For Quick Alerts
ALLOW NOTIFICATIONS  
For Daily Alerts

ಭಾರತದ ಅತಿ ದೊಡ್ಡ ರೈಟ್ಸ್ ಇಶ್ಯೂ ರಿಲಯನ್ಸ್ ಗೆ 1.59 ಪಟ್ಟು ಚಂದಾದಾರಿಕೆ

|

53,124.20 ಕೋಟಿ ರುಪಾಯಿಗಳ, ಭಾರತದಲ್ಲಿ ಈವರೆಗಿನ ಅತಿದೊಡ್ಡ ರೈಟ್ಸ್ ಇಶ್ಯೂವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದಾಗಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಬುಧವಾರ ಘೋಷಿಸಿದೆ. ಇದಕ್ಕೆ ಸುಮಾರು 1.59 ಪಟ್ಟು ಚಂದಾದಾರಿಕೆ ದೊರೆತಿದ್ದು, ಒಟ್ಟಾರೆ 84,000 ಕೋಟಿ ರುಪಾಯಿಗಳಿಗೂ ಹೆಚ್ಚಿನ ಕಮಿಟ್ ಮೆಂಟ್ ಪಡೆದುಕೊಂಡಿತ್ತು.

ಲಕ್ಷಾಂತರ ಸಣ್ಣ ಹೂಡಿಕೆದಾರರು ಹಾಗೂ ಸಾವಿರಾರು ದೇಶೀಯ- ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದಲೂ ಈ ರೈಟ್ಸ್ ಇಶ್ಯೂ ಬಗ್ಗೆ ಭಾರೀ ಆಸಕ್ತಿ ವ್ಯಕ್ತವಾಗಿತ್ತು. ರೈಟ್ಸ್ ಇಶ್ಯೂವಿನ ಸಾರ್ವಜನಿಕ ಭಾಗಕ್ಕೆ 1.22 ಪಟ್ಟು ಚಂದಾದಾರಿಕೆ ಲಭಿಸಿದೆ.

ರಿಲಯನ್ಸ್ ಜಿಯೋ ಫೈಬರ್ ಡೇಟಾ ಆಫರ್ ಗಳ ಸುರಿಮಳೆ: ಪ್ಲಾನ್ ಡೀಟೇಲ್ಸ್ರಿಲಯನ್ಸ್ ಜಿಯೋ ಫೈಬರ್ ಡೇಟಾ ಆಫರ್ ಗಳ ಸುರಿಮಳೆ: ಪ್ಲಾನ್ ಡೀಟೇಲ್ಸ್

ಈಕ್ವಿಟಿ ಷೇರುಗಳ ಹಂಚಿಕೆ 2020ರ ಜೂನ್ 10ರಂದು ಅಥವಾ ಆ ಸುಮಾರಿಗೆ ನಡೆಯಲಿದೆ. ರೈಟ್ಸ್ ಷೇರುಗಳನ್ನು ಬಿಎಸ್ ಇ ಮತ್ತು ಎನ್ ಎಸ್ ಇಯಲ್ಲಿ 2020ರ ಜೂನ್ 12ರಂದು ಅಥವಾ ಆ ಸುಮಾರಿಗೆ ಪ್ರತ್ಯೇಕ ಐಎಸ್ ಐಎನ್ ಅಡಿಯಲ್ಲಿ ಲಿಸ್ಟ್ ಮಾಡುವ ನಿರೀಕ್ಷೆಯಿದೆ.

ಭಾರತದ ದೊಡ್ಡ ರೈಟ್ಸ್ ಇಶ್ಯೂ ರಿಲಯನ್ಸ್ ಗೆ 1.59 ಪಟ್ಟು ಚಂದಾದಾರಿಕೆ

ಆರ್‌ ಐಎಲ್ ರೈಟ್ಸ್ ಇಶ್ಯೂವಿನ ಒಂದು ವೈಶಿಷ್ಟ್ಯ ಅಂದರೆ, ತನ್ನ ಅಗಾಧ ಗಾತ್ರದ ಹೊರತಾಗಿಯೂ ಅದು ಸಂಪೂರ್ಣವಾಗಿ ಡಿಜಿಟಲ್ ವೇದಿಕೆಯಲ್ಲಿ ಪೂರ್ಣಗೊಂಡಿತು ಹಾಗೂ ಲಾಕ್‌ಡೌನ್‌ ಸಂದರ್ಭದಲ್ಲಿ ವಿಧಿಸಲಾಗಿದ್ದ ಗಣನೀಯ ಪ್ರಮಾಣದ ನಿರ್ಬಂಧಗಳನ್ನು ಮೀರಿ ನಿಂತಿತು.

ಇದು ಭಾರತೀಯ ಮತ್ತು ಜಾಗತಿಕ ಬಂಡವಾಳ ಮಾರುಕಟ್ಟೆಗಳ ಇತಿಹಾಸದಲ್ಲಿ ಹೊಸ ದಾಖಲೆಯೂ ಆಗಿದೆ. ನಿಯಂತ್ರಕರು, ಬ್ಯಾಂಕರ್ ಗಳು, ಹಣಕಾಸು ಸಂಸ್ಥೆಗಳು, ಚಿಲ್ಲರೆ ಹೂಡಿಕೆದಾರರು ಮತ್ತಿತರ ಯಾವುದೇ ಪಾಲುದಾರರು ಭಾರತದಾದ್ಯಂತ 800 ನಗರಗಳು ಹಾಗೂ ವಿದೇಶದ ಅನೇಕ ಹಣಕಾಸು ಕೇಂದ್ರಗಳಲ್ಲಿ ತಮ್ಮ ಕಚೇರಿ ಅಥವಾ ಮನೆಗಳಿಂದ ಹೊರಬರುವ ಅಗತ್ಯ ಇಲ್ಲದಂತೆಯೇ ರೈಟ್ಸ್ ಇಶ್ಯೂಗೆ ಸಂಬಂಧಿಸಿದ ಎಲ್ಲವನ್ನೂ ಸುಗಮವಾಗಿ ಮತ್ತು ಅತ್ಯಂತ ಹೆಚ್ಚು ದಕ್ಷತೆಯೊಂದಿಗೆ ನಡೆಸಲಾಯಿತು.

ರೈಟ್ಸ್ ಇಶ್ಯೂವಿನ ಯಶಸ್ಸಿನ ಬಗ್ಗೆ ಪ್ರತಿಕ್ರಿಯಿಸಿದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ, "ಈ ರೈಟ್ಸ್ ಇಶ್ಯೂವಿನಲ್ಲಿ ಭಾಗವಹಿಸಿದ್ದಕ್ಕಾಗಿ ಮತ್ತು ಅದನ್ನು ಭಾರತದ ಬಂಡವಾಳ ಮಾರುಕಟ್ಟೆಯ ಇತಿಹಾಸದಲ್ಲಿ ಹೊಸ ಮತ್ತು ಹೆಮ್ಮೆಯ ಹೆಗ್ಗುರುತನ್ನಾಗಿ ಮಾಡಿದ್ದಕ್ಕಾಗಿ ನಮ್ಮ ಆತ್ಮೀಯ ಮತ್ತು ಗೌರವಾನ್ವಿತ ಷೇರುದಾರರಿಗೆ ನನ್ನ ಪ್ರಾಮಾಣಿಕ ಧನ್ಯವಾದಗಳನ್ನು ಅರ್ಪಿಸುತ್ತೇನೆ" ಎಂದಿದ್ದಾರೆ.

English summary

RIL’s Rights Issue Of 53,124 Crore; Subscribed 1.59 Times

Reliance Industries Limited Wednesday announced that, it has achieved successful closure of India’s largest ever Rights Issue of Rs. 53,124.20 crore. It was subscribed approximately 1.59 times.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X