For Quick Alerts
ALLOW NOTIFICATIONS  
For Daily Alerts

ಅಕ್ಟೋಬರ್ ರಿಟೇಲ್ ಹಣದುಬ್ಬರ 3 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆ, ಎಷ್ಟಿದೆ?

|

ಸೆಪ್ಟೆಂಬರ್‌ ತಿಂಗಳು ಭಾರೀ ಏರಿಕೆಯಾಗಿದ್ದ ರಿಟೇಲ್ ಹಣದುಬ್ಬರ ಅಕ್ಟೋಬರ್‌ನಲ್ಲಿ ದಿಢೀರ್ ಕುಸಿತ ಕಂಡಿದೆ. ಅಕ್ಟೋಬರ್ ರಿಟೇಲ್ ಹಣದುಬ್ಬರ ಇಳಿದಿದೆ. ಸೆಪ್ಟೆಂಬರ್‌ನಲ್ಲಿ ಐದು ತಿಂಗಳ ಗರಿಷ್ಠ ಮಟ್ಟ ಶೇಕಡ 7.41ಕ್ಕೆ ಏರಿದ್ದ ರಿಟೇಲ್ ಹಣದುಬ್ಬರ ಅಕ್ಟೋಬರ್‌ನಲ್ಲಿ ಶೇಕಡ 6.77ಕ್ಕೆ ಇಳಿದಿದೆ.

ಆಹಾರ ಬೆಲೆಯು ಕೊಂಚ ಇಳಿಕೆಯಾಗುತ್ತಿರುವ ನಡುವೆ ಈ ಬೆಳವಣಿಗೆ ಕಂಡು ಬಂದಿದೆ. ಆದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಶೇಕಡ 2-6ರಷ್ಟರ ಗರಿಷ್ಠ ಮಿತಿಗಿಂತ ಹೆಚ್ಚೇ ಇದೆ. ರಾಷ್ಟ್ರೀಯ ಅಂಕಿಅಂಶಗಳ ಕಚೇರಿ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ ಸೆಪ್ಟೆಂಬರ್‌ನಲ್ಲಿ ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರ (ಸಿಪಿಐ) ಆಗಸ್ಟ್‌ನ ಶೇಕಡ 7ಕ್ಕಿಂತ ಹೆಚ್ಚಳವಾಗಿದೆ.

ಅಕ್ಟೋಬರ್‌ನಲ್ಲಿ ಹಣದುಬ್ಬರ ಶೇ. 6.7ಕ್ಕೆ ಇಳಿದಿದೆಯೇ?ಅಕ್ಟೋಬರ್‌ನಲ್ಲಿ ಹಣದುಬ್ಬರ ಶೇ. 6.7ಕ್ಕೆ ಇಳಿದಿದೆಯೇ?

ಸೆಪ್ಟೆಂಬರ್‌ನಲ್ಲಿ ಶೇಕಡ 7.41ಕ್ಕೆ ಏರಿಕೆಯಾಗಿದ್ದು ಇದು ಒಂದು ವರ್ಷದ ಬಳಿಕ ಭಾರೀ ಹೆಚ್ಚಳವಾಗಿದೆ. ಆದರೆ ಅಕ್ಟೋಬರ್‌ನಲ್ಲಿ ಇಳಿಕೆಯಾಗಿದೆ. ಈ ಬೆಳವಣಿಗೆಯ ನಡುವೆ ಆರ್‌ಬಿಐ ಮುಂದಿನ ತಿಂಗಳ ಎಂಪಿಸಿ ಸಭೆಯ ಬಳಿಕ ರೆಪೋ ದರವನ್ನು ಮತ್ತೆ ಹೆಚ್ಚಳ ಮಾಡುವ ಸಾಧ್ಯತೆ ಇದೆಯೇ ಎಂಬ ಚರ್ಚೆಗಳು ಕೂಡಾ ಆರಂಭವಾಗಿದೆ.

ಅಕ್ಟೋಬರ್ ರಿಟೇಲ್ ಹಣದುಬ್ಬರ 3 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆ

ರೆಪೋ ದರದ ಮೇಲೆ ಯಾವ ಪರಿಣಾಮ?

ಆರ್‌ಬಿಐ ಹಣದುಬ್ಬರವನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಮೇ ತಿಂಗಳಿನಿಂದ ಈವರೆಗೆ 4 ಬಾರಿ ಆರ್‌ಬಿಐ ರೆಪೋ ದರವನ್ನು ಹೆಚ್ಚಳ ಮಾಡಿದೆ. 2019ರ ಬಳಿಕ ಮೊದಲ ಬಾರಿಗೆ ಆರ್‌ಬಿಐ ರೆಪೋ ದರ ಅಷ್ಟು ಹೆಚ್ಚಳ ಮಾಡಿದೆ. ಪ್ರಸ್ತುತ ರೆಪೋ ದರ ಶೇಕಡ 5.9ಕ್ಕೆ ತಲುಪಿದೆ. ಆದರೆ ಹಣದುಬ್ಬರದ ಮೇಲೆ ಹೆಚ್ಚಿನ ಪ್ರಭಾವ ಉಂಟಾಗದ ಕಾರಣ ಈ ತಿಂಗಳ ಆರಂಭದ ವಾರದಲ್ಲಿ ಸಭೆಯನ್ನು ನಡೆಸಿದೆ.

ಆಗಲೇ ದರ ಹೆಚ್ಚಿಸಿದ್ದರೆ ಆರ್ಥಿಕತೆ ಪೂರ್ತಿ ಕುಸಿಯುತ್ತಿತ್ತು: ಆರ್‌ಬಿಐ ಗವರ್ನರ್ಆಗಲೇ ದರ ಹೆಚ್ಚಿಸಿದ್ದರೆ ಆರ್ಥಿಕತೆ ಪೂರ್ತಿ ಕುಸಿಯುತ್ತಿತ್ತು: ಆರ್‌ಬಿಐ ಗವರ್ನರ್

ಆರ್‌ಬಿಐ ಇನ್ನು ಒಂದು ತಿಂಗಳ ಒಳಗೆ ಕೇಂದ್ರ ಸರ್ಕಾರಕ್ಕೆ ಹಣದುಬ್ಬರದ ಬಗ್ಗೆ ಸಂಪೂರ್ಣ ವರದಿಯನ್ನು ಸಲ್ಲಿಸಲಿದೆ. ಇದರಲ್ಲಿ ಹಣದುಬ್ಬರ ನಿಯಂತ್ರಣಕ್ಕೆ ಸರ್ಕಾರ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಸಲಹೆ ನೀಡಲಾಗುತ್ತದೆ. ಹಾಗೆಯೇ ಪರಿಸ್ಥಿತಿಯನ್ನು ವಿವರಿಸಲಾಗಿರುತ್ತದೆ. ಈಗ ಹಣದುಬ್ಬರ ಇಳಿಕೆಯಾಗಿದೆ. ಈ ಸ್ಥಿತಿಯನ್ನು ಕಾಪಾಡಿಕೊಳ್ಳಲು ಆರ್‌ಬಿಐ ಮುಂದಿನ ದಿನಗಳಲ್ಲಿ ಏನು ಕ್ರಮಕೈಗೊಳ್ಳಲಿದೆ ಎಂದು ಕಾದುನೋಡಬೇಕು.

ಈ ಹಿಂದೆಯೇ ಅಭಿಪ್ರಾಯಪಟ್ಟಿದ್ದ ತಜ್ಞರು

ಸೆಪ್ಟೆಂಬರ್ ತಿಂಗಳಲ್ಲಿ ಶೇ. 7.41ರಷ್ಟಿದ್ದ ಹಣದುಬ್ಬರ ದರ ಅಕ್ಟೋಬರ್ ತಿಂಗಳಲ್ಲಿ ಗಣನೀಯವಾಗಿ ಇಳಿಯಬಹುದು ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದರು. ಹಾಗೆಯೇ ಬಾರ್‌ಕ್ಲೇಸ್, ಐಡಿಎಫ್‌ಸಿ, ಕೋಟಕ್ ಮಹೀಂದ್ರ ಬ್ಯಾಂಕ್, ಎಚ್‌ಡಿಎಫ್‌ಸಿ, ಸೊಸೈಟೆ ಜನರೇಲ್ ಸೇರಿದಂತೆ 16 ವಿವಿಧ ಆರ್ಥಿಕ ತಜ್ಞರು ಅಂದಾಜು ಮಾಡಿದ ಸರಾಸರಿಯನ್ನು ನೋಡಿಕೊಂಡು ಅಕ್ಟೋಬರ್ ತಿಂಗಳಲ್ಲಿ ಹಣದುಬ್ಬರ ದರ ಶೇ. 6.7ಕ್ಕೆ ಬಂದು ನಿಲ್ಲಬಹುದು ಎಂದು ಹೇಳಲಾಗಿತ್ತು.

English summary

Retail Inflation Eases To 6.77 Percent in October, Here's Details in Kannada

Retail inflation, based on the consumer price index (CPI), Eases To 6.77 Percent in October, It is lowest in 3 months.
Story first published: Monday, November 14, 2022, 19:13 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X