For Quick Alerts
ALLOW NOTIFICATIONS  
For Daily Alerts

2500ರಿಂದ 3000 ರುಪಾಯಿಗೆ ರಿಲಯನ್ಸ್ ಜಿಯೋದಿಂದ 5G ಸ್ಮಾರ್ಟ್ ಫೋನ್

|

ರಿಲಯನ್ಸ್ ಜಿಯೋದಿಂದ 5G ಸ್ಮಾರ್ಟ್ ಫೋನ್ ಅನ್ನು 5,000 ರುಪಾಯಿಯೊಳಗೆ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದೆ. ಮತ್ತು ಉತ್ಪಾದನೆ ಹೆಚ್ಚಾಗುತ್ತಾ ಹೋದಂತೆ ಕ್ರಮೇಣ ಬೆಲೆಯನ್ನು 2500ರಿಂದ 3000 ರುಪಾಯಿಗೆ ಇಳಿಸಲಾಗುತ್ತದೆ ಎಂದು ಕಂಪೆನಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸದ್ಯಕ್ಕೆ 2G ಸಂಪರ್ಕ ಬಳಸುತ್ತಿರುವವರನ್ನೇ ಕಂಪೆನಿಯು 20ರಿಂದ 30 ಕೋಟಿ ಮಂದಿಯನ್ನು ಗುರಿಯಾಗಿ ಇರಿಸಿಕೊಂಡಿದೆ. "ಜಿಯೋದಿಂದ 5000 ರುಪಾಯಿಗಿಂತ ಕಡಿಮೆ ಬೆಲೆ ಮೊಬೈಲ್ ಫೋನ್ ತರಲು ಬಯಸಿದೆ. ಯಾವಾಗ ಮಾರಾಟ ಪ್ರಮಾಣ ಹೆಚ್ಚಾಗುತ್ತದೋ ಆಗ 2500ರಿಂದ 3000 ರುಪಾಯಿಗೆ ಬರಲಿದೆ," ಎಂದು ಗುರುತು ಬಹಿರಂಗ ಮಾಡಲು ಇಚ್ಛೆ ಪಡಿಸದ ಅಧಿಕಾರಿಗಳು ತಿಳಿಸಿದ್ದಾರೆ.

ರಿಲಯನ್ಸ್ ಜಿಯೋಗೆ ಈಗ 40.8 ಕೋಟಿ ಚಂದಾದಾರರುರಿಲಯನ್ಸ್ ಜಿಯೋಗೆ ಈಗ 40.8 ಕೋಟಿ ಚಂದಾದಾರರು

ಈ ಬಗ್ಗೆ ಇಮೇಲ್ ನಲ್ಲಿ ಕೇಳಿರುವ ಪ್ರಶ್ನೆಗೆ ಯಾವುದೇ ಉತ್ತರ ನೀಡಿಲ್ಲ. ಸದ್ಯಕ್ಕೆ ಭಾರತದಲ್ಲಿ 5G ಸ್ಮಾರ್ಟ್ ಫೋನ್ ನ ಆರಂಭಿಕ ಬೆಲೆ 27,000 ರುಪಾಯಿ ಇದೆ. ಭಾರತದಲ್ಲಿ 4G ಮೊಬೈಲ್ ಫೋನ್ ಗೆ ಮೊದಲು ಉಚಿತವಾಗಿ ನೀಡಿದ್ದು ಜಿಯೋ. ಆ ಜಿಯೋ ಫೋನ್ ಗೆ ಗ್ರಾಹಕರು 1500 ರುಪಾಯಿಯ ರೀಫಂಡಬಲ್ ಡೆಪಾಸಿಸಿಟ್ ಪಾವತಿಸಬೇಕು.

2500ರಿಂದ 3000 ರುಪಾಯಿಗೆ ರಿಲಯನ್ಸ್ ಜಿಯೋದಿಂದ 5G ಸ್ಮಾರ್ಟ್ ಫೋನ್

43ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ್ದ ಮುಕೇಶ್ ಅಂಬಾನಿ, ಭಾರತವನ್ನು 2G ಮುಕ್ತ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಸದ್ಯಕ್ಕೆ 35 ಕೋಟಿಯಷ್ಟಿರುವ 2G ಬಳಕೆದಾರರಿಗೆ ಕೈಗೆಟುಕುವ ದರದಲ್ಲಿ ಸ್ಮಾರ್ಟ್ ಫೋನ್ ನೀಡುವುದಾಗಿ ಹೇಳಿದ್ದಾರೆ.

ಯಾವಾಗ ಜಿಯೋ ಪ್ಲಾಟ್ ಫಾರ್ಮ್ ನಲ್ಲಿ ಗೂಗಲ್ ನಿಂದ 7.7 ಪರ್ಸೆಂಟ್- 33,737 ಕೋಟಿ ಹೂಡಿಕೆ ಮಾಡಿತ್ತೋ ಆಗ ಮಾತನಾಡಿದ್ದ ಮುಕೇಶ್ ಅಂಬಾನಿ, ಯುಎಸ್ ಟೆಕ್ ದೈತ್ಯ ಗೂಗಲ್ ಜತೆಗೆ ಸೇರಿ, ಕೈಗೆಟುಕುವ ದರದಲ್ಲಿ ಆಂಡ್ರಾಯಿಡ್ ಆಧಾರಿತ ಸ್ಮಾರ್ಟ್ ಫೋನ್ ಉತ್ಪಾದಿಸುವುದಾಗಿ ಹೇಳಿದ್ದರು.

English summary

Reliance Jio Planning To Sell 5G Smartphone For 2500 To 3000, Sources Said

India's leading telecom operator Reliance Jio planning to sell 5G smart phone for 2500 to 3000, according to sources.
Story first published: Sunday, October 18, 2020, 17:13 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X