For Quick Alerts
ALLOW NOTIFICATIONS  
For Daily Alerts

ಮಾರುಕಟ್ಟೆ ನಿರೀಕ್ಷೆಗೆ ಮೀರಿ ಮೊದಲ ತ್ರೈ ಮಾಸಿಕದಲ್ಲಿ ಲಾಭ ಗಳಿಸಿದ ರಿಲಯನ್ಸ್

|

ಮಾರುಕಟ್ಟೆ ಬಂಡವಾಳ ಮೌಲ್ಯದಲ್ಲಿ ದೇಶದ ಅತಿ ದೊಡ್ಡ ಲಿಸ್ಟೆಡ್ ಕಂಪೆನಿ ರಿಲಯನ್ಸ್ ಇಂಡಸ್ಟ್ರೀಸ್ (RIL) 2020- 21ನೇ ಸಾಲಿನ ಏಪ್ರಿಲ್- ಜೂನ್ ತ್ರೈಮಾಸಿಕದಲ್ಲಿ ನಿರೀಕ್ಷೆಗೂ ಮೀರಿ ಅದ್ಭುತ ಹಣಕಾಸು ಫಲಿತಾಂಶ ನೀಡಿದೆ. ಗುರುವಾರ (ಜುಲೈ 30, 2020) ಫಲಿತಾಂಶ ಪ್ರಕಟಿಸಿದ್ದು, ಒಟ್ಟಾರೆ 13,248 ಕೋಟಿ ರುಪಾಯಿ ಲಾಭ ಗಳಿಸಿದೆ.

 

5 ದಿನದಲ್ಲಿ ರಿಲಯನ್ಸ್ ಬಂಡವಾಳ ಮೌಲ್ಯ 1.48 ಲಕ್ಷ ಕೋಟಿ ರುಪಾಯಿ ಹೆಚ್ಚಳ5 ದಿನದಲ್ಲಿ ರಿಲಯನ್ಸ್ ಬಂಡವಾಳ ಮೌಲ್ಯ 1.48 ಲಕ್ಷ ಕೋಟಿ ರುಪಾಯಿ ಹೆಚ್ಚಳ

ಈ ತ್ರೈಮಾಸಿಕದಲ್ಲಿ ಕಾರ್ಯ ನಿರ್ವಹಣೆಯಿಂದ ಬಂದಿರುವ ಆದಾಯ 88,253 ಕೋಟಿ ರುಪಾಯಿ. ಬ್ಲೂಮ್ ಬರ್ಗ್ ನಡೆಸಿದ ಹತ್ತು ಬ್ರೋಕರ್ ಗಳ ಸಮೀಕ್ಷೆ ಪ್ರಕಾರ, 7,119 ಕೋಟಿ ರುಪಾಯಿ ನಿವ್ವಳ ಲಾಭ ಬರಬಹುದು ಎಂಬ ಅಂದಾಜು ಮಾಡಲಾಗಿತ್ತು. ಕಳೆದ ವರ್ಷ ಇದೇ ಅವಧಿಗೆ 10,104 ಕೋಟಿ ರುಪಾಯಿ ಲಾಭ ಗಳಿಸಿತ್ತು ರಿಲಯನ್ಸ್.

 
ಮಾರುಕಟ್ಟೆ ನಿರೀಕ್ಷೆಗೆ ಮೀರಿ ಲಾಭ ಗಳಿಸಿದ ರಿಲಯನ್ಸ್

ಹನ್ನೊಂದು ವಿಶ್ಲೇಷಕರ ಅಭಿಪ್ರಾಯದ ಪ್ರಕಾರ, ನಿವ್ವಳ ಮಾರಾಟ 1 ಲಕ್ಷ ಕೋಟಿ ರುಪಾಯಿ ಆಗಬಹುದು ಎಂದಿದ್ದರು. ಇನ್ನು ಫಲಿತಾಂಶಕ್ಕೆ ಘೋಷಣೆಗೆ ಮುನ್ನ ರಿಲಯನ್ಸ್ ಇಂಡಸ್ಟ್ರೀಸ್ ಷೇರು ಗುರುವಾರ ಬಿಎಸ್ ಇಯಲ್ಲಿ 2,108.65 ರುಪಾಯಿಯಲ್ಲಿ ವಹಿವಾಟು ಮುಗಿಸಿದೆ. 2020ನೇ ಇಸವಿಯಲ್ಲಿ ಇಲ್ಲಿಯ ತನಕ ರಿಲಯನ್ಸ್ ಷೇರಿನ ಬೆಲೆ 39% ಹೆಚ್ಚಳ ಆಗಿದೆ. ಇನ್ನು ಏಪ್ರಿಲ್ ನಿಂದ ಜೂನ್ ತ್ರೈಮಾಸಿಕದಲ್ಲಿ 54% ಏರಿಕೆ ಕಂಡಿದೆ.

ರಿಲಯನ್ಸ್ ಜಿಯೋ ನಿವ್ವಳ ಲಾಭ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 183% ಏರಿಕೆ ಆಗಿದ್ದು, ಏಪ್ರಿಲ್ ನಿಂದ ಜೂನ್ ತ್ರೈಮಾಸಿಕಕ್ಕೆ 2520 ಕೋಟಿ ಗಳಿಸಿದೆ. ತಲಾ ಬಳಕೆದಾರರ ಸರಾಸರಿ ಆದಾಯ (ARPU) 7.5 ಪರ್ಸೆಂಟ್ ಏರಿಕೆಯಾಗಿ, 140.3 ರುಪಾಯಿ ಮುಟ್ಟಿದೆ. ವರ್ಕ್ ಫ್ರಮ್ ಹೋಮ್ ನಿಂದ ಈ ತ್ರೈಮಾಸಿಕದಲ್ಲಿ ಡೇಟಾ ಬಳಕೆ ಹೆಚ್ಚಾಗಿದೆ. ಕಳೆದ ವರ್ಷಕ್ಕೆ ಇದೇ ಅವಧಿಗೆ ಹೋಲಿಸಿದಲ್ಲಿ ಈ ಬಾರಿ ಒಟ್ಟಾರೆ 30.2 ಪರ್ಸೆಂಟ್, ಅಂದರೆ 1420 ಕೋಟಿ GB ಡೇಟಾ ಬಳಕೆ ಆಗಿದೆ.

English summary

Reliance FY21 Q1 Results Beat Market Expectation

Reliance Industries (RIL) result announced on July 30. Numbers beat market expectation. Here is the results.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X