For Quick Alerts
ALLOW NOTIFICATIONS  
For Daily Alerts

ರಿಲಯನ್ಸ್ ಇಂಡಸ್ಟ್ರೀಸ್‌ಗೆ Q1ರಲ್ಲಿ YoYರಂತೆ ಶೇ 24ರಷ್ಟು ನಿವ್ವಳ ಲಾಭ

|

ಮುಂಬೈ, ಜುಲೈ 22: ರಿಲಯನ್ಸ್ ಇಂಡಸ್ಟ್ರೀಸ್‌ ಆರ್ಥಿಕ ವರ್ಷ 2022-23 ರ ಮೊದಲ ತ್ರೈಮಾಸಿಕ ವರದಿಯನ್ನು ಜುಲೈ 22ರಂದು ಪ್ರಕಟಿಸಿದೆ. ಜೂನ್‌ 30, 2022ಕ್ಕೆ ಅಂತ್ಯವಾದ ಮೊದಲ ತ್ರೈಮಾಸಿಕದ ಹಣಕಾಸು ಫಲಿತಾಂಶ ವರದಿಯ ಮುಖ್ಯಾಂಶ ಇಲ್ಲಿದೆ. ಈ ತ್ರೈಮಾಸಿಕದಲ್ಲಿ ದಾಖಲೆಯ 17,955 ಕೋಟಿ ರೂ. ನಿವ್ವಳ ಲಾಭವನ್ನು ದಾಖಲಿಸಿದೆ.

ಕಳೆದ ವರ್ಷ ಇದೇ ತ್ರೈಮಾಸಿಕದ ಹೋಲಿಕೆಯಲ್ಲಿ ಇದು ಶೇ. 46.3ರಷ್ಟು ಏರಿಕೆ ಕಂಡಿದೆ. ಈ ಅವಧಿಯಲ್ಲಿ ಸಂಸ್ಥೆಯ ಒಟ್ಟಾರೆ ವರಮಾನ 242,982 ಕೋಟಿ ರೂ.ಗಳಾಗಿದ್ದು, ಒಟ್ಟು ವಾರ್ಷಿಕ ಬೆಳವಣಿಗೆಯು ಶೇ 54.5 ಆಗಿದೆ. ತ್ರೈಮಾಸಿಕದ ಕ್ರೋಢೀಕೃತ EBITDA 40,179 ಕೋಟಿ ರೂ. ಆಗಿದ್ದು, ವಾರ್ಷಿಕ ಹೋಲಿಕೆಯಲ್ಲಿ ಇದು 45.80 ಕೋಟಿ ಹೆಚ್ಚಳ ಕಂಡಿದೆ. ಇನ್ನು ತ್ರೈಮಾಸಿಕದಲ್ಲಿ ನಿವ್ವಳ ಲಾಭ 4,335 ಕೋಟಿ ರು ದಾಖಲಾಗಿದ್ದು, ವರ್ಷದಿಂದ ವರ್ಷಕ್ಕೆ ಲೆಕ್ಕಾಚಾರದಂತೆ ಶೇ 24ರಷ್ಟು ಏರಿಕೆ ಕಂಡು ಬಂದಿದೆ.

RILನಿಂದ 100 ಬಿಲಿಯನ್ ಡಾಲರ್‌ಗಿಂತ ಹೆಚ್ಚಿನ ವಾರ್ಷಿಕ ವರಮಾನRILನಿಂದ 100 ಬಿಲಿಯನ್ ಡಾಲರ್‌ಗಿಂತ ಹೆಚ್ಚಿನ ವಾರ್ಷಿಕ ವರಮಾನ

''ವಿವಿಧ ದೇಶಗಳ ರಾಜಕೀಯ ಸಂಘರ್ಷಗಳು ಇಂಧನ ಮಾರುಕಟ್ಟೆಯಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಿವೆ ಮತ್ತು ಸಾಂಪ್ರದಾಯಿಕ ವ್ಯಾಪಾರ ಹರಿವಿಗೆ ಅಡ್ಡಿ ಉಂಟು ಮಾಡಿವೆ. ಜೊತೆಗೆ ಬೇಡಿಕೆ ಹೆಚ್ಚಳವು ಇಂಧನ ಮಾರುಕಟ್ಟೆ ಸ್ಥಿತ್ಯಂತರವಾಗಿದೆ ಮತ್ತು ಉತ್ಪನ್ನದ ಮಾರ್ಜಿನ್‌ಗಳಲ್ಲಿ ಸುಧಾರಣೆ ಕಂಡುಬಂದಿದೆ. ಕಚ್ಚಾತೈಲ ಮಾರುಕಟ್ಟೆಯಿಂದ ಉಂಟಾಗಿರುವ ಸವಾಲುಗಳ ಮಧ್ಯೆಯೂ, ತೈಲ ವಹಿವಾಟು ಉತ್ತಮ ಕಾರ್ಯಕ್ಷಮತೆಯನ್ನು ತೋರಿಸಿದೆ'' ಎಂದು ರಿಲಯನ್ಸ್‌ ಇಂಡಸ್ಟ್ರೀಸ್‌ ಚೇರ್ಮನ್‌ ಮುಖೇಶ್ ಅಂಬಾನಿ ಹೇಳಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್‌ಗೆ Q1ರಲ್ಲಿ YoYರಂತೆ 24% ನಿವ್ವಳ ಲಾಭ

ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್:

ರಿಲಯನ್ಸ್ ಸಮೂಹದ ಅಂಗಸಂಸ್ಥೆ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ ಆರ್ಥಿಕ ವರ್ಷ 2022-23ರ ಒಂದನೇ ತ್ರೈಮಾಸಿಕದಲ್ಲಿ 4,530 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಇದು ವಾರ್ಷಿಕ ಹೋಲಿಕೆಯಲ್ಲಿ ಶೇ. 23.6 ಏರಿಕೆ ಕಂಡಿದ್ದು, ಎಬಿಟಾ ಮಾರ್ಜಿನ್‌ ಶೇ. 48.7 ಆಗಿದೆ. ತ್ರೈಮಾಸಿಕದ ಎಆರ್‌ಪಿಯು ರೂ. 175.70 ಮಾಸಿಕ ಆಗಿದ್ದು, ವಾರ್ಷಿಕ ಆಧಾರದಲ್ಲಿ ಶೇ. 27 ರಷ್ಟು ಪ್ರಗತಿ ಕಂಡುಬಂದಿದೆ ಮತ್ತು ತ್ರೈಮಾಸಿಕ ಆಧಾರದಲ್ಲಿ ಇದು 4.8 ಶೇ. ಆಗಿದೆ.

ರಿಲಯನ್ಸ್ ರೀಟೇಲ್:

ಇನ್ನು ರಿಲಯನ್ಸ್‌ ರಿಟೇಲ್‌ 20 ಕೋಟಿ ನೋಂದಾಯಿತ ಗ್ರಾಹಕರ ಮೈಲಿಗಲ್ಲನ್ನು ತಲುಪಿದೆ. ತ್ರೈಮಾಸಿಕದ ಕೊನೆಯಲ್ಲಿ ನೋಂದಾಯಿತ ಗ್ರಾಹಕರ ಸಂಖ್ಯೆ 208 ಮಿಲಿಯನ್‌ ಆಗಿದ್ದು, ಇದು ವಾರ್ಷಿಕ ಹೋಲಿಕೆಯಲ್ಲಿ 29% ಹೆಚ್ಚಳವಾಗಿದೆ. 2022-23 ರ ವಿತ್ತವರ್ಷದ ಮೊದಲ ತ್ರೈಮಾಸಿಕದಲ್ಲಿ ರೂ. 38,562 ಕೋಟಿ ರೂ. ಆದಾಯವನ್ನು ಇದು ಗಳಿಸಿದೆ. ಈ ತ್ರೈಮಾಸಿಕದ ಎಬಿಟಾ ರೂ. 3,837 ಕೋಟಿ ರೂ. ಆಗಿದ್ದು, ಇದು 97.7% ಹೆಚ್ಚಳವಾಗಿದೆ. ತ್ರೈಮಾಸಿಕದ ನಿವ್ವಳ ಲಾಭವು 2,061 ಕೋಟಿ ರೂ. ಆಗಿದ್ದು, 114.2% ರಷ್ಟು ಏರಿಕೆ ಕಂಡಿದೆ.

ಟಾಪ್ 10 ಕಂಪನಿಗಳ ಮೌಲ್ಯ: 6 ಕಂಪನಿ ಕೆಳಕ್ಕೆ, 4 ಕಂಪನಿ ಮೇಲಕ್ಕೆಟಾಪ್ 10 ಕಂಪನಿಗಳ ಮೌಲ್ಯ: 6 ಕಂಪನಿ ಕೆಳಕ್ಕೆ, 4 ಕಂಪನಿ ಮೇಲಕ್ಕೆ

ತ್ರೈಮಾಸಿಕದಲ್ಲಿ ರಿಲಯನ್ಸ್‌ ರಿಟೇಲ್‌ 720 ಸ್ಟೋರ್‌ಗಳನ್ನು ತೆರೆದಿದ್ದು, ದೇಶದ ಎಲ್ಲ ಮೂಲೆಗಳನ್ನೂ ಒಳಗೊಂಡು 43.2 ಮಿಲಿಯನ್‌ ಚದರಡಿ ಪ್ರದೇಶದಲ್ಲಿ ಒಟ್ಟು 15,916 ಸ್ಟೋರ್‌ಗಳನ್ನು ಹೊಂದಿದಂತಾಗಿದೆ. ಅಲ್ಲದೆ, 79 ಗೋದಾಮುಗಳು ಮತ್ತು ಫುಲ್‌ಫಿಲ್‌ಮೆಂಟ್‌ ಸೆಂಟರ್‌ಗಳನ್ನು ತೆರೆದಿದ್ದು, ತನ್ನ ಪೂರೈಕೆ ಸರಣಿ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ. ರಿಲಾಯನ್ಸ್‌ ರಿಟೇಲ್‌ ಡಿಜಿಟಲ್‌ ಕಾಮರ್ಸ್‌ನ ದೈನಂದಿ ಆರ್ಡರ್‌ಗಳು ವಾರ್ಷಿಕ ಹೋಲಿಕೆಯಲ್ಲಿ 66% ಕ್ಕೆ ಏರಿಕೆ ಕಂಡಿದೆ.

ರಿಲಯನ್ಸ್ ರೀಟೇಲ್ ಈ ತ್ರೈಮಾಸಿಕದಲ್ಲಿ 3,822 ಕೋಟಿ ರೂ.ಗಳ EBITDA ಹಾಗೂ 2,259 ಕೋಟಿ ರೂ.ಗಳ ನಿವ್ವಳ ಲಾಭ ಗಳಿಸಿದೆ. 14,412 ಕಾರ್ಯನಿರತ ಭೌತಿಕ ಮಳಿಗೆಗಳನ್ನು ನಿರ್ವಹಿಸುತ್ತಿರುವ ರಿಲಯನ್ಸ್ ರೀಟೇಲ್‌ನ ಜಾಲಕ್ಕೆ ಈ ತ್ರೈಮಾಸಿಕದಲ್ಲಿ 837 ಹೊಸ ಮಳಿಗೆಗಳು ಸೇರಿವೆ.

English summary

RIL (Q1 FY2022-23) Financial and Operational Performance Profit rises 24% YoY

RIL (Q1 FY2022-23) Financial and Operational Performance details here. Profit rises 24% YoY to Rs 4,335 crore
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X