For Quick Alerts
ALLOW NOTIFICATIONS  
For Daily Alerts

ಡಿಜಿಟಲ್ ವ್ಯವಹಾರಗಳಿಂದ ರಿಲಯನ್ಸ್‌ ರೀಟೈಲ್‌ಗೆ ಶೇ. 10ರಷ್ಟು ಆದಾಯ

|

ಕೋವಿಡ್-19 ಸಾಂಕ್ರಾಮಿಕದ ಅಡಚಣೆಗಳು ಮತ್ತು ನಿರ್ಬಂಧಗಳ ಫಲವಾಗಿ ಡಿಜಿಟಲ್‌ ವ್ಯವಹಾರ ಮತ್ತು ವ್ಯಾಪಾರಿ ಪಾಲುದಾರಿಕೆ ವ್ಯವಹಾರವು ಗಮನಾರ್ಹ ವೇಗವನ್ನು ಪಡೆದುಕೊಂಡಿದೆ. 2021ನೇ ಸಾಲಿನ ಹಣಕಾಸು ವರ್ಷದಲ್ಲಿ ರಿಲಯನ್ಸ್‌ ರೀಟೈಲ್‌ನ ಒಟ್ಟು 1,53,818 ಕೋಟಿ ರೂ. ಆದಾಯದಲ್ಲಿ ಶೇ. 10ರಷ್ಟು ಪಾಲು ಡಿಜಿಟಲ್‌ ವ್ಯವಹಾರ ಮತ್ತು ವ್ಯಾಪಾರ ಪಾಲುದಾರಿಕೆ ಮೂಲದಿಂದಲೇ ಬಂದಿದೆ.

ರಿಲಯನ್ಸ್ ಇಂಡಸ್ಟ್ರೀಸ್‌ನ ಇತ್ತೀಚಿನ ವಾರ್ಷಿಕ ವರದಿಯ ಪ್ರಕಾರ, "ಕಳೆದ ವರ್ಷ ಈ ಬಾಬ್ತಿನಿಂದ ಬಂದ ಶೂನ್ಯ ಆದಾಯಕ್ಕೆ ಹೋಲಿಸಿದರೆ, ಪ್ರಸಕ್ತ ಸಾಲಿನಲ್ಲಿ ಈ ಮೂಲದ ಆದಾಯದಲ್ಲಿ ಗಮನಾರ್ಹವಾಗಿ ಏರಿಕೆ" ಆಗಿದೆ.

2021ನೇ ಹಣಕಾಸು ವರ್ಷದಲ್ಲಿ ರಿಲಯನ್ಸ್‌ ರೀಟೈಲ್ 1,53,818 ಕೋಟಿ ರೂ.ಗಳ ಆದಾಯ ಮತ್ತು 9,842 ಕೋಟಿ ರೂ.ಗಳ ತೆರಿಗೆ ಪೂರ್ವ ಲಾಭವನ್ನು ವರದಿ ಮಾಡಿದೆ.

ಡಿಜಿಟಲ್ ವ್ಯವಹಾರಗಳಿಂದ ರಿಲಯನ್ಸ್‌ ರೀಟೈಲ್‌ಗೆ ಶೇ. 10ರಷ್ಟು ಆದಾಯ

"ಡಿಜಿಟಲ್ ವಾಣಿಜ್ಯವು ಗಮನಾರ್ಹ ವೇಗವನ್ನು ಪಡೆಯಲು ಲಾಕ್‌ಡೌನ್ /ನಿರ್ಬಂಧಗಳೇ ಕಾರಣವಾಗಿದ್ದು, ಈ ವ್ಯಾಪಾರ ಮಾರ್ಗವು ಮತ್ತಷ್ಟು ಬಲಿಷ್ಠವಾಗಿ ಉಳಿಯುವ, ಬೆಳೆಯುವ ಸಾಧ್ಯತೆಯಿದೆ,ʼʼ ಎಂದು ಆನ್‌ಲೈನ್ ವ್ಯಾಪಾರ ಬೆಳವಣಿಗೆ ಕುರಿತು ಸಂಸ್ಥೆಯು ಮುನ್ನೋಟ ಒದಗಿಸಿದೆ.

ಹಣಕಾಸು ವರ್ಷ 2021ರಲ್ಲಿ, ತನ್ನ ಡಿಜಿಟಲ್ ವಾಣಿಜ್ಯ ಮತ್ತು ಬಹು-ಮಾರ್ಗಗಳ ವ್ಯಾಪಾರ ಸಾಮರ್ಥ್ಯಗಳನ್ನು ಬಲಪಡಿಸಿಕೊಳ್ಳುವುದರ ಜೊತೆಗೆ, ಬದಲಾಗುತ್ತಿರುವ ಗ್ರಾಹಕರ ನಡವಳಿಕೆ ಹಾಗೂ ವ್ಯಾಪಾರ ಮಾದರಿಯ ಅಗತ್ಯಗಳನ್ನು ಪೂರೈಸಲು ಕೃತಕ ಬುದ್ಧಿಮತ್ತೆ (ಎಐ) ಮತ್ತು ಮೆಷಿನ್ ಲರ್ನಿಂಗ್ (ಎಂಎಲ್) ನಂತಹ ಇತ್ತೀಚಿನ ತಂತ್ರಜ್ಞಾನಗಳನ್ನು ಸಂಸ್ಥೆಯು ಅಳವಡಿಸಿಕೊಂಡಿತು. ಗ್ರಾಹಕರ ವರ್ತನೆ ಬಗ್ಗೆ ಪೂರ್ವಭಾವಿ ಒಳನೋಟಗಳನ್ನು ಪಡೆಯಲು ಇದೇ ತಂತ್ರಜ್ಞಾನಗಳನ್ನು ಮತ್ತಷ್ಟು ವ್ಯಾಪಕವಾಗಿ ಬಳಸಿಕೊಳ್ಳಲು ಸಂಸ್ಥೆಯು ಯೋಜಿಸಿದೆ.

ಸಂಸ್ಥೆಯು ಡಿಜಿಟಲ್ ವೇದಿಕೆಗಳಲ್ಲಿ ಪಡೆದ ಅರ್ಧಕ್ಕಿಂತ ಹೆಚ್ಚು ಆರ್ಡರ್‌ಗಳು ಎರಡನೇ ಮತ್ತು ಸಣ್ಣ ಶ್ರೇಣಿಯ ಪಟ್ಟಣಗಳಿಂದ ಬಂದಿವೆ. ಅಲ್ಲದೆ, ವಿಶೇಷವಾಗಿ ಸಣ್ಣ ಪಟ್ಟಣಗಳಲ್ಲಿ ಭೌತಿಕ ಮಳಿಗೆಗಳ ಮೂಲಕ ವ್ಯಾಪಾರ ವಿಸ್ತರಣೆಗೆ ಇರುವ ವಿಫುಲ ಅವಕಾಶವನ್ನು ಬಳಸಿಕೊಳ್ಳಲು ಸಂಸ್ಥೆಯು ಯೋಜಿಸಿದೆ.

English summary

Reliance Retail Got 10% Revenue In Fy21 From Digital Commerce and Merchant Partnerships

Reliance Retail Got 10 Percent Revenue In Fy21 From Digital Commerce and Merchant Partnerships
Story first published: Friday, June 4, 2021, 16:22 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X