೆಗಳ ಜತೆ ಒಪ್ಪಂದವಾಗಿದೆ. ಆ ಪ್ರಕಾರ ರೈತರು ಪ್ರತಿ 100 ರುಪಾಯಿಗೆ 1.5 ರು. ಕಮಿಷನ್ ನೀಡಬೇಕು. ಇನ್ನು ಬೆಳೆಯ ಪ್ಯಾಕ್ ಗೆ ಮತ್ತು ಅದನ್ನು ಸಿಂಧನೂರಿಗೆ ಸಾಗಿಸಲು ಆಗುವ ವೆಚ್ಚವನ್ನು ರೈತರೇ ಭರಿಸಬೇಕು ಎಂದು ಮಾತಾಗಿದೆ.

ಎಸ್ ಎಫ್ ಪಿಸಿ ಕಾರ್ಯನಿರ್ವಾಹಕ ನಿರ್ದೇಶಕ ಮಲ್ಲಿಕಾರ್ಜುನ್ ವಲ್ಕಲ್ ದಿನ್ನಿ ಮಾತನಾಡಿ, ಗೋದಾಮಿನಲ್ಲಿ ಸಂಗ್ರಹವಾಗಿರುವ ಭತ್ತದ ಗುಣಮಟ್ಟವನ್ನು ಮೂರನೇ ವ್ಯಕ್ತಿಗಳು ಪರೀಕ್ಷಿಸುತ್ತಾರೆ. ಒಂದು ಸಲ ಗುಣಮಟ್ಟವು ಸಮಾಧಾನಕರವಾಗಿದ್ದಲ್ಲಿ ರಿಲಯನ್ಸ್ ಏಜೆಂಟರು ಪಡೆದುಕೊಳ್ಳುತ್ತಾರೆ ಎಂದಿದ್ದಾರೆ.
ಸದ್ಯಕ್ಕೆ ಐನೂರು ಕ್ವಿಂಟಲ್ ಭತ್ತ ಗೋದಾಮಿನಲ್ಲಿ ಸಂಗ್ರಹವಾಗಿದೆ. ಯಾವುದೇ ಸಮಯದಲ್ಲಿ ಖರೀದಿ ಆಗಬಹುದು. ಒಂದು ಸಲ ಬೆಳೆ ಸಂಗ್ರಹ ಪಡೆದ ಮೇಲೆ ರಿಲಯನ್ಸ್ ನಿಂದ ಎಸ್ ಎಫ್ ಪಿಸಿಗೆ ಆನ್ ಲೈನ್ ಮೂಲಕ ಹಣ ವರ್ಗಾವಣೆ ಮಾಡಲಾಗುತ್ತದೆ. ಆ ನಂತರ ರೈತರ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಯಾವುದೇ ಹಂತದಲ್ಲಿ ಬೆಳೆಯಲ್ಲಿ ಬದಲಾವಣೆ ಮಾಡಬಾರದು ಎಂಬ ಕಾರಣಕ್ಕೆ ಭತ್ತ ಸಾಗಿಸುವ ವಾಹನಕ್ಕೆ ಜಿಪಿಎಸ್ ಬಳಸಲಾಗುವುದು ಎಂದು ಮಲ್ಲಿಕಾರ್ಜುನ್ ಹೇಳಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಚಾಮರಸ ಮಾಲಿಪಾಟೀಲ್ ಮಾತನಾಡಿ, ಕಾರ್ಪೊರೇಟ್ ಕಂಪೆನಿಗಳು ಮೊದಮೊದಲಿಗೆ ಸರಕಾರದ ಕನಿಷ್ಠ ಬೆಂಬಲ ಬೆಲೆಗಿಂತ ಹೆಚ್ಚಿನ ಮೊತ್ತ ನೀಡಿ, ಎಪಿಎಂಸಿ ಮಂಡಿಗೆ ಹೊಡೆತ ನೀಡುತ್ತದೆ. ಆ ನಂತರ ರೈತರ ಶೋಷಣೆ ಮಾಡುತ್ತವೆ. ಈ ತಂತ್ರದ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?



Click it and Unblock the Notifications