For Quick Alerts
ALLOW NOTIFICATIONS  
For Daily Alerts

ರಿಲಯನ್ಸ್ ಜಿಯೋ: ಪ್ರಿಪೇಯ್ಡ್‌ನಿಂದ ಪೋಸ್ಟ್‌ಪೇಯ್ಡ್‌ಗೆ ಬದಲಾಗುವುದು ಹೇಗೆ?

|

ಭಾರತದ ಅಗ್ರಮಾನ್ಯ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ರಿಲಯನ್ಸ್ ಜಿಯೋ 2016 ರಲ್ಲಿ ಪ್ರಾರಂಭವಾದಾಗಿನಿಂದ, ಅತಿ ಕಡಿಮೆ ಅವಧಿಯಲ್ಲಿ ದೊಡ್ಡ ಮಟ್ಟಿಗೆ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಪ್ರಸ್ತುತ, ಜಿಯೋ ದೇಶದ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿದ್ದು, ಹೆಚ್ಚಿನ ಸಂಖ್ಯೆಯ ಚಂದಾದಾರರನ್ನು ಹೊಂದಿದೆ.

 

ಜಿಯೋ ಅವರ ಪ್ರಿಪೇಯ್ಡ್ ಜೊತೆಗೆ, ಪೋಸ್ಟ್ ಪೇಯ್ಡ್ ಗ್ರಾಹಕರ ಸಂಖ್ಯೆಯೂ ತುಂಬಾ ಹೆಚ್ಚಾಗಿದೆ. ಗ್ರಾಹಕರ ಅನುಕೂಲಕ್ಕಾಗಿ, ಜಿಯೋ ಇತ್ತೀಚೆಗೆ ತನ್ನ ಪೋಸ್ಟ್‌ಪೇಯ್ಡ್ ಯೋಜನೆಗಳಲ್ಲಿ ಬದಲಾವಣೆಗಳನ್ನು ಮಾಡಿದೆ. ಇದರ ಪೋಸ್ಟ್‌ಪೇಯ್ಡ್ ಯೋಜನೆಗಳು ಮಾಸಿಕ 199 ರೂ. ಆಗಿದ್ದು, ನೀವು ಜಿಯೋ ಪ್ರಿಪೇಯ್ಡ್ ಬಳಕೆದಾರರಾಗಿದ್ದರೆ ಮತ್ತು ಕಂಪನಿಯ ಪೋಸ್ಟ್‌ಪೇಯ್ಡ್ ನೆಟ್‌ವರ್ಕ್‌ಗೆ ಹೋಗಲು ಬಯಸಿದರೆ, ಅದನ್ನು ಬದಲಾಯಿಸುವುದು ಹೇಗೆ ಎಂಬುದನ್ನು ಈ ಕೆಳಗೆ ನಿಮಗೆ ತಿಳಿಸಲಾಗಿದೆ.

ಜಿಯೋ ಪೋಸ್ಟ್‌ಪೇಯ್ಡ್‌ ಬಗ್ಗೆ ತಿಳಿದುಕೊಳ್ಳಿ

ಜಿಯೋ ಪೋಸ್ಟ್‌ಪೇಯ್ಡ್‌ ಬಗ್ಗೆ ತಿಳಿದುಕೊಳ್ಳಿ

ಪೋಸ್ಟ್‌ಪೇಯ್ಡ್‌ಗೆ ಬದಲಾಯಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುವ ಮೊದಲು, ಜಿಯೋನ ಪೋಸ್ಟ್‌ಪೇಯ್ಡ್‌ನಲ್ಲಿ ಲಭ್ಯವಿರುವ ಎಲ್ಲಾ ಯೋಜನೆಗಳನ್ನು ತಿಳಿದುಕೊಳ್ಳುವುದು ಅವಶ್ಯಕ. ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್ ಯೋಜನೆಗಳು ತಿಂಗಳಿಗೆ 199 ರೂ. ಆಗಿದೆ. ಇತರೆ ಪೋಸ್ಟ್‌ಪೇಯ್ಡ್ ಯೋಜನೆಗಳು ತಿಂಗಳಿಗೆ 1,499 ರೂ. ನಷ್ಟಿದ್ದು, ಪ್ರಿಪೇಯ್ಡ್ ಗ್ರಾಹಕರನ್ನು ಮುಂಚಿತವಾಗಿ ಮರುರೀಚಾರ್ಜ್ ಮಾಡಬೇಕಾಗಿದೆ. ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್‌ಗೆ ಬದಲಾಯಿಸಲು, ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಜಿಯೋ ಪೋಸ್ಟ್‌ಪೇಯ್ಡ್‌ ಪ್ಲಸ್‌ ವೆಬ್‌ಸೈಟ್‌ಗೆ ಭೇಟಿ ನೀಡಿ

ಜಿಯೋ ಪೋಸ್ಟ್‌ಪೇಯ್ಡ್‌ ಪ್ಲಸ್‌ ವೆಬ್‌ಸೈಟ್‌ಗೆ ಭೇಟಿ ನೀಡಿ

ಮೊದಲು ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್ ವೆಬ್‌ಸೈಟ್‌ಗೆ ಹೋಗಿ. ನಿಮ್ಮ ಹೆಸರು ಮತ್ತು ನೋಂದಾಯಿತ ಜಿಯೋ ಪ್ರಿಪೇಯ್ಡ್ ಸಂಖ್ಯೆಯನ್ನು ಇಲ್ಲಿ ನಮೂದಿಸಿ. ನಿಮ್ಮ ಮೊಬೈಲ್ ಸಂಖ್ಯೆಗೆ ಬಂದ ಒಟಿಪಿಯನ್ನ ನಮೂದಿಸಿ. ನಿಮ್ಮ ಹೊಸ ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್ ಸಿಮ್ ಡೆಲಿವರಿ ಅಡ್ರೆಸ್‌ ಅನ್ನು ನಮೂದಿಸಿ. ನಂತರ ಹೊಸ ಸಿಮ್ ವಿನಂತಿಯನ್ನು ಕ್ಲಿಕ್ ಮಾಡಿ.

ಜಿಯೋ ಕಂಪನಿಗೆ ಸಂಬಂಧಪಟ್ಟಂತಹ ಕಾರ್ಯ ನಿರ್ವಾಹಕರು ಮೂರು- ನಾಲ್ಕು ದಿನಗಳಲ್ಲಿ ನಿಮ್ಮ ಮನೆಗೆ ಬರುತ್ತಾರೆ. ಪ್ರೂಫ್ ಆಫ್ ಐಡೆಂಟಿಟಿ (ಪಿಒಐ) ಮತ್ತು ವಿಳಾಸದ ಪುರಾವೆ (ಪಿಒಎ) ನಂತಹ ದಾಖಲೆಗಳನ್ನು ಪರಿಶೀಲಿಸುವ ಮೂಲಕ ಅವರು ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿದ್ದಾರೆ. ಅಗತ್ಯವಿರುವ ದಾಖಲೆಗಳಲ್ಲಿ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್ ಮತ್ತು ಚಾಲನಾ ಪರವಾನಗಿ ಸೇರಿವೆ.

ಹೊಸ ಸಿಮ್‌ ಪಡೆಯಿರಿ
 

ಹೊಸ ಸಿಮ್‌ ಪಡೆಯಿರಿ

ಜಿಯೋಗೆ ಸಂಬಂಧಪಟ್ಟ ಕಾರ್ಯ ನಿರ್ವಾಹಕರು ನಿಮಗೆ ಹೊಸ ಜಿಯೋ ಪೋಸ್ಟ್‌ಪೇಯ್ಡ್‌ ಪ್ಲಸ್‌ ಸಿಮ್‌ ಅನ್ನು ನೀಡಲಿದ್ದು, ಇದನ್ನು ಸುಮಾರು 24 ಗಂಟೆಗಳಲ್ಲಿ ಸಕ್ರಿಯಗೊಳಿಸಬಹುದು. ಜಿಯೋ ಭದ್ರತಾ ಠೇವಣಿಗೆ 250 ರೂ. ಮತ್ತು ಜಿಯೋ ಪ್ರೈಮ್‌ಗೆ 99 ರೂ. ನೀಡಬೇಕಾಗುತ್ತದೆ. ಇಲ್ಲವೆ ಹತ್ತಿರದ ಜಿಯೋ ಸೆಂಟರ್‌ಗೆ ಹೋಗಿ ಫಾರ್ಮ್‌ ಭರ್ತಿ ಮಾಡಿ, ಅಗತ್ಯ ಕೆವೈಸಿ ದಾಖಲೆಗಳನ್ನು ಸಲ್ಲಿಸಿದ ಬಳಿಕ ಹೊಸ ಪೋಸ್ಟ್‌ಪೇಯ್ಡ್ ಸಿಮ್ ಪಡೆಯಬಹುದು.

ಪೋಸ್ಟ್‌ಪೇಯ್ಡ್ ಯೋಜನೆ 199 ರೂ.

ಪೋಸ್ಟ್‌ಪೇಯ್ಡ್ ಯೋಜನೆ 199 ರೂ.

ಜಿಯೋ ಅಗ್ಗದ ಪೋಸ್ಟ್‌ಪೇಯ್ಡ್ ಯೋಜನೆ 199 ರೂ. ಆಗಿದ್ದು, ಈ ಯೋಜನೆಯಲ್ಲಿ ನೀವು ಒಟ್ಟು 25 ಜಿಬಿ ಡೇಟಾವನ್ನು ಪಡೆಯುತ್ತೀರಿ. ಅದೇ ಸಮಯದಲ್ಲಿ, ನೀವು 199 ರೂಗಳಿಗೆ ಅನಿಯಮಿತ ಕರೆ ಸೌಲಭ್ಯದೊಂದಿಗೆ, ಪ್ರತಿದಿನ 100 ಎಸ್‌ಎಂಎಸ್ ಸಹ ಪಡೆಯುತ್ತೀರಿ. ಇದಲ್ಲದೆ, ಜಿಯೋ ಅಪ್ಲಿಕೇಶನ್‌ಗಳ ಉಚಿತ ಚಂದಾದಾರಿಕೆ ಸಹ ಲಭ್ಯವಿರುತ್ತದೆ.

English summary

Reliance Jio: How To Change From Prepaid To Postpaid

Here the details of how to swich from prepaid to postpaid reliance jio sim
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X