For Quick Alerts
ALLOW NOTIFICATIONS  
For Daily Alerts

ಫಾರ್ಚೂನ್ ಇಂಡಿಯಾ- 500: ಸತತ ಎರಡನೇ ವರ್ಷ ರಿಲಯನ್ಸ್ ಮೊದಲ ಸ್ಥಾನ

|

ಫಾರ್ಚೂನ್ ಇಂಡಿಯಾ- 500ರ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಸತತ ಎರಡನೇ ವರ್ಷ ಮೊದಲ ಸ್ಥಾನದಲ್ಲಿದೆ. ಈ ವರ್ಷ ಐಒಸಿ ಮೊದಲ ಬಾರಿಗೆ ಮೇಲ್ಮಟ್ಟಕ್ಕೆ ಏರಿದೆ. 2019- 20ರ ಹಣಕಾಸು ವರ್ಷದಲ್ಲಿನ ಆದಾಯ ಮತ್ತು ಸಂಖ್ಯೆಯನ್ನು ಫಾರ್ಚೂನ್ ಇಂಡಿಯಾ- 500ರ ಪಟ್ಟಿ ಸಿದ್ಧಪಡಿಸಲಾಗಿದೆ.

ಈ ಪಟ್ಟಿಯಲ್ಲಿ 38 ಕಂಪೆನಿಗಳಿದ್ದು, ಈ ಕಂಪೆನಿಗಳ ಆದಾಯ ತಲಾ 50,000 ಕೋಟಿ ರುಪಾಯಿಗೂ ಹೆಚ್ಚಿದ್ದು, ಈ ವರ್ಷದಲ್ಲಿ ಒಟ್ಟಾರೆ ಆದಾಯದ ಪೈಕಿ ಶೇಕಡಾ 60ರಷ್ಟು ಇವುಗಳದೇ ಆಗಿದೆ ಎಂದು ಫಾರ್ಚೂನ್ ಇಂಡಿಯಾ ಹೇಳಿದೆ. 39 ಕಂಪೆನಿಗಳು 3000 ಕೋಟಿ ರುಪಾಯಿಗೂ ಕಡಿಮೆ ಆದಾಯ ವರದಿ ಮಾಡಿವೆ.

ಬಿಲ್ ಗೇಟ್ಸ್ ನ ಬ್ರೇಕ್ ಥ್ರೂ ಎನರ್ಜಿ ವೆಂಚರ್ಸ್ ನಲ್ಲಿ ರಿಲಯನ್ಸ್ 50 ಮಿಲಿಯನ್ USD ಹೂಡಿಕೆಬಿಲ್ ಗೇಟ್ಸ್ ನ ಬ್ರೇಕ್ ಥ್ರೂ ಎನರ್ಜಿ ವೆಂಚರ್ಸ್ ನಲ್ಲಿ ರಿಲಯನ್ಸ್ 50 ಮಿಲಿಯನ್ USD ಹೂಡಿಕೆ

ಒಟ್ಟಾರೆ ಆದಾಯದ ಪೈಕಿ ಶೇಕಡಾ 62ರಷ್ಟು ಹಾಗೂ ಒಟ್ಟಾರೆ ಲಾಭದಲ್ಲಿ 76ರಷ್ಟು 303 ಉತ್ಪಾದನಾ ಕಂಪೆನಿಗೆ ಸಂಬಂಧಿಸಿದ್ದು. ಸೇವಾ ವಲಯದಲ್ಲಿ 145 ಕಂಪೆನಿಗಳು ಒಟ್ಟಾರೆ ಆದಾಯದಲ್ಲಿ 33 ಪರ್ಸೆಂಟ್ ಹಾಗೂ ಒಟ್ಟು ಲಾಭದಲ್ಲಿ 19 ಪರ್ಸೆಂಟ್ ಕೊಡುಗೆ ನೀಡಿವೆ.

ಫಾರ್ಚೂನ್ ಇಂಡಿಯಾ- 500: ಸತತ ಎರಡನೇ ವರ್ಷ ರಿಲಯನ್ಸ್ ಮೊದಲ ಸ್ಥಾನ

ಫಾರ್ಚೂನ್ ಇಂಡಿಯಾ- 500ರ ಟಾಪ್ 10 ಕಂಪೆನಿಗಳು
* ರಿಲಯನ್ಸ್ ಇಂಡಸ್ಟ್ರೀಸ್

* ಇಂಡಿಯನ್ ಆಯಿಲ್ ಕಾರ್ಪೊರೇಷನ್

* ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್

* ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

* ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್

* ಟಾಟಾ ಮೋಟಾರ್ಸ್

* ರಾಜೇಶ್ ಎಕ್ಸ್ ಪೋರ್ಟ್ಸ್

* ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್

* ಐಸಿಐಸಿಐ ಬ್ಯಾಂಕ್

* ಲಾರ್ಸನ್ ಅಂಡ್ ಟೂಬ್ರೋ

English summary

Reliance Industries Continued In Top Position In Fortune India- 500 List

Here is the top 10 list of Fortune India- 500. Reliance Industries continued in top position.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X