For Quick Alerts
ALLOW NOTIFICATIONS  
For Daily Alerts

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಷೇರುಲಾಭಾಂಶ ಘೋಷಣೆ ಸಾಧ್ಯತೆ

|

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌(ಆರ್‌ಐಎಲ್‌) ಗುರುವಾರ ಕಂಪನಿಯ ಷೇರು ವಿತರಣೆ ಮಾಡುವ ಕುರಿತು ಪರಿಗಣಿಸುವ ನಿರೀಕ್ಷೆ ಇದೆ. ಸಾಲವನ್ನು ತಗ್ಗಿಸಿಕೊಳ್ಳುವ ಪ್ರಯತ್ನದ ಭಾಗವಾಗಿ ಈ ನಿರ್ಧಾರಕ್ಕೆ ಮುಂದಾಗಿದೆ.

 

ಕಂಪನಿಯ ಆಡಳಿತ ಮಂಡಳಿಯು ಗುರುವಾರ ಸಭೆ ಸೇರಲಿದ್ದು, ಮಾರ್ಚ್‌ 31ರ ಅಂತ್ಯದ ಆರ್ಥಿಕ ಫಲಿತಾಂಶಕ್ಕೆ ಒಪ್ಪಿಗೆ ನೀಡಲಿದೆ. ಲಾಭಾಂಶ ನೀಡುವ ಬಗ್ಗೆಯೂ ಶಿಫಾರಸು ಮಾಡಲಿದೆ. ಈ ಕುರಿತು ಷೇರುಪೇಟೆಗೆ ಮಾಹಿತಿ ನೀಡಿದೆ.

 
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್  ಷೇರುಲಾಭಾಂಶ ಘೋಷಣೆ ನಿರೀಕ್ಷೆ

2021ರ ವೇಳೆಗೆ ಸಾಲವನ್ನು ಶೂನ್ಯಕ್ಕೆ ಇಳಿಸುವ ಯೋಜನೆಯನ್ನು 2019ರ ಆಗಸ್ಟ್‌ನಲ್ಲಿಯೇ ಮುಕೇಶ್ ಅಂಬಾನಿ ತಿಳಿಸಿದ್ದರು. ಈ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ. ಹಕ್ಕಿನ ಷೇರು ವಿತರಣೆ ಮೂಲಕ ಸದ್ಯದ ವಹಿವಾಟು ದರದಲ್ಲಿ 40 ಸಾವಿರ ಕೋಟಿ ಸಂಗ್ರಹವಾಗುವ ಸಾಧ್ಯತೆ ಇದೆ.

ಈಕ್ವಿಟಿ ಡಿಲ್ಷೂಷನ್ 2.5 ರಿಂದ 5 ಪರ್ಸೆಂಟ್ ನಡುವೆ ಇದ್ದರೆ ರಿಲಯನ್ಸ್ ಇಂಡಸ್ಟ್ರೀಸ್ 16,600 ರಿಂದ 35,600 ಕೋಟಿಗಳನ್ನು ಸಂಗ್ರಹಿಸಬಹುದು ಎಂದು ಸೆಂಟ್ರಮ್ ಬ್ರೋಕಿಂಗ್ ನಂಬಿದೆ, ಮತ್ತು ಇದು ಪ್ರಸ್ತುತ ಮಾರುಕಟ್ಟೆ ಬೆಲೆಗೆ 20 ರಿಂದ 25 ಪರ್ಸೆಂಟ್ ರಿಯಾಯಿತಿ ದರದಲ್ಲಿರುತ್ತದೆ.

5 ಪ್ರತಿಶತದಷ್ಟು ಇಕ್ವಿಟಿ ಡಿಲ್ಷೂಷನ್ (ದುರ್ಬಲಗೊಳಿಸುವಿಕೆ) ಎಂದರೆ ಪ್ರತಿ ಷೇರುದಾರರು ತಾವು ಹೊಂದಿರುವ ಪ್ರತಿ 100 ಕ್ಕೆ ಐದು ಷೇರುಗಳನ್ನು ಪಡೆಯುತ್ತಾರೆ. 2019 ರ ಡಿಸೆಂಬರ್ ಅಂತ್ಯದ ವೇಳೆಗೆ, ಮುಖೇಶ್ ಅಂಬಾನಿ ಕುಟುಂಬವು ಆರ್‌ಐಎಲ್‌ನಲ್ಲಿ 50.03 ಪರ್ಸೆಂಟ್‌ರಷ್ಟು ಪಾಲನ್ನು ಹೊಂದಿದ್ದರೆ, ವಿದೇಶಿ ಬಂಡವಾಳ ಹೂಡಿಕೆದಾರರು 24.51 ಪರ್ಸೆಂಟ್ ಹೊಂದಿದ್ದರೆ, ಉಳಿದವುಗಳನ್ನು ಮ್ಯೂಚುವಲ್ ಫಂಡ್‌ಗಳು ಮತ್ತು ಇತರರು ಹೊಂದಿದ್ದಾರೆ.

English summary

Right Issue Could Help RIL Net Debt Free By March 2021

RIL proposed rights issue could help the Mukesh Ambani-controlled oil, technology and retail conglomerate reduce debt and create a buffer to cushion the impact of Covid-19
Story first published: Wednesday, April 29, 2020, 10:26 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X